ರಾಜಕೀಯ

100 ದಿನ ಪೂರೈಸಿದ 'ಬಂಡಾಯ' ಸಚಿವರ ಮೇಲೆ ಬಿಜೆಪಿ ಹೈಕಮಾಂಡ್ 'ಹದ್ದಿನ ಕಣ್ಣು'!

Shilpa D

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಪುಟ ಸೇರಿ ನೂರು ದಿನ ಪೂರೈಸಿದ ಕಾಂಗ್ರೆಸ್-ಜೆಡಿಎಸ್ ಬಂಡಾಯ ಸಚಿವರುಗಳ ಕಾರ್ಯ ವೈಖರಿ ಮೇಲೆ ಬಿಜೆಪಿ ಹೈಕಮಾಂಡ್ ಹದ್ದಿನ ಕಣ್ಣಿಟ್ಟಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿದ್ದ 10 ರೆಬೆಲ್ ಶಾಸಕರು ಫೆಬ್ರವರಿ 6ರಂದು ಯಡಿಯೂರಪ್ಪ ಸಂಪುಟ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದರು. ಅದಾದ ನಾಲ್ಕು ದಿನಗಳ ನಂತರ ಖಾತೆ ಹಂಚಿಕೆ ಮಾಡಲಾಗಿತ್ತು.

ಬಜೆಟ್ ಅಧಿವೇಶನ ಆರಂಭವಾಯಿತು, ಆದರೆ ಕೊರೋನಾ ಲಾಕ್ ಡೌನ್ ಉಂಟಾದ ಪರಿಣಾಮ ಬಜೆಟ್ ಅಧಿವೇಶನವನ್ನು ಮೊಟಕುಗೊಳಿಸಲಾಯಿತು. ಲಾಕ್ ಡೌನ್ ಕಾರ್ಯವೈಖರಿ ನೂತನ ಸಚಿವರುಗಳ ಪಾಲಿಗೆ ಸವಾಲಾಯಿತು.

ಹೊಸ ಸಚಿವರುಗಳ ಕಾರ್ಯ ವೈಖರಿ ಮೇಲೆ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ತೀವ್ರ ನಿಗಾ ವಹಿಸಿದೆ ಎಂದು ಮೂಲಗಳು ತಿಳಿಸಿವೆ, ಕಳೆದ ವರ್ಷ ಮೊದಲ ಕಂತಿನಲ್ಲೇ ಅಧಿಕಾರ ಸ್ವೀಕರಿಸಿದ ಸಚಿವರುಗಳಿಗಿಂತ ಬಂಡಾಯ ಶಾಸಕರ ತಂಡವೇ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ.

ಹೊಸ ಸಚಿವರುಗಳಿಗೆ ಕೃಷಿ, ಕಾರ್ಮಿಕ, ವೈದ್ಯಕೀಯ ಶಿಕ್ಷಣ ಮತ್ತು ತೋಟಗಾರಿಕೆ ಇಲಾಖೆಯಂತ ಮಹತ್ವದ ಖಾತೆಗಳನ್ನು ನೀಡಲಾಯಿತು, ಇವರಲ್ಲಿ ಹಲವು ಸಚಿವರು ರಾಜ್ಯದ್ಯಂತ ಪ್ರವಾಸ ಮಾಡಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ, ಇದರ ಬಗ್ಗೆ ಮಾಹಿತಿ ಇರುವ ಮುಖ್ಯಮಂತ್ರಿ ಈ ಮಾಹಿತಿಯನ್ನು ದೆಹಲಿ ನಾಯಕರುಗಳಿಗೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೊಸ ಸಚಿವರುಗಳ ಕಾರ್ಯವೈಖರಿಯಲ್ಲಿ ಲೋಪಗಳು ಕಂಡು ಬಂದಿದ್ದರೇ ಮುಖ್ಯಮಂತ್ರಿಗಳಿಗೆ ಮುಜುಗರವಾಗುತ್ತಿತ್ತು. ಏಕೆಂದರೇ ತಮ್ಮದೇ ಪಕ್ಷದ ಹಲವರು ಈ ಶಾಸಕರುಗಳಿಗೆ ಸಚಿವ ಸ್ಥಾನ ನೀಡಲು ವಿರೋಧ ವ್ಯಕ್ತ ಪಡಿಸಿದ್ದರು  ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಈ ಸಂದರ್ಭ ಪ್ರತಿಯೊಬ್ಬ ಸಚಿವರಿಗೂ ಸವಾಲಾಗಿತ್ತು. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರು ಹಾಗೂ ಯಾವುದೇ ಕಾರ್ಡ್ ಇಲ್ಲದಿರುವವರು ಇದ್ದಾರೆ, ಅವರಿಗೆಲ್ಲಾ ಮಂಗಳವಾರದಿಂದ ಪ್ರತಿಯೊಬ್ಬರಿಗೆ 5 ಕೆಜಿ ಅಕ್ಕಿ ಪೂರೈಸಬೇಕಿದೆ. ವಲಸೆ ಕಾರ್ಮಿಕರು ಸೇರಿದಂತೆ 40.20 ಲಕ್ಷ ಮಂದಿಗೆ ಅಗತ್ಯ ಪಡಿತರ ಪೂರೈಸಬೇಕಿದೆ ಎಂದು ಹೇಳಿದ್ದಾರೆ.

