ರಾಜಕೀಯ

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಎಂದಿಗೂ ಮಾತನಾಡಿಲ್ಲ: ಯೂಟರ್ನ್ ಹೊಡೆದ ರಮೇಶ್ ಜಾರಕಿಹೊಳಿ

Manjula VN

ದಾವಣಗೆರೆ: ಮಹೇಶ್ ಕುಮಟಳ್ಳಿಯಿಂದಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮಹೇಶ್ ಅವರಿಗೆ ಉನ್ನತ ಹುದ್ದೆ ಸಿಗಲಿದೆ. ಅವರಿಗೆ ಅನ್ಯಾಯ ಮಾಡೋಲ್ಲ, ಅನ್ಯಾಯ ಆಗಿದೆ ಎಂದು ಒಂದು ಮಾತು ಹೇಳಿದರೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ಹೇಳಿದ್ದ ಗೋಕಾಕ್ ಶಾಸಕ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರು, ಇದೀಗ ತಮ್ಮ ಹೇಳಿಕೆ ಕುರಿತು ಯೂಟರ್ನ್ ಹೊಡೆದಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜೀನಾಮೆ ನೀಡುತ್ತೇನೆಂದು ಹೇಳಿಕೆ ನೀಡಿಲ್ಲ. ಗೊಂದಲ ಸೃಷ್ಟಿಸಬೇಡಿ. ನಾನು ಹೇಳಿಕೆ ನೀಡಿದ ವಿಡಿಯೋ ಇದ್ದರೆ ನನಗೆ ತೋರಿಸಿ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಇದರ ಬಗ್ಗೆ ನಾನು ಯಾರಿಗೂ ಸ್ಪಷ್ಟೀಕರಣ ನೀಡಬೇಕೋ ಅವರಿಗೆ ನೀಡುತ್ತೇನೆಂದು ಹೇಳಿದ್ದಾರೆ. 

ನೀರಾವರಿ ವಿಚಾರದಲ್ಲಿ ನಾನು ಎಲ್ಲರ ಸಲಹೆ ಪಡೆಯುತ್ತೇನೆ. ಹೆಚ್.ಕೆ.ಪಾಟೀಲ್ ಅವರ ಮಾರ್ಗದರ್ಶನವನ್ನು ಪಡೆಯುತ್ತೇನೆಂದು ತಿಳಿಸಿದ್ದಾರೆ. 

ಮಹದಾಯಿ ವಿಚಾರವಾಗಿ ಮಾತನಾಡುವುದಕ್ಕೆ ನಾವು ಶಿವಮೊಗ್ಗ ಜಿಲ್ಲೆಗೆ ಹೊರಟಿದ್ದೇವೆ. ನಾಳೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸವಿದ್ದೇವೆ. ಫೆ.26ರಂದು ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇವೆ. ಅವರ ಜೊತೆ ಮಹದಾಯಿ ಬಗ್ಗೆ ಮಾತುಕತೆ ನಡೆಸಿ, ಆದಷ್ಟು ಬೇಗ ಗೆಜೆಟ್ ಮಾಡಿ ಕಾರ್ಯರೂಪಕ್ಕೆ ತರುತ್ತೇವೆಂದಿದ್ದಾರೆ. 

SCROLL FOR NEXT