ರಾಜಕೀಯ

ಎಲ್ಲಾ ರಾಜಕೀಯ ಸಮೀಕರಣಗಳನ್ನು ತಲೆಕೆಳಗು ಮಾಡುತ್ತೇನೆ: ವಿಶ್ವನಾಥ್

Shilpa D

ಹುಣಸೂರು: ಹುಣಸೂರು ವಿಧಾನಸಭೆ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಬಿಜೆಪಿ ಒಂದೇ ಒಂದು ಗೆಲುವನ್ನು ಕಂಡಿಲ್ಲ,  ಈ ಬಾರಿ ಉಪ ಚುನಾವಣೆಯಲ್ಲಿಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಚ್ ವಿಶ್ವನಾಥ್ ಗೆಲ್ಲುವ ಆತ್ಮ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಹುಣಸೂರಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ನಾನು ಉಪ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇನೆ, ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಬದಲಾಯಿಸುತ್ತೇನೆ ಎಂದು ಹೇಳಿದ್ದಾರೆ.


ಪ್ರ: ನಿಮ್ಮ ಚುನಾವಣಾ ಪ್ರಚಾರ ಹೇಗೆ ನಡೆಯುತ್ತಿದೆ?
ಜನರಿಗೆ ಬಿಜೆಪಿ ಬೇಕಾಗಿದೆ,  ಹುಣಸೂರನ್ನು ಜಿಲ್ಲೆಮಾಡಬೇಕೆಂಬ ನನ್ನ ಉದ್ದೇಶದ ಬಗ್ಗೆ ಇಲ್ಲಿನ ಜನತೆಗೆ ಅರಿವಿದೆ, ಉತ್ತಮ ಮೂಲಭೂತ ಸೌಕರ್ಯಗಳ ಜೊತೆಗೆ  ಮೆಡಿಕಲ್ ಕಾಲೇಜು ಸ್ಥಾಪಿಸುವ ಗುರಿ ಹೊಂದಿದ್ದೇನೆ. ಈ ಬಾರಿ ಅಭಿವೃದ್ಧಿಗಾಗಿ ಜನ ಮತ ಹಾಕಲಿದ್ದಾರೆ.

ಪ್ರ: ಈ ಬಾರಿಯ ಚುನಾವಣೆಯಲ್ಲಿ ಡೈಸಿ ವಿಕೆಟ್ ಗೆ ಬ್ಯಾಟಿಂಗ್ ಮಾಡುತ್ತಿದ್ದೀರಾ ಎನಿಸುತ್ತಿಲ್ಲವೇ?
ಇದೇ ಮೊದಲ ಬಾರಿಗೆ ನಾನು ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿದ್ದೇನೆ, ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಬೆಂಬಲದಲ್ಲಿ ನಾನು ನನ್ನ ಪ್ರೊಫೈಲ್ ರೂಪಿಸಿಕೊಳ್ಳಬೇಕಿದೆ.

ಪ್ರ: ಸಾಂಪ್ರಾದಾಯಿಕ ಒಕ್ಕಲಿಗರು ಮತ್ತು ಅಲ್ಪ ಸಂಖ್ಯಾತರ ಬೆಂಬಲ ಹೇಗೆ ಪಡೆದುಕೊಳ್ಳುತ್ತೀರಿ?

ನಾನು ಅಲ್ಪಸಂಖ್ಯಾತರ ಬೆಂಬಲವನ್ನು ಕಳೆದುಕೊಂಡಿದ್ದೇನೆ ಆದರೆ ಇದೇ ವೇಳೆ ಸಾಕಷ್ಟು ಪ್ರಮಾಣದಲ್ಲಿ ಒಕ್ಕಲಿಗರ ಬೆಂಬಲ ಪಡೆದುಕೊಂಡಿದ್ದೇನೆ, ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಇಬ್ಬರು ಮತ ವರ್ಗಾವಣೆ ಮಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಸೂಕ್ಷ್ಮ ಸಮುದಾಯಗಳು ಕಾಂಗ್ರೆಸ್ ವಿರುದ್ಧ ಬೇಸತ್ತಿವೆ.

ಪ್ರ: ಈ ಭಾಗದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತ ಬೆಂಬಲವಿಲ್ಲ, ಇದರಿಂದ ನಿಮ್ಮ ಭವಿಷ್ಯಕ್ಕೆ ತೊಂದರೆಯಾಗುತ್ತದೆಯೇ?
1994 ರಲ್ಲಿ ಹೊರತು ಪಡಿಸಿದರೇ ಹುಣಸೂರಿನಲ್ಲಿ ಇಲ್ಲಿಯವರೆಗೂ ಬಿಜೆಪಿ ಗೆದ್ದಿಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿಗೆ ಗಣನೀಯ ಬೆಂಬಲವಿಲ್ಲ,  ಬೇರೆ ಸಮುದಾಯದ ನಾಯಕರು ಈ ಅಂತರವನ್ನು ಪೂರ್ಣಗೊಳಿಸಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಜನತೆ ಸ್ಥಿರ ಹಾಗೂ ದಕ್ಷ ಸರ್ಕಾರದ ಆಡಳಿತ ಬಯಸುತ್ತಿದ್ದಾರೆ.

ಪ್ರ: ನಿಮ್ಮ ಗೆಲುವಿಗೆ ಯಾವ ಅಂಶಗಳು ಕಾರಣವಾಗುತ್ತವೆ ಎಂಬ ಆತ್ಮ ವಿಶ್ವಾಸದಲ್ಲಿದ್ದಿರಾ ನೀವು?
ದಲಿತರು, ಎಸ್ ಟಿ ಮತ್ತು ಹಿಂದುಳಿದ ವರ್ಗಗಳ ಜನರ ನನ್ನ ಬೆನ್ನೆಲುಬಾಾಗಿದ್ದಾರೆ, ಹುಣಸೂರು ಜಿಲ್ಲೆ ಮಾಡುವುದು ನನ್ನ ಮೊದಲ ಆದ್ಯತೆ, ಎರಡು ಮೂರು ತಾಲೂಕು ಗಳಿರುವ ರಾಮನಗರ ಮತ್ತು ಯಾದಗಿರಿ ಜಿಲ್ಲೆಗಳಾಗಿರುವಾಗ ಹುಣಸೂರು ಏಕೆ ಜಿಲ್ಲೆಯಾಗಬಾರದು.

SCROLL FOR NEXT