ಬಸವನಗೌಡ ಪಾಟೀಲ್ ಯತ್ನಾಳ್ 
ರಾಜಕೀಯ

ವಿಧಾನಸಭೆಯಲ್ಲಿ ಅಂಬೇಡ್ಕರ್, ಸಾವರ್ಕರ್ ಕೊಂಡಾಡಿದ ಯತ್ನಾಳ್

ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿಯವರುನ್ನು, ನಕಲಿ ಹೋರಾಟಗಾರ, ಪಾಕಿಸ್ತಾನದ ಏಜೆಂಟ್ ಕರೆದು ವಿವಾದ ಸೃಷ್ಟಿಸಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಸಂವಿಧಾನ ಶಿಲ್ಪಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ವೀರ್ ವಾವರ್ಕರ್ ಅವರನ್ನು ಕೊಂಡಾಡಿದ್ದಾರೆ. 

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿಯವರುನ್ನು, ನಕಲಿ ಹೋರಾಟಗಾರ, ಪಾಕಿಸ್ತಾನದ ಏಜೆಂಟ್ ಕರೆದು ವಿವಾದ ಸೃಷ್ಟಿಸಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಸಂವಿಧಾನ ಶಿಲ್ಪಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ವೀರ್ ವಾವರ್ಕರ್ ಅವರನ್ನು ಕೊಂಡಾಡಿದ್ದಾರೆ. 

ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿರುವ ಅವರು, ಬಸವಣ್ಣ ಹಾಗೂ ಅಂಬೇಡ್ಕರ್ ನಡುವೆ ಸಾಕಷ್ಟು ಸಾಮ್ಯತೆಗಲಿದ್ದವು. ಸಾವರ್ಕರ್ ಅವರೂ ಕೂಡ ಸಾಕಷ್ಟು ಸ್ವಾತಂತ್ರ್ಯ ಹೋರಾಟವನ್ನು ಮಾಡಿದ್ದ ವ್ಯಕ್ತಿ ಎಂದು ಹೇಳಿದರು. 

ಇಲೇ ವೇಳೆ ಆರ್ಟಿಕಲ್ 370 ಕುರಿತು ಅಂಬೇಡ್ಕರ್ ಅವರ ಅಭಿಪ್ರಾಯದ ಬಗ್ಗೆ ಯತ್ನಾಳ್ ಮಾತನಾಡಲು ಆರಂಭಿಸಿದಾಗ ಮಧ್ಯೆ ಪ್ರವೇಶ ಮಾಡಿದ ಮಾಜಿ ಸಚಿವ ಪ್ರಿಯಾಂಕಾ ಖರ್ಗೆಯವರು, ಅಂಬೇಡ್ಕರ್ ಅವರು 370 ವಿಧಿ ಪರವಾಗಿರಲಿಲ್ಲ. ಆ ರಾಜ್ಯವನ್ನು ಪ್ರತ್ಯೇಕ ರಾಜ್ಯವೆಂದು ಪರಿಗಣಸಬಾರದು, ಭಾರತದ ಅವಿಭಾಜ್ಯವೆನ್ನಬೇಕು ಎಂದು ಹೇಳಿದ್ದರು. 

ಬಳಿಕ ಅಂಬೇಡ್ಕರ್ ಅವರು ಹೇಗೆ ಮಾತನಾಡುತ್ತಿದ್ದರು, ದಲಿತರಾಗಿ ಅವರು ಪಟ್ಟ ಸಂಕಷ್ಟಗಳೇನು ಎಂಬುದರ ಬಗ್ಗೆ ಯತ್ನಾಳ್ ಮಾತನಾಡಲು ಆರಂಭಿಸಿದರು. ಅಂಬೇಡ್ಕರ್ ಜಗತ್ತಿನ ಅತ್ಯುತ್ತಮ ಅರ್ಥಶಾಸ್ತ್ರಜ್ಞ. ಇದನ್ನು ನೆಹರೂ ಮನಗಾಣಲಿಲ್ಲ. ಬಳಿಕ ಅಂಬೇಡ್ಕರ್ ರನ್ನು ಚುನಾವಣೆಯಲ್ಲಿಯೂ ಸೋಲಿಸಿ ಸಂಚು ಮಾಡಲಾಯಿತು. ಅವರ ಅಂತ್ಯ ಸರ್ಕಾರಕ್ಕೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ. ಬಹಳ ವರ್ಷ ಸಂಸತ್ ನಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಿರಲಿಲ್ಲ್. ಇಂತರ ಉದಾತ್ತ ನಾಯಕನಿಗೆಮಾಡಿದ ಅಪಮಾನಗಳಿವು ಎಂದು ಬೇಸರ ವ್ಯಕ್ತಪಡಿಸಿದರು. 

