ರಾಜಕೀಯ

ಮಂಗಳೂರು: ಪಾಲಿಕೆ ಚುನಾವಣೆಯಲ್ಲಿ ತೊಗಾಡಿಯಾ'ಸ್ಥಾಪಿತ ಹಿಂದೂಸ್ತಾನ್ ನಿರ್ಮಾಣ್ ದಳ ಕಣಕ್ಕೆ 

Nagaraja AB

ಮಂಗಳೂರು: ಮುಂಬರುವ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರವೀಣ್ ತೊಗಾಡಿಯಾ ಸ್ಥಾಪಿತ ಹೊಸ  ರಾಜಕೀಯ ಪಕ್ಷ  ಹಿಂದೂಸ್ತಾನ್ ನಿರ್ಮಾಣ ದಳ ಕಣಕ್ಕಿಳಿಯಲಿದೆ. ಚುನಾವಣೆಯ ವೇಳಾಪಟ್ಟಿ ಇನ್ನೂ ಪ್ರಕಟಗೊಂಡಿಲ್ಲ.

ಪೋಷಕ ಸಂಘಟನೆ ಅಂತಾರಾಷ್ಟ್ರೀಯ ಹಿಂದೂ ಪರಿಷದ್ ನ ಭಾಗವಾಗಿರುವ ಹಿಂದೂಸ್ತಾನ್ ನಿರ್ಮಾಣ್ ದಳದ ಪದಾಧಿಕಾರಿಗಳು   ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಂಬಂಧ ಚರ್ಚೆ ನಡೆಸಲಿದ್ದಾರೆ.60 ಸದಸ್ಯ ಬಲದ ಪಾಲಿಕೆಯಲ್ಲಿ ಎಷ್ಟು ಅಭ್ಯರ್ಥಿಗಳನ್ನು ಹಾಕಬೇಕೆಂಬ ಬಗ್ಗೆ ಮುಖಂಡರು  ಮೊದಲಿಗೆ ಚರ್ಚೆ ನಡೆಸಲಿದ್ದಾರೆ ಎಂದು ಪಕ್ಷದ ರಾಜ್ಯದ ಉಸ್ತುವಾರಿ ಪ್ರವೀಣ್ ವಾಲ್ಕೆ ತಿಳಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಜಯಬೇರಿ ಭಾರಿಸಿದ್ದು, ಹಿಂದೂಸ್ತಾನ್ ನಿರ್ಮಾಣ್ ದಳವನ್ನು ಯುವಕರು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ  ವ್ಯಕ್ತಪಡಿಸಿರುವ  ಪ್ರವೀಣ್ ವಾಲ್ಕೆ,  ನಮ್ಮ ಪಕ್ಷ ಸಾಮರ್ಥ್ಯವನ್ನು ಸಾಬೀತುಪಡಿಸಲು ಇದು ಸರಿಯಾದ ವೇಳೆಯಾಗಿದೆ ಎಂದಿದ್ದಾರೆ. 

ಹೊಸ ಪಕ್ಷವಾಗಿರುವುದರಿಂದ ಪ್ರಾಯೋಗಿಕವಾಗಿ 30 ಅದಕ್ಕಿಂತಲೂ ಹೆಚ್ಚಿನ ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲಾಗುವುದು, ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ, ಜಿಲ್ಲಾ ಘಟಕಗಳಲ್ಲಿ ಪಕ್ಷ ಸಂಘಟನೆ ಕಾರ್ಯವನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

SCROLL FOR NEXT