ರಾಜಕೀಯ

'ನೀವು ಹತ್ತು ಮಕ್ಕಳನ್ನು ಹೆತ್ತರೇ, ನಾವು ಒಬ್ಬೊಬ್ಬರು 50 ಮಕ್ಕಳನ್ನು ಹುಟ್ಟಿಸುತ್ತೇವೆ'

Shilpa D

ಬಳ್ಳಾರಿ: ನೀವು 20-30 ಮಕ್ಕಳನ್ನು ಹುಟ್ಟಿಸಿದರೇ ನಾವು  ಒಬ್ಬೊಬ್ಬರು 50 ಜನರನ್ನು ಹುಟ್ಟಿಸಿ ಜನಸಂಖ್ಯೆ ಹೆಚ್ಚಿಸುತ್ತೇವೆ’ ಎಂದು ಹೇಳುವ ಮೂಲಕ ಶಾಸಕ ಸೋಮಶೇಖರ ರೆಡ್ಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಶುಕ್ರವಾರ ನಗರದಲ್ಲಿ ನಡೆದ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ದೇಶದ ಭದ್ರತೆಗೆ ಪೌರತ್ವ ತಿದ್ದುಪಡಿ ಕಾಯ್ದೆ ತರಲಾಗಿದ್ದು, ಅದನ್ನು ಎಲ್ಲರೂ ಬೆಂಬಲಿಸಬೇಕು. ಕಾಯ್ದೆ ವಿರೋಧಿಸಿ ಮತ್ತೊಂದು ಸಲ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರೆ ನಾವು ಸುಮ್ಮನೆ ಕೂರಲ್ಲ. ದೇಶದಿಂದ ಹೊರಗೆ ಹಾಕುತ್ತಾರೆ ಎಂಬ ಭಯವಿದ್ದವರು ದೇಶಬಿಟ್ಟು ಹೋಗಬೇಕು. ಇಂದಿನ ರ್‍ಯಾಲಿಯಲ್ಲಿ ಶೇ 5ರಷ್ಟು ಜನ ಬಂದಿದ್ದಾರಷ್ಟೆ. ಜಾಸ್ತಿ ನಕ್ರಾ ಮಾಡಿದರೆ ಇನ್ನುಳಿದ ಶೇ 95ರಷ್ಟು ಜನ ಬರುತ್ತಾರೆ. ಆಗ ಕಾಯ್ದೆ ವಿರೋಧಿಸುವವರು ಯಾರೂ ಉಳಿಯುವುದಿಲ್ಲ’ ಎಂದು ಅವರು ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಹೋರಾಟ ಮಾಡಿದ ಎಲ್ಲರನ್ನೂ ಶೂಟ್ ಮಾಡಿದ್ದರೆ ಅನುಕೂಲ ಆಗಿರೋದು. ದೇಶದ ಜನಸಂಖ್ಯೆಯಾದರೂ ಕಡಿಮೆಯಾಗುತ್ತಿತ್ತು. ‘ನಮ್ಮ ದೇಶದಲ್ಲಿ ಇರಬೇಕೆಂದರೆ ನಾವು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಬೇರೆಯೇ ಆಗುತ್ತೆ. ಹಿಂದೂಗಳನ್ನು ಕೆಣಕಬೇಡಿ’ ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ಎಚ್ಚರಿಕೆ ನೀಡಿದರು.

ಈ ಸೋಮಶೇಖರ ರೆಡ್ಡಿ ಭಯಂಕರ ದೇಶಭಕ್ತ. ನಾನು ಸತ್ತ ಮೇಲೆ ನನ್ನ ಶವ ಕೂಡ ‘ಭಾರತ್‌ ಮಾತಾಕೀ ಜೈ’ ಎಂದು ಹೇಳುತ್ತೆ. ನಿಮ್ಮಂತೆ ನಾವು ಕಳ್ಳ ಭಕ್ತರಲ್ಲ. ನಿಜವಾದ ಭಕ್ತರು. ನಮಗಾದರೆ ಫ್ಯಾಮಿಲಿ ಪ್ಲ್ಯಾನಿಂಗ್‌. ಅನಕ್ಷರಸ್ಥರು ಸಿಎಎ ಬಗ್ಗೆ ಅನಕ್ಷರಸ್ಥರಿಗೆ ತಪ್ಪು ತಿಳುವಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. 

ಇನ್ನೂ ಸಿಎಎ ವಿರೋಧಿಸಿ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತತ್ತು, ಪ್ರತಿಭಟನೆಯಲ್ಲಿ  ಪಾಲ್ಗೊಂಡಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು. 

SCROLL FOR NEXT