ರಾಜಕೀಯ

ಗ್ರಾಪಂ ಚುನಾವಣೆ ಫಲಿತಾಂಶ ಬರುವವರೆಗೂ ಸಚಿವಾಕಾಂಕ್ಷಿಗಳು ಕಾಯಲೇಬೇಕು: ಬೈರತಿ ಬಸವರಾಜ್

Lingaraj Badiger

ಬೆಂಗಳೂರು: ಗ್ರಾ.ಪಂ. ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಚುನಾವಣೆ ಶಾಂತಿಯುತವಾಗಿ ನಡೆಯಲು ಎಲ್ಲಾ ಕ್ರಮಕೈಗೊಳ್ಳಲಾಗಿದ್ದು, ಎಲ್ಲಾ ಸಚಿವರಿಗೂ ಚುನಾವಣಾ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾ.ಪಂ. ಚುನಾವಣೆ ಮುಂದೂಡಲು ಸರ್ಕಾರವೇನೂ ಪ್ರಯತ್ನಿಸಿರಲಿಲ್ಲ. ಕೊರೋನಾ ಕಾರಣಕ್ಕಾಗಿ ಮುಂದೂಡಲು ಚಿಂತನೆ ನಡೆಸಿತ್ತಷ್ಟೆ. ಈಗ ಚುನಾವಣಾ ಆಯೋಗ ಚುನಾವಣೆ ಘೋಷಿಸಿದ್ದು, ಆಯೋಗದ ತೀರ್ಮಾನಕ್ಕೆ ಬದ್ಧರಾಗಬೇಕಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿರುವುದರಿಂದ ಸಂಪುಟ ವಿಸ್ತರಣೆ ಅಥವಾ ಪುನರಾಚನೆ ಮುಂದಕ್ಕೆ ಹೋಗುವುದು ಸಹಜ. ಚುನಾವಣೆ ಫಲಿತಾಂಶ ಬರುವವರೆಗೂ ಸಚಿವಾಕಾಂಕ್ಷಿಗಳು ಕಾಯಲೇಬೇಕಾಗುತ್ತದೆ. ಏನೂ ಮಾಡಲು ಆಗುವುದಿಲ್ಲ ಎಂದು ಬೈರತಿ ಹೇಳಿದರು.

ಈ ಮಧ್ಯೆ, ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಗೂ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ. ಇನ್ನು ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಆಗುತ್ತೇನೋ ನೋಡೋಣ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

SCROLL FOR NEXT