ರಾಜಕೀಯ

ಬೆಳಗಾವಿಯಲ್ಲೊಂದು ಮಾದರಿ ಗ್ರಾಮ: 70 ವರ್ಷಗಳಿಂದ ನಡೆದಿಲ್ಲ ಪಂಚಾಯಿತಿ ಚುನಾವಣೆ; ಇಲ್ಲಿ ಮೊದಲೇ ಎಲ್ಲವೂ ಫಿಕ್ಸ್!

Shilpa D

ಬೆಳಗಾವಿ: ರಾಜ್ಯಾದ್ಯಂತ ಪಂಚಾಯಿತಿ ಚುನಾವಣಾ ಕಣ ರಂಗೇರುತ್ತಿದೆ, ಇದರ ನಡುವೆಯೇ ಬೆಳಗಾವಿಯ ಬೆಲ್ಲದ ಬಾಗೇವಾಡಿ ಗ್ರಾಮ ವಿಶೇಷ ಸ್ಥಾನದಲ್ಲಿ ನಿಲ್ಲುತ್ತದೆ.

ಅಪಾರ ಪ್ರಮಾಣದಲ್ಲಿ ಕಬ್ಬು ಬೆಳೆಯುವ ಈ ಗ್ರಾಮ ಕಳೆದ 7 ದಶಕಗಳಿಂದ ತನ್ನ ಭವಿಷ್ಯವನ್ನು ಮೊದಲೇ ನಿರ್ಧರಿಸಿಕೊಂಡಿದೆ. ಬೆಲ್ಲದ ಬಾಗೇವಾಡಿ ಗ್ರಾಮದವರಾದ ಕತ್ತಿ ಸಹೋದರರು ಇಲ್ಲಿನ ಎಲ್ಲಾ ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಇಲ್ಲಿ ಪಂಚಾಯತ್ ಚುನಾವಣೆಗೆ ಯಾರೂ ಸ್ಪರ್ಧಿಸುವುದಿಲ್ಲ, ಬದಲಾಗಿ ಅವಿರೋಧ ಆಯ್ಕೆ ಮಾಡಲಾಗುತ್ತದೆ. ಯಾವುದೇ ಮಹತ್ವದ ನಿರ್ಧಾರಗಳನ್ನು ಅಲ್ಲಿನ ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರ ಜೊತೆ ಚರ್ಚಿಸಿ ರಮೇಶ್ ಕತ್ತಿ ಮತ್ತು ಉಮೇಶ್ ಕತ್ತಿ ತೆಗೆದುಕೊಳ್ಳುತ್ತಾರೆ. 

ಕತ್ತಿ ಸಹೋದರರೆಡೆಗಿನ ನಿಷ್ಠೆ ಪ್ರಶ್ನಾತೀತವಾಗಿದೆ, ಉಮೇಶ್ ಕತ್ತಿ ಹುಕ್ಕೇರಿ ಕ್ಷೇತ್ರದಿಂದ 8ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.  ರಮೇಶ್ ಕತ್ತಿ ಸಂಸದರಾಗಿದ್ದವರು, ಇನ್ನೂ ಅವರ ತಂದೆ ವಿಶ್ವನಾಥ ಕತ್ತಿ ಕೂಡ ಹುಕ್ಕೇರಿ ಶಾಸಕರಾಗಿದ್ದವರು.

ಗ್ರಾಮ ಪಂಚಾಯಿತಿಗಳು ಅಸ್ತಿತ್ವಕ್ಕೆ ಬರುವ ಮೊದಲು ಬೆಲ್ಲದ ಬಾಗೇವಾಡಿಯಲ್ಲಿನ ಗುಂಪು ಪಂಚಾಯಿತಿಗಳು ಮತ್ತು ಮಂಡಲ ಪಂಚಾಯತ್‌ಗಳಿಗೆ ಚುನಾವಣೆಗಳು ಅವಿರೋಧವಾಗಿ ನಡೆದಿತ್ತು. 1977 ರಲ್ಲಿ ಬೆಲ್ಲದ ಬಾಗೇವಾಡಿ ಗ್ರಾಮಪಂಚಾಯಿತಿಯಲ್ಲಿ ಒಂದು ವಾರ್ಡ್‌ಗೆ ಚುನಾವಣೆ ನಡೆದಿತ್ತು ಇದು ಮೊದಲ ಮತ್ತು ಕೊನೆಯ ಸ್ಪರ್ಧೆ ಎಂದು ಎಂದು ಗ್ರಾಮಸ್ಥರೊಬ್ಬರು ನೆನಪಿಸಿಕೊಳ್ಳುತ್ತಾರೆ.

ಈ ಬಾರಿ 33 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು ಅವರನ್ನೆಲ್ಲಾ ರಮೇಶ್ ಕಟ್ಟಿಯವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಯಾವುದೇ ವೆಚ್ಚ, ಉದ್ವಿಗ್ನತೆ ಮತ್ತು ನೋವಿಲ್ಲದೇ ಚುನಾವಣೆ ನಡೆಯುವುದಕ್ಕೆ ಗ್ರಾಮಸ್ಥರು ತಮ್ಮ ಚುನಾವಣಾ ಮಾದರಿಗೆ ಮೆಚ್ಚುಗೆ ಸೂಚಿಸುತ್ತಾರೆ.

ಬೆಳಗಾವಿಯ ಸಮೀಪದಲ್ಲಿರುವ ಕರ್ಗಾವ್ ಗ್ರಾಮ ಪಂಚಾಯಿತಿಯಲ್ಲಿ 1962 ರಿಂದಲೂ ಇದೇ ಮಾದರಿ ಅನುಸರಿಸಲಾಗುತ್ತಿತ್ತು,  ಆದರೆ ತದ ನಂತರ ಸವಾಲಾಯಿತು.

ಚಿಕ್ಕೋಡಿ ತಾಲೂಕಿನಲ್ಲಿರುವ ಕಾರ್ಗಾಂವ್, ಡೊನ್ವಾಡ್ ಮತ್ತು ಹಂಚನಲ್ಕೇರಿ ಗ್ರಾಮಗಳು ಕಾರ್ಗಾಂವ್ ಜಿಪಿಯ ಆರು ವಾರ್ಡ್‌ಗಳಲ್ಲಿ 16 ಸದಸ್ಯರನ್ನು ಹೊಂದಿವೆ. ಕಳೆದ 58 ವರ್ಷಗಳಿಂದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು, ಆದರೆ 2015 ರಲ್ಲಿ ಚುನಾವಣೆ ನಡೆಯಿತು.

ಹಿರಿಯ ನಾಗರಿಕರಾದ ಡಿಟಿ ಪಾಟೀಲ್ ಮತ್ತು ವಕೀಲರಾದ ಟಿ.ವೈ ಕಿವಡ್  ಜಗಳ ಮುಕ್ತ ಚುನಾವಣೆಯ ಯಶಸ್ಸಿಗೆ ಗ್ರಾಮಸ್ಥರು ಕಾರಣವೆಂದು ಹೇಳುತ್ತಾರೆ. ಈ ಬಾರಿಯೂ ಅವರನ್ನು ಅವಿರೋಧವಾಗಿ ನಡೆಸಲು ಪ್ರಯತ್ನಗಳು ನಡೆಯುತ್ತಿರುವಾಗ, ಕಾರ್ಗಾಂವ್‌ನ ಕೆಲವು ಯುವಕರು ಸ್ಪರ್ಧೆಗೆ ಮುಂದಾಗಿದ್ದಾರೆ.

SCROLL FOR NEXT