ವಿಜಯ್ ಶಂಕರ್ 
ರಾಜಕೀಯ

ಬಿಜೆಪಿಗೆ ಮರಳುವಂತೆ ವರಿಷ್ಠರಿಂದ ಆಹ್ವಾನ ಬಂದಿದೆ: ಸಿ.ಎಚ್. ವಿಜಯ್ ಶಂಕರ್

 ಬಿಜೆಪಿಗೆ ಮರಳುವಂತೆ ವರಿಷ್ಠರಿಂದ ಆಹ್ವಾನ ಬಂದಿದೆ. ರಾಜಕೀಯದಲ್ಲಿ ಇಂತಹ ರಾಜಕೀಯ ಸ್ಥಿತ್ಯಂತರ ಸಹಜ.ಪಕ್ಷಕ್ಕಾಗಿ ದುಡಿದಿದ್ದೀರಿ. ಮರಳಿ ಬರುವುದಾದರೆ ಸ್ವಾಗತ ಎಂದಿದ್ದಾರೆ.

ಹುಣಸೂರು: ಬಿಜೆಪಿಗೆ ಮರಳುವಂತೆ ವರಿಷ್ಠರಿಂದ ಆಹ್ವಾನ ಬಂದಿದೆ. ರಾಜಕೀಯದಲ್ಲಿ ಇಂತಹ ರಾಜಕೀಯ ಸ್ಥಿತ್ಯಂತರ ಸಹಜ.ಪಕ್ಷಕ್ಕಾಗಿ ದುಡಿದಿದ್ದೀರಿ. ಮರಳಿ ಬರುವುದಾದರೆ ಸ್ವಾಗತ ಎಂದಿದ್ದಾರೆ ಎಂದು ಮಾಜಿ ಶಾಸಕ.ಸಿ.ಎಚ್.ವಿಜಯ ಶಂಕರ್ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದರು.

ನಗರದಲ್ಲಿ ವಿಜಯ್ ಶಂಕರ್ ನಿವಾಸದಲ್ಲಿ ಕರೆದಿದ್ದ ಸಮಾನ ಮನಸ್ಕರು,ಹಾಗೂ ಬೆಂಬಲಿಗರು,ಮುಖಂಡರ ಸಭೆಯಲ್ಲಿಅವರು ಮಾತನಾಡಿ,ಅಭಿಮಾನಿಗಳು ಬಿಜೆಪಿ ಸೇರುವುದೇ ಒಳಿತು ಎನ್ನುವ ಮಾತುಗಳನ್ನಾಡಿದ್ದಾರೆ. ಹಾಗಾಗಿ ಬಿಜೆಪಿ ವರಿಷ್ಠರ ಜೊತೆ ಅವರ ನೀಡಿರುವ ಆಹ್ವಾನದ ಕುರಿತು ಶೀಘ್ರ ಚರ್ಚಿಸಿ ಸೂಕ್ತ ನಿರ್ಣಯ ಪ್ರಕಟಿಸಲಿದ್ದೇನೆ ಎಂದರು.

ಬಿಜೆಪಿ ತೊರೆದದ್ದು ತಪ್ಪಾಗಿದೆ ಬಿಜೆಪಿ ತೊರೆದಿದ್ದು ತಪ್ಪಾಗಿದೆ. ಮುಂದೆ ಇಂತಹ ತಪ್ಪು ಆಗದಂತೆ ಎಚ್ಚರ ವಹಿಸಿ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಗುಣ ನಿಮ್ಮಲ್ಲಿದೆ. ಪ್ರತಿ ತಾಲೂಕಿನಲ್ಲಿಯೂ ನಿಮ್ಮ ಅಭಿಮಾನಿಗಳಿದ್ದು, ಅವರ ಅಭಿಪ್ರಾಯ ಕೇಳಿ ಮುಂದಿನ ತೀರ್ಮಾನ ಕೈಗೊಳ್ಳಿ ಎಂದು ಬೆಂಬಲಿಗರು ಸಲಹೆ ನೀಡಿದ್ದಾರೆ. 

ಅಧಿಕಾರ ಕೇಳಲು ಆಗುವುದಿಲ್ಲ "ಸಿದ್ದರಾಮಯ್ಯ ಆಶ್ವಾಸನೆ ನಂಬಿ ಕಾಂಗ್ರೆಸ್ ಸೇರಿದೆ. ನನಗೆ ಟಿಕೆಟ್ ನೀಡಿದ ಸಿದ್ದರಾಮಯ್ಯಗೆ ಭಾರವಾಗಿ ಇರಲು ನನಗೆ ಇಷ್ಟವಿಲ್ಲ. ಕಾಂಗ್ರೆಸ್‌ನಲ್ಲಿ ಅಧಿಕಾರ ಕೇಳಲು ಆಸ್ಪದವೇ ಇಲ್ಲ. ಕಾರಣ ನನಗಿಂತ ಹಿರಿಯರು ಅಲ್ಲಿದ್ದಾರೆ" ಎಂದು ಸಿ. ಎಚ್. ವಿಜಯಶಂಕರ್ ಹೇಳಿದರು. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತೆರಿಗೆ ನೀತಿ ಚರ್ಚೆಗಳು ವಲಯ ಹಿತಾಸಕ್ತಿ ಮೀರಬೇಕು: ಒಟ್ಟಾರೆ ಆರ್ಥಿಕತೆಯ ಅಗತ್ಯತೆಗಳ ಮೇಲೆ ಗಮನ ಹರಿಸಬೇಕು- ನಿರ್ಮಲಾ ಸೀತಾರಾಮನ್

ಸಚಿನ್ ತೆಂಡುಲ್ಕರ್‌ರ ದೀರ್ಘಕಾಲೀನ ODI ದಾಖಲೆ ಮುರಿದ ಬ್ರೆಂಡನ್ ಟೇಲರ್; ಆದ್ರೆ ಒಂದು ಟ್ವಿಸ್ಟ್ ಇದೆ!

ಉಮರ್ ಖಾಲಿದ್ ನ್ಯಾಷನಲಿಸ್ಟ್ ಹೇಳಿಕೆ: KPCC ಅಧ್ಯಕ್ಷ ಬಿಕೆ ಹರಿಪ್ರಸಾದ್ ವಿರುದ್ಧ ದೂರು

ಇದೇ ಮೊದಲ ಬಾರಿಗೆ ಮೆಕ್ಕಾ ಬಳಿ ಮೊಳಗಿದ ಸೈರನ್: ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ!

ಸಕಲೇಶಪುರದ ಲಾಡ್ಜ್‌ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವತಿ ಸಾವು!