ಅಶೋಕ 
ರಾಜಕೀಯ

ನಾನೇ ಬಿಜೆಪಿ ಅಭ್ಯರ್ಥಿ ಎಂದು ಭಾವಿಸಿ ಮತದಾನ ಮಾಡಿದೆ: ಸಚಿವ ಆರ್.ಅಶೋಕ್

ಕಂದಾಯ ಸಚಿವ ಆರ್.ಅಶೋಕ್ ಪತ್ನಿ ಸಮೇತರಾಗಿ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಪತ್ನಿ ಸಮೇತರಾಗಿ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. 

ಸೈಂಟ್ ಕ್ಲಾರೆಟ್ ಶಾಲೆಯ ಮತಕೇಂದ್ರ 22ರಲ್ಲಿ ಸಚಿವ ಆರ್.ಅಶೋಕ್‌ ಮತದಾನ ಮಾಡಿದರು. ಸ್ವಲ್ಪ ಸಮಯ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ನಾನೇ ಬಿಜೆಪಿ ಅಭ್ಯರ್ಥಿ ಎಂದು ಭಾವಿಸಿ ಇಂದು ಮತದಾನ‌ ಮಾಡಿದ್ದೇನೆ. ಕಳೆದ 15 ದಿನಗಳಲ್ಲಿ ಏನೇನು ಹೇಳಬೇಕು ಏನೇನು ಕೇಳಬೇಕು ಎಲ್ಲವನ್ನೂ ಮಾಡಿದ್ದೇವೆ. ಇಂದು ನಿಮ್ಮ ಸರದಿ. ದಯವಿಟ್ಟು ಮತಗಟ್ಟೆಗೆ ಬಂದು ಮತದಾನ‌ ಮಾಡಿ. ಬೆಂಗಳೂರು, ಆರ್.ಆರ್.ನಗರ ಅಭಿವೃದ್ಧಿಗಾಗಿ ಮತ ಮಾಡಿ ಎಂದು ಮನವಿ ಮಾಡಿದರು.

ಸಂಜೆ ಆರು ಗಂಟೆ ವರೆಗೆ ಎಲ್ಲರೂ ಮತದಾನ ಮಾಡಲು ಬರುತ್ತಾರೆ ಎಂಬ ವಿಶ್ವಾಸ ಇದೆ. ನಾನು ಎಲ್ಲರಲ್ಲೂ ಮತದಾನ ಮಾಡುವಂತೆ ಮನವಿ ಮಾಡಿತ್ತೇನೆ. ಕೋವಿಡ್ ಹಿನ್ನೆಲೆ ಮತದಾನ ಮಾಡಲು ಏನೂ ಸಮಸ್ಯೆ ಇಲ್ಲ. ಚುನಾವಣಾ ಆಯೋಗ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಮತದಾನಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟ ಪಡಿಸಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಓಮನ್ ಕರಾವಳಿಯಲ್ಲಿ 11 ಭಾರತೀಯರಿದ್ದ ಹಡಗಿನ ಮೇಲೆ ದಾಳಿಗೆ ಭಾರತ ಖಂಡನೆ; 10 ಜನರ ರಕ್ಷಣೆ, ಓರ್ವ ನಾಪತ್ತೆ

ಅಸ್ಸಾಂ: ರೋಡ್ ರೋಲರ್ ಬಳಸಿ ಸೀಜ್ ಮಾಡಿದ್ದ 472 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ! Video

Iranಗೆ ಅಮೆರಿಕಾ ಬಿಗ್ ಶಾಕ್: 140 ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ; Gulf ರಾಷ್ಟ್ರಗಳತ್ತ ಕ್ಷಿಪಣಿ ಹಾರಿಸಿ Tehran ತಿರುಗೇಟು..!

KSRTC ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿಗೆ ಧರ್ಮದೇಟು, ವಿಡಿಯೋ ವೈರಲ್

ಬಂಗಾಳ ಕೊಲ್ಲಿಯಲ್ಲಿ ಭೂಕಂಪ: ವಿಶಾಖಪಟ್ಟಣಂನಲ್ಲೂ ನಡುಗಿದ ಭೂಮಿ, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲು..!