ಖುಷ್ಬೂ ಬಿಜೆಪಿ ಸೇರ್ಪಡೆ 
ರಾಜಕೀಯ

ಖುಷ್ಬೂ ನಿರ್ಗಮನದಿಂದ ರಾಜ್ಯ ಕಾಂಗ್ರೆಸ್ ಮೇಲೆ ಪರಿಣಾಮ ಬೀರಲಿದೆಯೇ?

ಎಐಸಿಸಿ ವಕ್ತಾರೆ ಸ್ಥಾನಕ್ಕೆ ನಟಿ ಖುಷ್ಬೂ ಸುಂದರ್ ಅವರ ರಾಜೀನಾಮೆಯಿಂದ ರಾಜ್ಯದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರಲಿದೆಯೇ? ಎಂಬುದು ಸ್ಥಳೀಯ ಮುಖಂಡರನ್ನು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

ಬೆಂಗಳೂರು: ಎಐಸಿಸಿ ವಕ್ತಾರೆ ಸ್ಥಾನಕ್ಕೆ ನಟಿ ಖುಷ್ಬೂ ಸುಂದರ್ ಅವರ ರಾಜೀನಾಮೆಯಿಂದ ರಾಜ್ಯದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರಲಿದೆಯೇ? ಎಂಬುದು ಸ್ಥಳೀಯ ಮುಖಂಡರನ್ನು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

ಕೆಲ ರಾಜಕೀಯ ವಿಶ್ಲೇಷಕರು ಇದನ್ನು ರೋಷನ್ ಬೇಗ್ ಅವರ ಸ್ಥಿತಿಗೂ ಹೋಲಿಸಿ ನೋಡುತ್ತಾರೆ. ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಆಗಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ವಿರುದ್ಧ ಮಾತನಾಡಿದ್ದ ರೋಶನ್ ಬೇಗ್ ಅವರಿಗೆ ನೋಟಿಸ್ ನೀಡಲಾಗಿತ್ತು. ಪ್ರತಿಕ್ರಿಯೆ ನೀಡಲು ನಿರಾಕರಿಸಿ ರೋಶನ್ ಬೇಗ್ ಪಕ್ಷ ತೊರೆದಿದ್ದರು.

ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ 14 ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದರು.ಈ ಶಾಸಕರು ಮತ್ತು ಖುಷ್ಬೂ ಅಂತಹವರ ನಿರ್ಗಮನಕ್ಕೆ ಪಕ್ಷದೊಳಗಿನ ಗೊಂದಲ, ಹತಾಶೆ, ಪ್ರೋತ್ಸಾಹ ನೀಡದಿರುವುದು ಕಾರಣವಾಗಿದೆ ಎಂಬ ಅಂಶ ಪ್ರಧಾನವಾಗಿದೆ.

ಇದು ತಕ್ಷಣ ಯಾವುದೇ ಪರಿಣಾಮ ಬೀರಲ್ಲ, ಇನ್ನಷ್ಟು ಮಂದಿ ಪಕ್ಷ ತೊರೆಯಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳುತ್ತಾರೆ. ಪಕ್ಷದ ನಿರ್ವಹಣೆ ಮಾಡುವವರಿಂದ ಬೇಸತ್ತು ಕಳೆದ ವರ್ಷ ಬಿಜೆಪಿ ಸೇರಿದ್ದಾಗಿ ಮಾಜಿ ಕಾಂಗ್ರೆಸ್ ಮುಖಂಡ ಟಾಮ್ ವಡಕ್ಕನ್ ಹೇಳುತ್ತಾರೆ.

ಆದರೆ, ಇಂತಹ ಅಂಶಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನಿರಾಕರಿಸಿದ್ದು, ಇದನ್ನು ಪಕ್ಷದ ಆಂತರಿಕವಾಗಿ ಬಗೆಹರಿಸಿಕೊಳ್ಳಬಹುದಾಗಿತ್ತು. ಇಂತಹ ನಾಯಕರಿಗೆ ಕೆಲವು ಕಡೆಗಳಿಂದ ಒತ್ತಡ ಇರುತ್ತದೆ. ಅವರ ತತ್ವ ಸಿದ್ದಾಂತಗಳು ಈಗ ಏನಾಗಿವೆ? ಇದು ಜನರ ನಂಬಿಕೆಗೆ ಬಗೆದ ದ್ರೋಹವಲ್ಲವೇ ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