ರಾಜಕೀಯ

ನಾಮ ನಿರ್ದೇಶನಕ್ಕಾದರೂ ಪರಿಗಣಿಸಿ: ದುಂಬಾಲು ಬಿದ್ದ ವಿಶ್ವನಾಥ್, ಸುರಾನಾ, ಯೋಗೇಶ್ವರ್!

Shilpa D

ಬೆಂಗಳೂರು: ಶಾಸನಸಭೆಯಿಂದ ವಿಧಾನ ಪರಿಷತ್ ಆಯ್ಕೆ ಚುನಾವಣೆ ಮುಗಿದಿದ್ದು, ನಾಮ ನಿರ್ದೇಶಿತ ಸದಸ್ಯರ ಆಯ್ಕೆ ಬಾಕಿ ಉಳಿದಿದೆ, ಈ ತಿಂಗಳ ಅಂತ್ಯದಲ್ಲಿ ನಾಮ ನಿರ್ದೇಶಿತ ಸದಸ್ಯರ ಅಧಿಕಾರವಧಿ ಪೂರ್ಣಗೊಳ್ಳಲಿದೆ.

ತಮ್ಮನ್ನು ಪರಿಷತ್ ಗೆ ನಾಮ ನಿರ್ದೇಶನ ಮಾಡುವಂತೆ ಎಚ್ ವಿಶ್ವನಾಥ್ ಸಿಎಂ ಯಡಿೂರಪ್ಪ ಅವರಿಗೆ ಒತ್ತಡ ಹಾಕುತ್ತಿದ್ದಾರೆ. ಮೊದಲ ಆಯ್ಕೆ ಪಟ್ಟಿಯ ನಾಲ್ಕು ಮಂದಿಯಲ್ಲಿ ತಮ್ಮ ಹೆಸರು   ಇರಲಿದೆ ಎಂದು ಎಚ್ ವಿಶ್ವನಾಥ್ ಹೇಳಿದ್ದಾರೆ.

ರಾಜ್ಯ ಬಿಜೆಪಿ  ಉಪಾಧ್ಯಕ್ಷ ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನಾ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದು,  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗಿಂತ ಹೆಚ್ಚು ಸಕ್ರಿಯವಾಗಿದ್ದು ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಜೊತೆಗೆ ಮಾಜಿ ಎಂಎಲ್ ಸಿ ಗೋ ಮಧುಸೂದನ್ ಕೂಡ ಪರಿಷತ್ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ರವಿ ಕುಮಾರ್‌ರನ್ನು ಹೆಚ್ಚಾಗಿ ಅವಲಂಬಿಸಿದ್ದು ಪರಿಷತ್ತಿನಲ್ಲಿ ಅವರು ಪಕ್ಷವನ್ನು ಉತ್ತಮವಾಗಿ ಸಮರ್ಥಿಸಿಕೊಳ್ಳಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ ಮಧುಸೂದನ್ ಯಡಿಯೂರಪ್ಪ ವಿರೋಧಿ ಗುಂಪಿನಲ್ಲಿ ಸೇರಿಕೊಂಡಿರುವುದರಿಂದ ಅವರ ಆಯ್ಕೆ ಕಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಇವರ ಜೊತೆಗೆ ಒಕ್ಕಲಿಗರ ಪ್ರಬಲ ನಾಯಕ ಸಿಪಿ ಯೋಗೇಶ್ವರ್ ಕೂಡ ಎಂಎಲ್ ಸಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಅದಾದ ನಂತರ ಅವರು ಕೂಡ ಮಹಾತ್ವಾಕಾಂಕ್ಷಿಯಾಗಿದ್ದಾರೆ.

SCROLL FOR NEXT