ರಾಜಕೀಯ

ಆಹಾರ ಪೊಟ್ಟಣ ವಿತರಣೆಯಲ್ಲಿ ರಾಜಕೀಯ: ಸಿದ್ದರಾಮಯ್ಯ ಆಕ್ರೋಶ

Manjula VN

ಬೆಂಗಳೂರು: ಬಡವರಿಗಾಗಿ ಸರ್ರಾಕ ಹಮ್ಮಿಕೊಕಂಡಿರುವ ಆಹಾರ ಪೊಟ್ಟಣ ವಿತರಣೆಯನ್ನು ಬಿಡೆಪಿ ನಾಯಕರು ಪಕ್ಷದ ಕಾರ್ಯಕ್ರಮವಾಗಿ ನಡೆಸುತ್ತಿದ್ದಾರೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಮ್ಮ ನಿರಂತರ ದೂರುಗಳ ನಂತರವೂ ಬಡವರಿಗಾಗಿ ಸರ್ಕಾರ ಹಮ್ಮಿಕೊಂಡಿರುವ ಆಹಾರ ಪೊಟ್ಟಣ/ ಆಹಾರ ಸಾಮಗ್ರಿಗಳ ವ್ಯಾಂಪರ್ಸ್ ವಿತರಣೆಯನ್ನು ಬಿಜೆಪಿ ಶಾಸಕರು ಮತ್ತು ನಾಯಕರು ಪಕ್ಷದ ಕಾರ್ಯಕ್ರಮವಾಗಿ ನಡೆಸುತ್ತಿದ್ದಾರೆ. ಈ ರಾಜಕೀಯ ದುರುಪಯೋಗವನ್ನು ನಿಲ್ಲಿಸದೆ ಇದ್ದರೆ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ನಾಯಕರ ಹಸ್ತಕ್ಷೇಪದಿಂದಾಗಿ ವಾಹನ ಮತ್ತು ವಾಹನ ಚಾಲಕರ ಪಾಸ್ ವಿತರಣೆ ಪಾರದರ್ಶಕವಾಗಿ ನಡೆಯದೆ ದುರುಪಯೋಗವಾಗುತ್ತಿದೆ. ಲಾಕ್ ಡೌನ್ ಇದ್ದರೂ ನಗರದಲ್ಲಿನ ವಾಹನದಟ್ಟಣೆಗೆ ಬೇಕಾಬಿಟ್ಟಿ ಪಾಸ್ ವಿತರಣೆ ಕಾರಣ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ, ಆಡಳಿತವನ್ನು ನಿಮ್ಮ ಪಕ್ಷಕ್ಕೆ ಹೊರಗುತ್ತಿಗೆ ಮಾಡಿದ್ದೀರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

SCROLL FOR NEXT