ರಾಜಕೀಯ

ಮತಕ್ಕಾಗಿ ಗೋಹತ್ಯೆ ಮಸೂದೆ ತರಲಾಗಿದೆ: ಸ್ಪೀಕರ್ ನಿರ್ಧಾರಕ್ಕೆ ಸಿದ್ದರಾಮಯ್ಯ ಅಸಮಾಧಾನ

Raghavendra Adiga

ಬೆಂಗಳೂರು: ಸಮಾಜ ಒಡೆಯಲು ಮತಗಳಿಗಾಗಿ ಗೋಹತ್ಯೆ ನಿಷೇಧ ಮಸೂದೆಯನ್ನು ತರಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಿದ್ದರಾಮಯ್ಯ "ಬಹುಮತ ಇದೆ ಎಂದು ಬುಲ್ಡೋಜ್ ಮಾಡೋಕೆ ಹೊರಟಿದ್ದಾರೆ. ಜನರಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಬೇಕು, ಸಮಾಜ ಒಡೆಯುವುದಲ್ಲ. ಮಸೂದೆ ಜಾರಿ ಆಗಲೇಬಾರದೆಂದು ನಾನು ಹೇಳುವುದಿಲ್ಲ. ಪೂರ್ವಾಗ್ರಹಪೀಡಿತರಾಗಬಾರದು. ಚರ್ಚಿಸಿ ತೀರ್ಮಾನಿಸಬೇಕು." ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದೇ ವೇಳೆ ಸ್ಪೀಕರ್ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ "ಸ್ಪೀಕರ್ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಾರೆ,  ಅವರೆಂದಂತೆ ಕೇಳುತ್ತಿದ್ದಾರೆ." ಎಂದರು.

"ಕಲಾಪ ಬಹಿಷ್ಕರಿಸಿ ಈ ಬಗ್ಗೆ ಜನರ ಮುಂದೆ ಹೋಗಿ ಹೇಳುತ್ತೇವೆ. " ಸಿದ್ದರಾಮಯ್ಯ ಹೇಳಿದ್ದಾರೆ.

ಸ್ಪೀಕರ್ ಚರ್ಚೆಗೆ ಅವಕಾಶವನ್ನು ನೀಡದೆ ಧ್ವನಿ ಮತದ ಮೂಲಕ ಏಕಸ್ವಾಮ್ಯವಾಗಿ ಮಸೂದೆ ಅಂಗೀಕಾರ ನಿರ್ಧಾರ ತೆಗೆದುಕೊಂಡರೆಂದು ಸಿದ್ದರಾಮಯ್ಯ ಆಕ್ರೋಶಕ್ಕೆ ಕಾರಣವಾಗಿದೆ. 

SCROLL FOR NEXT