ಕೃಷಿ ಸಚಿವ ಬಿಸಿ ಪಾಟೀಲ್ ಲಾಕ್ ಡೌನ್ ಸಮಯದಲ್ಲೇ ರಾಜ್ಯದ 30 ಜಿಲ್ಲೆಗಳಿಗೂ ಭೇಟಿ ನೀಡಿದ್ದಾರೆ.  ಇದು ಕಟಾವು ಮಾಡುವ ಸಂದರ್ಭ ಜೊತೆಗೆ ಪೂರ್ವ ಮುಂಗಾರಿನ ಸಮಯವಾಗಿದೆ. ರೈತರನ್ನು ಮನೆಯಲ್ಲಿ ಇರಬೇಕು ಎಂದು ನಾವು ಹೇಳಲು ಸಾಧ್ಯವಿಲ್ಲ, ಆದರೂ ಅವರ ಆರೋಗ್ಯದ ಕಡೆ ಗಮನ ಹರಿಸಬೇಕಿದೆ ಎಂದು ಬಿಸಿ ಪಾಟೀಲ್ ಹೇಳಿದ್ದಾರೆ.

ನೂತನ ಸಚಿವರು ಕಾರ್ಯಕ್ಷಮತೆ ಮೇಲೆ ಕೊರೋನಾ ಕರಿಛಾಯೆ ಬೀರುತ್ತಿದೆ, ಸರ್ಕಾರಕ್ಕೆ ಈ ಮಂತ್ರಿಗಳ ಸಾಮೂಹಿಕ ಕೊಡುಗೆ ಅತ್ಯಂತ ಪ್ರಾಮುಖ್ಯವಾಗಿತ್ತು, ಆದರೆ ಇದು ಮತ್ತೆ ನಿರಾಶಾದಾಯಕವಾಗಿದೆ. ಏಕೆಂದರೆ ಅಧಿಕಾರ ಶಾಹಿ ವರ್ಗ ಇದನ್ನು ನಿರ್ವಹಿಸುತ್ತದೆ, ಏಕೆಂದರೆ ಹೊಸ ಸಚಿವರು ತಮ್ಮ ದೃಷ್ಟಿಕೋನವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ,
ಇದು ಹೊಸ ಸಚಿವರುಗಳ ರಾಜಕೀಯ ಬೆಳವಣಿಗೆ ಮತ್ತು ವೈಯಕ್ತಿಕ ಬೆಳವಣಿಗೆಯ ವಿಷಯವಾಗಿದ್ದು, ಅದನ್ನು ಸವಾಲಾಗಿ ಸ್ವೀಕರಿಸಲು ಇವರು ವಿಪಲರಾಗಿದ್ದಾರೆ ಎಂದು ರಾಜಕೀಯ ತಜ್ಞ ಪ್ರೊ. ಹರೀಶ್ ರಾಮಸ್ವಾಮಿ ತಿಳಿಸಿದ್ದಾರೆ.

SCROLL FOR NEXT