ರಾಜಕೀಯ

ನಿಗಮ-ಮಂಡಳಿಗಳ ಉನ್ನತ ಸ್ಥಾನಗಳಿಗಾಗಿ ತೀವ್ರಗೊಂಡ ಲಾಬಿ: ಪಟ್ಟಿ ತಯಾರಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಜಿಲ್ಲಾ ಘಟಕ

Shilpa D

ಬೆಂಗಳೂರು: ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಮತ್ತು ಸದಸ್ಯತ್ವಕ್ಕಾಗಿ ಬಿಜೆಪಿಯಲ್ಲಿ ಲಾಬಿ ತೀವ್ರಗೊಂಡಿದೆ. ಸುಮಾರು 90 ನಿಗಮ-ಮಂಡಳಿಗಳಿವೆ.

ಪಕ್ಷದ ಹಲವು ನಿಷ್ಠಾವಂತ ಕಾರ್ಯಕರ್ತರು ಉನ್ನತ ಹುದ್ದೆಗಳಿಗಾಗಿ ರಾಜ್ಯ ನಾಯಕರ ಮನೆ ಕದ ತಟ್ಟುತ್ತಿದ್ದಾರೆ. ಆದರೆ ಹುದ್ದೆಗಳಿಗಿಂತ ಆಕಾಂಕ್ಷಿಗಳ ಸಂಖ್ಯೆಯೇ ಹೆಚ್ಚಾಗಿದೆ.

ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಶಾಸಕರು ಸರ್ಕಾರ ರಚಿಸಲು ಸಹಾಯ ಮಾಡಿದ್ದಾರೆ. ಹೀಗಾಗಿ ಅವರಿಗೆ ಉತ್ತಮ ಸ್ಥಾನಮಾನ ನೀಡಲಾಗಿದೆ, ಅವರ ಬೆಂಬಲಿಗರಿಗೂ ನಿಗಮ-ಮಂಡಳಿಗಳಲ್ಲಿ ಉತ್ತಮ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ. 

ಜಿಲ್ಲೆಗಳಲ್ಲಿರುವ ನಿಷ್ಠಾವಂತ ಕಾರ್ಯಕರ್ತರ ಪಟ್ಟಿ ಮಾಡುವಂತೆ ಪಕ್ಷದ ಜಿಲ್ಲಾಧ್ಯಕ್ಷರಿಗೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ. ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ಪದಾಧಿಕಾರಿಗಳ ರಾಜ್ಯ ತಂಡವು ಪಟ್ಟಿಗಳನ್ನು ಸಿದ್ಧಪಡಿಸಲು ಪ್ರಾರಂಭಿಸಿದೆ.

ಹಲವು ಶಾಸಕರು, ಎಂಎಲ್ ಸಿ ಗಳು ಮತ್ತು ಪರಾಭವಗೊಂಡ ಶಾಸಕರು ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಮಂಡಳಿಗಳ ನಿರ್ದೇಶಕರು ಮತ್ತು ಸದಸ್ಯರನ್ನು ಪಕ್ಷದ ಕಾರ್ಯಕರ್ತರು ಆರಿಸುತ್ತಾರೆ., ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಹಲವು ಶಾಸಕರು ನಿಗಮಗಳ ಅಧ್ಯಕ್ಷರಾಗಲು ಬಯಸಿದ್ದಾರೆ ಎಂದು ಬಿಜೆಪಿ ಮುಖಂಡ ಗೋ ಮಧುಸೂದನ್ ತಿಳಿಸಿದ್ದಾರೆ.

ಬಿಜೆಪಿ ಮುಖಂಡರು ಬಹಳ ನಿಗಾ ವಹಿಸಿ ಪಟ್ಟಿ ಸಿದ್ದಪಡಿಸುತ್ತಿದ್ದಾರೆ, ಆಕಾಂಕ್ಷಿಗಳು ರಾಜಕೀಯ ಮಹತ್ವಾಕಾಂಕ್ಷೆಯನ್ನು  ಪೂರ್ಣಗೊಳಿಸಲು ಬಯಸಿದ್ದಾರೆ.  ಇದನ್ನು ವಿವೇಚನೆಯಲ್ಲದ ಕಾರ್ಯವೆಂದು ಪರಿಗಣಿಸಬಾರದು.ಪಟ್ಟಿ ಸಿದ್ದಗೊಂಡ ನಂತರ ರಾಜ್ಯ ಮಟ್ಟದಲ್ಲಿ ಈ ಹೆಸರುಗಳ ಬಗ್ಗೆ ಚರ್ಚೆಯಾಗುತ್ತದೆ.

ಜಿಲ್ಲಾ ಘಟಕ ಒಮ್ಮೆ ಪಟ್ಟಿ ಸಿದ್ದಗೊಳಿಸಿ ಕಳಿಸಿದರೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಫೈನಲ್ ಮಾಡುತ್ತಾರೆ ಎಂದು ಎಂಎಲ್ ಸಿ ರವಿಕುಮಾರ್ ಹೇಳಿದ್ದಾರೆ, ನಿಗಮ-ಮಂಡಳಿಗಳಿಗೆ ನೇಮಕ ಮಾಡುವಾಗ ಶೇ.70 ರಷ್ಟು ಕಾರ್ಯಕರ್ತರನ್ನು ಪರಿಗಣಿಸಲಾಗುತ್ತದೆ ಎಂದು ರವಿ ಕುಮಾರ್ ತಿಳಿಸಿದ್ದಾರೆ.

SCROLL FOR NEXT