ರಾಜಕೀಯ

ಸುರೇಶ್ ಅಂಗಡಿ ಕೇಂದ್ರ ಸಚಿವರಾಗಿದ್ದರೂ ಬೆಳಗಾವಿಗೆ ತಂದು ಗೌರವ ಸಲ್ಲಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ: ಡಿಕೆ.ಶಿವಕುಮಾರ್

Manjula VN

ಬೆಳಗಾವಿ: ಸುರೇಶ್ ಅಂಗಡಿಯವರು ಕೇಂದ್ರದಲ್ಲಿ ಸಚಿವರಾಗಿದ್ದರು. ಅಲ್ಲದೇ, ಬೆಳಗಾವಿಯಲ್ಲಿ ಮಿಲಿಟರ್ ಬೇಸ್ ಇದ್ದರೂ ಪಾರ್ಥೀವ ಶರೀರವನ್ನು ಬೆಳಗಾವಿಗೆ ತಂದು ಗೌರವ ಸಲ್ಲಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಅವರು ಟೀಕಿಸಿದ್ದಾರೆ. 

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸುರೇಶ್ ಅಂಗಡಿಯವರ ಪಾರ್ಥಿವ ಶರೀರ ಬೆಳಗಾವಿಗೆ ತರಬೇಕಿತ್ತು. ಬೆಳಗಾವಿಯಲ್ಲಿ ಅಂತಿಮ ದರ್ಶನಕ್ಕೆ ಕ್ಷೇತ್ರದ ಜನರಿಗೆ ಅವಕಾಶ ಕೊಡಬಹುದಾಗಿತ್ತು. 2 ತಿಂಗಳ ಹಿಂದೆ ಸಾಕಷ್ಟು ರಾಜಕಾರಣ ನಡೆಯಿತು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ಆದರೆ ಈ ಸಂದರ್ಭದಲ್ಲಿ ನೊಂದ ಕುಟುಂಬಕ್ಕೆ ಸರ್ಕಾರ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. 

ಸುರೇಶ್ ಅಂಗಡಿ ಕೇಂದ್ರದ ಮಂತ್ರಿ. ಅಲ್ಲದೇ ಬೆಳಗಾವಿಯಲ್ಲಿ ಮಿಲಿಟರಿ ಬೇಸ್ ಇದೆ. ಆದರೂ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತಂದು ಗೌರವ ಸಲ್ಲಿಸಲು ಕೇಂದ್ರ, ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಕಿಡಿಕಾರಿದ್ದಾರೆ. 

ಇದೇ ವೇಳೆ ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತು ಮಾತನಾಡಿದ ಅವರು, ಯೋಗಿ ಆದಿತ್ಯನಾಥ್ ಸರ್ಕಾರ ಇಡೀ ದೇಶಕ್ಕೆ ರೋಗ ತಂದು ಕೊಡಲಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಇಡೀ ನಮ್ಮ ದೇಶದ ಗೌರವ, ಸ್ವಾಭಿಮಾನ, ಸಮುದಾಯ ಎಲ್ಲರಿಗೂ ಇಡೀ ಪ್ರಪಂಚಕ್ಕೆ ಭಾರತದ ಬಗ್ಗೆ ಕಪ್ಪು ಚುಕ್ಕೆ. ಇಡೀ ಮನುಕುಲಕ್ಕೆ ಅವಮಾನವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 

SCROLL FOR NEXT