ರಾಜಕೀಯ

ನಮ್ಮವರೇ ನಮಗೆ ಶತ್ರುಗಳಾದರು: ಸಿಸಿಬಿ ವಿಚಾರಣೆಯಲ್ಲಿ ಕಾಂಗ್ರೆಸ್ ನಾಯಕರ ಕೈವಾಡದ ಬಗ್ಗೆ 'ಅಖಂಡ' ಮಾಹಿತಿ

Shilpa D

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್​ ಮನೆ ಮೇಲೆ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಹಾಗೂ ಕಾಂಗ್ರೆಸ್​ ಮಧ್ಯೆ ಕೆಸೆರೆಚಾಟ ನಡೆದಿತ್ತು. ಈ ಮಧ್ಯೆ ಪ್ರಕರಣ ದಿನೇ ದಿನೇ ಹೊಸ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ.

ಮೂವರು ಕಾರ್ಪೊರೇಟರ್ ಗಳು ನೀಡಿದ ಕುಮ್ಕಕ್ಕಿನಿಂದ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣ ನಡೆದಿರುವುದಾಗಿ ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ಆಗಸ್ಟ್ 11 ರಂದು ನಡೆದ ಗಲಭೆಯ ಹಿಂದೆ ಇಬ್ಬರು ಕಾರ್ಪೋರೇಟರ್ ಗಳು ಮತ್ತು ಕಾರ್ಪೋರೇಟರ್ ಒಬ್ಬರ ಪತಿಯ ಕೈವಾಡವಿದೆ ಎಂದು ಅಖಂಡ ಶ್ರೀನಿವಾಸ್ ಮೂರ್ತಿ ಆರೋಪಿಸಿದ್ದಾರೆ.  ಸಿಸಿಬಿ ಪೊಲೀಸರು ಈಗಾಗಲೇ ಮಾಜಿ‌ ಮೇಯರ್ ಸಂಪತ್ ರಾಜ್ ಅವರ ಪಿಎ ಅರುಣ್ ನನ್ನು ಬಂಧಿಸಿದ್ದಾರೆ,

ಕಾರ್ಪೋರೇಟರ್ ಝಾಕಿರ್ ಹಾಗೂ ಸಂಪತ್ ರಾಜ್ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ, ಅವರ ಮೊಬೈಲ್ ಫೋನ್ ಗಳನ್ನು ಸೀಜ್ ಮಾಡಿದ್ದಾರೆ. ಮಾಜಿ ಮೇಯರ್ ಸಂಪತ್ ರಾಜ್ ನಾನು ಪ್ರತಿನಿಧಿಸುವ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ‌. 2018ರಲ್ಲಿ ಪುಲಿಕೇಶಿನಗರದಿಂದ ಟಿಕೆಟ್ ಕೇಳಿದ್ದರು. ಆದರೆ ಕಾಂಗ್ರೆಸ್‌ ಪಕ್ಷ ಅವರಿಗೆ ಟಿಕೆಟ್ ಕೊಡಲಿಲ್ಲ. ಬದಲಿಗೆ ಜೆಡಿಎಸ್ ಪಕ್ಷದಿಂದ ಬಂದಿದ್ದ, ಹಾಲಿ ಶಾಸಕನಾಗಿದ್ದ ನನಗೆ ಟಿಕೇಟ್ ಕೊಟ್ಟಿತ್ತು.

ಅಂದಿನಿಂದಲೂ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲು ಅವಕಾಶಕ್ಕಾಗಿ ಕಾಯುತ್ತಿದ್ದರು ಎಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ. ಶಾಸಕರ ಜನಪ್ರಿಯತೆ ಸಹಿಸದೆ ಹೊಟ್ಟೆ ಉರಿಯಿಂದ ಈ ಕೆಲಸ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

SCROLL FOR NEXT