ರಾಜಕೀಯ

ಕಾಂಗ್ರೆಸ್ ಪಕ್ಷದ ಹೊಸ ಕಟ್ಟಡ ಪೂರ್ಣಗೊಳಿಸಲು ಕೆಪಿಸಿಸಿಯಲ್ಲಿ ಹಣ ಇಲ್ವಂತೆ!

Shilpa D

ಬೆಂಗಳೂರು: ಅಧಿಕಾರವಿಲ್ಲದ ರಾಜ್ಯ ಕಾಂಗ್ರೆಸ್ ಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ  ಕೆಪಿಸಿಸಿ ಕೇಂದ್ರ ಕಚೇರಿಯ ಪಕ್ಕದಲ್ಲಿರುವ ತನ್ನ ಹೊಸ ಕಚೇರಿಯನ್ನು ಪೂರ್ಣಗೊಳಿಸಲು ಹಣದ ಕೊರತೆಯಿದೆಯಂತೆ. 

ಈ ಯೋಜನೆಯನ್ನು 12 ವರ್ಷಗಳ ಹಿಂದೆ ಪ್ರಸ್ತಾಪಿಸಲಾಗಿತ್ತು ಮತ್ತು ಮೂವರು ಅಧ್ಯಕ್ಷರ ಅಧಿಕಾರಾವಧಿಯ ನಂತರವೂ ಇನ್ನೂ ಕೆಲಸ ಪೂರ್ಣಗೊಂಡಿಲ್ಲ.  ಹೀಗಾಗಿ ಕಾಂಗ್ರೆಸ್ ಸದಸ್ಯರು ಮತ್ತು ಮುಖಂಡರು ಹೊಸ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ಕೆಲಸ ಪೂರ್ಣಗೊಳಿಸಲಿದ್ದಾರೆ ಎಂಬ ಭರವಸೆಯಲ್ಲಿದ್ದಾರೆ.

ಕೆಪಿಸಿಸಿಗೆ ಈಗಾಗಲೇ ರೇಸ್ ಕೋರ್ಸ್ ರಸ್ತೆ ಮತ್ತು ಕ್ವೀನ್ಸ್ ರಸ್ತೆಯಲ್ಲಿ 2 ಕಚೇರಿಗಳನ್ನು ಹೊಂದಿದೆ. 2008 ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಆರ್‌ವಿ ದೇಶಪಾಂಡೆ  ಹೆಚ್ಚುವರಿ ಕಚೇರಿ ನಿರ್ಮಿಸಲು ನಿರ್ಧರಿಸಿದರು. ಡಾ.ಜಿ.ಪರಮೇಶ್ವರ ಅವರು ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗ 2014 ರಲ್ಲಿ ಶಂಕು ಸ್ಥಾಪನೆ ಮಾಡಲಾಯಿತು.

ಪ್ರಸ್ತಾಪಿತ ಯೋಜನೆಗೆ 12 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದ್ದು,  1200 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯವಿರುವ ಸಭಾಂಗಣಕ್ಕೆ ಒಂದು ಮಹಡಿ, ಭೋಜನಕ್ಕೆ ಒಂದು ಮಹಡಿ, ವಾಹನ ನಿಲುಗಡೆಗೆ ಎರಡು ಮಹಡಿ, ವಸತಿಗೃಹಕ್ಕೆ ಒಂದು ಮಹಡಿ ಮತ್ತು ಕಚೇರಿ ಬಳಕೆಗಾಗಿ ಎರಡು ಮಹಡಿಗಳನ್ನು ಕಟ್ಟಲಾಗಿದೆ.

ಇದೊಂದು ಮೆಗಾ ಪ್ರಾಜೆಕ್ಟ್ ಆಗಿದ್ದು  ಈಗಾಗಲೇ 12 ಕೋಟಿ ರು ಹಣ ಕಟ್ಟಡ ನಿರ್ಮಾಣಕ್ಕಾಗಿ ಖರ್ಚಾಗಿದೆ. ಇನ್ನೂ ಇಂಟಿರಿಯರ್ಸ್ ಕೆಲಸೆ ಉಳಿದುಕೊಂಡಿದೆ.

ನಮ್ಮ ಬಳಿ ಈಗಾಗಲೇ 2 ಕಚೇರಿಗಳಿವೆ,  ಆದರೆ ನಮಗೆ ದೊಡ್ಡ ಸಭಾಂಗಣವಿಲ್ಲ.  ದೊಡ್ಡ ದೊಡ್ಡ ಕಾರ್ಯ ಕ್ರಮಗಳಿಗಾಗಿ ನಾವು ಅಂಬೇಡ್ಕರ್ ಭವನ ಅಥವಾ ಇತರ ಸಭಾಂಗಣಗಳನ್ನು ನೇಮಿಸಿಕೊಂಡಿದ್ದೇವೆ. ನಮ್ಮದೇ ಕಟ್ಟದ ಇದ್ದರೇ ಬಾಡಿಗೆ  ಹಣವನ್ನು ಉಳಿಸಬಹುದು ಎಂದು ಹೇಳಿದ್ದಾರೆ.

“ಕಟ್ಟಡವನ್ನು ಪೂರ್ಣಗೊಳಿಸಲು ನಮಗೆ ಕನಿಷ್ಠ 5 ಕೋಟಿ ರೂ ಹಣ ಬೇಕಿದೆ,  ಜೊತೆಗೆ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್‌ಗಳು ಬಾಕಿ ಉಳಿದಿವೆ. ಹೆಚ್ಚುವರಿ ಆದಾಯ ಗಳಿಸಲು ನಮ್ಮ ಸಭಾಂಗಣವನ್ನು ಬಾಡಿಗೆಗೆ ನೀಡುವ ಯೋಜನೆ ಇದೆ.  ಡಿಕೆ ಶಿವಕುಮಾರ್ ಅವರ ಅಧಿಕಾರಾವಧಿಯಲ್ಲಾದರೂ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಹಲವು ಕಾರಣಗಳಿಂದಾಗಿ ಯೋಜನೆ ವಿಳಂಬವಾಯಿತು. "ಈಗ ಹೊಸ ಅಧ್ಯಕ್ಷರು ಬಂದಿದ್ದಾರೆ, ಇನ್ನೂ ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದ್ದಾರೆ.

SCROLL FOR NEXT