ರಾಜಕೀಯ

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಹೆಚ್ಚಿದ ಶೇಕಡಾವಾರು ಮತದಾನ: ಗೆಲ್ಲುವ ಲೆಕ್ಕಾಚಾರದಲ್ಲಿ ಬಿಜೆಪಿ, ಕಾಂಗ್ರೆಸ್

Sumana Upadhyaya

ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಶೇಕಡಾವಾರು ಪ್ರಮಾಣ ಈ ಬಾರಿ ಹೆಚ್ಚಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗೆ ತಮ್ಮದೇ ರೀತಿಯಲ್ಲಿ ಲೆಕ್ಕಾಚಾರ ಹಾಕುತ್ತಿದ್ದಾರೆ.

ಆದರೆ ಸ್ವತಂತ್ರ ಅಭ್ಯರ್ಥಿ ಬಸವರಾಜ್ ಗುರಿಕಾರ್ ನವೆಂಬರ್ 10ರಂದು ನಡೆಯುವ ಮತ ಎಣಿಕೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಲೆಕ್ಕಾಚಾರವನ್ನು ತಲೆಕೆಳಗು ಮಾಡುವ ಸಾಧ್ಯತೆಯಿದೆ.

ಹಿಂದಿನ ಚುನಾವಣೆಗೆ ಹೋಲಿಸಿದರೆ ಕಳೆದ ಬುಧವಾರದ ಮತದಾನದಲ್ಲಿ ಶೇಕಡಾ 20ರಷ್ಟು ಹೆಚ್ಚಾಗಿದೆ. ಈ ಬಾರಿ ಶೇಕಡಾ 70.11ರಷ್ಟು ಮತದಾನವಾಗಿದ್ದು 2014ರಲ್ಲಿ ಶೇಕಡಾ 49.48ರಷ್ಟಾಗಿತ್ತು.

ಈ ಬಾರಿ ಕಡಿಮೆ ಸಂಖ್ಯೆಯಲ್ಲಿ ಮತದಾರರು ಸೇರ್ಪಡೆಗೊಂಡಿದ್ದರೂ ಕೂಡ ಮತದಾನ ಹೆಚ್ಚಿನ ಸಂಖ್ಯೆಯಲ್ಲಿ ಆಗಿದೆ. ಒಟ್ಟು 74 ಸಾವಿರದ 472 ಮತದಾರರು ದಾಖಲಾತಿ ಮಾಡಿಕೊಂಡಿದ್ದು ಕಳೆದ ಬಾರಿ 94 ಸಾವಿರದ 352 ಮತದಾರರಿದ್ದರು.

ಕ್ಷೇತ್ರದ ಪದವೀಧರರು ತಮ್ಮನ್ನು ಸೇರ್ಪಡೆಗೊಳಿಸಲು ಆಸಕ್ತಿ ತೋರಿಸದ ಕಾರಣ ಮತದಾನವು ಅರ್ಧದಷ್ಟು ದಾಟಬಾರದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅದು ಈಗ ತಲೆಕೆಳಗಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಮತದಾನವು ತಮ್ಮ ಅಭ್ಯರ್ಥಿಯ ವಿಜಯದ ಸೂಚಕವಾಗಿದೆ ಎಂದು ಹೇಳಿದ್ದಾರೆ. ಆದರೆ ರಾಜಕೀಯ ವೀಕ್ಷಕರು ಇದು ತ್ರಿಕೋನ ಸ್ಪರ್ಧೆ ಎನ್ನುತ್ತಿದ್ದಾರೆ.

ಅಭ್ಯರ್ಥಿ ಎಸ್ ವಿ ಶಂಕನೂರು ಅವರಿಗೆ ವರವಾಗಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ನಮ್ಮ ಪಕ್ಷ ಈಗ ಅಧಿಕಾರದಲ್ಲಿದೆ, ನೀಡಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯವಿದೆ ಎಂದರು.

ಆದರೆ ಪಕ್ಷದ ಕಾರ್ಯಕರ್ತರ ಸಂಪರ್ಕ ಜಾಲ ಮತ್ತು ಕಾರ್ಯತಂತ್ರವಾಗಿ ಅದನ್ನು ಬಳಸಿಕೊಂಡಿರುವುದರಿಂದ ತಮ್ಮ  ಬಿಜೆಪಿ ನಾಯಕರ ಆಡಳಿತದಿಂದ ಬೇಸತ್ತು ಯುವ ಮತದಾರರು ತಮ್ಮ ಕಡೆಗೆ ಒಲಿದಿದ್ದಾರೆ ಎನ್ನುತ್ತಾರೆ ಕಾಂಗ್ರೆಸ್ ನಾಯಕರು. ತಮ್ಮ ಪಕ್ಷದ ಅಭ್ಯರ್ಥಿ ಆರ್ ಎಂ ಕುಬೇರಪ್ಪ ಪರ ಮತದಾರರು ಒಲಿಯುತ್ತಾರೆ ಎನ್ನುತ್ತದೆ ಕಾಂಗ್ರೆಸ್.

SCROLL FOR NEXT