ರಾಜಕೀಯ

'ಮಹಾಭಾರತ' ಬರೆದದ್ದು ಕೀಳುಜಾತಿಯ ವಾಲ್ಮೀಕಿ: ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಎಡವಟ್ಟು

Vishwanath S

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಪಾಕ್ ಏಜೆಂಟ್ ಎಂದು ಕರೆದು ವಿವಾದ ಕಿಡಿ ಹತ್ತಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದ್ದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. 

ಸದನದಲ್ಲಿ ಸಂವಿಧಾನದ ಕುರಿತು ಚರ್ಚೆಗಳು ನಡೆಯುತ್ತಿದ್ದು ಈ ವೇಳೆ ಮಾತನಾಡಿದ ಯತ್ನಾಳ್, ಮಹಾಭಾರತವನ್ನು ಬರೆದಿದ್ದು ಕೀಳುಜಾತಿಯ ವಾಲ್ಮೀಕಿ ಎಂದರು. 

ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಭಾಷಣ ಒಂದನ್ನು ಉಲ್ಲೇಖ ಮಾಡಿದ ಯತ್ನಾಳ್, ಹಿಂದೂಗಳಿಗೆ ವೇದಗಳು ಬೇಕಾಗಿದ್ದವು. ಆಗ ಅವರು ವ್ಯಾಸನನ್ನು ಕರೆದರು. ಅವರಿಗೊಂದು ಮಹಾ ಕಾವ್ಯ ಮಹಾಭಾರತ ಬೇಕಾಗಿತ್ತು. ಆವಾಗ ಅಸ್ಪೃಶ್ಯನಾದ ವಾಲ್ಮೀಕಿ ಬೇಕಾದ. ಇದೀಗ ಸಂವಿಧಾನದ ಅಗತ್ಯವಿದೆ ಅದಕ್ಕಾಗಿ ನನ್ನನ್ನು ಕರೆದರು ಎಂದು ಅಂಬೇಡ್ಕರ್ ಮಾತನ್ನು ಸದನದಲ್ಲಿ ತಪ್ಪಾಗಿ ಉಲ್ಲೇಖ ಮಾಡಿದರು. 

ಯತ್ನಾಳ್ ಅವರ ತಪ್ಪನ್ನು ಗಮನಿಸಿದ ಇತರ ಸದಸ್ಯರು ಮಹಾಭಾರತವನ್ನು ಬರೆದಿದ್ದು ವ್ಯಾಸ ಮಹರ್ಷಿ ಹಾಗೂ ರಾಮಾಯಣ ಬರೆದಿದ್ದು ವಾಲ್ಮೀಕಿ ಎಂದು ತಪ್ಪನ್ನು ತಿದ್ದಿದ್ದರು. 

ಡಾ. ಬಿಆರ್ ಅಂಬೇಡ್ಕರ್ ಅವರನ್ನು ದಲಿತ ನಾಯಕ ಎಂದು ಸೀಮಿತಗೊಳಿಸಿದ್ದು ದೇಶದ ದುರಂತ. ಮಹಾಪುರುಷರ ಹುಟ್ಟುಹಬ್ಬಕ್ಕೆ ಆಯಾ ಜಾತಿಯ ಜನರು ಮಾತ್ರ ಹೋಗುತ್ತಾರೆ. ಅಲ್ಲೂ ಜಾತಿ ಬಂದು ಬಿಟ್ಟಿದೆ ಎಂದರು. 

SCROLL FOR NEXT