ಅಂಬೇಡ್ಕರ್ ದೇಶದ ಪ್ರಧಾನಿಯಾಗಬೇಕಿತ್ತು. ಬೌದ್ಧ ಧರ್ಮ ಸ್ವೀಕರಿಸಿದ ಹಿನ್ನೆಲೆ ಅವರಿಗೆ ಅವಕಾಶ ಸಿಗಲಿಲ್ಲ. ನಾನು ಹಿಂದು ಆಗಿ ಸಾಯುವುದಿಲ್ಲ ಎಂದು ಅವರು ಹೇಳಬೇಕಾದರೆ ಮನಸ್ಸಿಗೆ ಎಷ್ಟು ನೋವಾಗಿರಬೇಡ. ಎಷ್ಟು ಕಿರುಕುಳ ನೀಡಿರಬಹುದು. ಒಂದು ವೇಳೆ ಅಂಬೇಡ್ಕರ್ ಬೌದ್ಧದರ್ಮದ ಬದಲು ಇಸ್ಲಾಂ ಸ್ವೀಕರಿಸಿದ್ದರೆ ನಮ್ಮ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ಪ್ರಶ್ನಿಸಿದರು. 

ಸಿಎಎ ಭಾರತದ ಭವಿಷ್ಯವಾಗಿದೆ. ದೇಶದಲ್ಲಿ ಕಾಮನ್ ಸಿವಿಲ್‌ ಕೋಡ್ ಬರಬೇಕು.‌ ಎಲ್ಲರಿಗೂ ಒಂದೇ ಮದುವೆ, ಎರಡೇ‌ ಮಕ್ಕಳು ನೀತಿ ಬರಬೇಕು. ಇಲ್ಲವಾದರೆ ಭಾರತ ಭಾರತವಾಗಿ ಇರುವುದಿಲ್ಲ. ಇಂದು ಸಿಎಎ ಬಗ್ಗೆ ಆಗುತ್ತಿರುವ ಚರ್ಚೆಯ ಬಗ್ಗೆ ಅಂಬೇಡ್ಕರ್ ಮೊದಲೇ ನಿರೀಕ್ಷಿಸಿದ್ದರು‌. ಪಾಕಿಸ್ತಾನದಲ್ಲಿರುವ ದಲಿತರು ಯಾವುದಾದರೂ ರೀತಿಯಲ್ಲಿ ಭಾರತಕ್ಕೆ ಆಗಮಿಸುವಂತೆ ಸೂಚನೆ ನೀಡಿದ್ದರು. ಅಷ್ಟೇ ಅಲ್ಲದೆ ಹಿಂದೂಗಳು ತಮ್ಮನ್ನು ನಿಕೃಷ್ಟವಾಗಿ ನೋಡುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ಹೈದ್ರಾಬಾದ್ ಮತ್ತಿತರ ಕಡೆಗಳಲ್ಲಿರುವ ಮುಸ್ಲೀಮರನ್ನು ದಲಿತರು ತಮ್ಮ ಸ್ನೇಹಿತರು ಎಂದು ಪರಿಗಣಿಸಿದರೆ ಆತ್ಮಘಾತುಕವಾಗುತ್ತದೆ ಎಂದು ಸ್ವತಃ ಅಂಬೇಡ್ಕರ್ ಹೇಳಿದ್ದರು ಎಂದು ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: 9 ಗಂಟೆಗಳ ಇಂಡಿಯಾ ಕೂಟದ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!