ರಾಜಕೀಯ

ಆರ್.ಆರ್. ನಗರ ಮತದಾರರ ಸೆಳೆಯಲು ಬಿಜೆಪಿ ಟ್ರಿಕ್ಕಿ ಗೇಮ್: ಹಳೇಯ ನಾಯಕರ ಜೊತೆ ಹೊಸ ಸಚಿವರ ಮಿಕ್ಸ್

Shilpa D

ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆ ಗೆಲ್ಲಲು ಹಲವು ವಿಧವಾದ ರಣತಂತ್ರಗಳನ್ನು ಬಳಸುತ್ತಿದೆ. 

ಹಳೇ ನಿಷ್ಠಾವಂತ ಬಿಜೆಪಿ ನಾಯಕರು ಮತ್ತು ಹೊಸದಾಗಿ ಬಿಜೆಪಿ ಸೇರಿರುವವರನ್ನು ಮಿಕ್ಸ್ ಮಾಡಿ ತಂಡ ರಚಿಸಿದ್ದಾರೆ. ನವೆಂಬರ್ 3 ರಂದು ನಡೆಯಲಿರುವ ಉಪಚುನಾವಣೆಗಾಗಿ ತನ್ನ ಅಭ್ಯರ್ಥಿ ಮುನಿರತ್ನ ನಾಯ್ಡು ಅವರನ್ನು ಗೆಲ್ಲಿಸಲು ರಣತಂತ್ರ ರೂಪಿಸಿದೆ. 

ಹಳೇಯ ನಾಯಕರು ಸಾಂಪ್ರದಾಯಿಕ ಮತದಾರರನ್ನು ಸೆಳೆಯಬಹುದು ಹಾಗೂ ಬಿಜೆಪಿಗೆ ಬಂದಿರುವ ಹೊಸಬರು ಬೇಲಿ ಹಿಂದೆ ಅಡಗಿರುವ ಮತಗಳನ್ನು ತರಬಹುದೆಂಬ ಯೋಜನೆ ಇದರಲ್ಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬುಧವಾರ ಆರ್ ಆರ್ ನಗರ ಮತ್ತು ಶಿರಾ ಉಪಚುನಾವಣೆಗಾಗಿ ತಂಡಗಳನ್ನು ರಚಿಸಿದ್ದಾರೆ. ಓಲ್ಡ್ ಕ್ಯಾಂಪ್ ನಿಂದ ಆರ್.ಅಶೋಕ ಮತ್ತು ಹೊಸಬರ ಕ್ಯಾಂಪ್ ನಿಂದ ಎಸ್ ಟಿ ಸೋಮಶೇಖರ್ ಮತ್ತು ಬೈರತಿ ಬಸವರಾಜು ಅವರನ್ನೊಳಗೊಂಡ ತಂಡ ರಚಿಸಿದ್ದಾರೆ.

ಇದನ್ನು ಹೊರತು ಪಡಿಸಿ, ಅರವಿಂದ ಲಿಂಬಾವಳಿ ಮತ್ತು  ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಮತ್ತು ಇತರರು ಇದ್ದಾರೆ. ಇವರೆಲ್ಲಾ ಬೆಂಗಳೂರು ನಗರವನ್ನು ಪ್ರತಿನಿಧಿಸುವ ನಾಯಕರಾಗಿದ್ದಾರೆ.

ರಾಜ ರಾಜೇಶ್ವರಿ ನಗರ ಒಂದು ವೈಶಿಷ್ಟ್ಯವಾದ ಕ್ಷೇತ್ರ, ಭೌಗೋಳಿಕವಾಗಿ ಅತಿ ದೊಡ್ಡ ಕ್ಷೇತ್ರವಾಗಿರುವ ಆರ್ ಆರ್ ನಗರ, 30 ಕಿಮೀ ವ್ಯಾಪ್ತಿಯಲ್ಲಿದೆ, ತುಮಕೂರು ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ ವರೆಗೂ ಚಾಚಿಕೊಂಡಿದೆ.  ಆರ್ ಆರ್ ನಗರದಲ್ಲಿ ಸುಮಾರು 4.5 ಲಕ್ಷ ಮತದಾರರಿದ್ದು 1 ಲಕ್ಷ ಒಕ್ಕಲಿಗರಿದ್ದಾರೆ, ಹಳೇಯ ಉತ್ತರಹಳ್ಳಿ ಭಾಗದಲ್ಲಿ ಬಿಜೆಪಿಗೆ ಉತ್ತಮ ಮತದಾರರಿದ್ದಾರೆ. ಇದು ಆರ್ ಅಶೋಕ ಅವರ ಪ್ರದೇಶವೂ ಆಗಿತ್ತು. ತುಮಕೂರು ರಸ್ತೆಯ ವರೆಗಿರುವ ಈ ಕ್ಷೇತ್ರ ಯಶವಂತಪುರ ವಿಧಾನಸಭಾ ಕ್ಷೇತ್ರವಿದ್ದು, ಇಲ್ಲಿ ಬಿಜೆಪಿ ಎಸ್ ಟಿ ಸೋಮಶೇಖರ್ ಶಾಸಕರಾಗಿದ್ದಾರೆ. 

ಇಬ್ಬರು ಶಾಸಕರು ಒಕ್ಕಲಿಗ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ,ಸುಮಾರು 50 ಸಾವಿರ ಕುರುಬ ಮತದಾರರಿದ್ದು, ಅವರನ್ನು ಓಲೈಸಲು ಭೈರತಿ ಬಸವ ರಾಜು ಅವರನ್ನು ತಂಡಕ್ಕೆ ಸೇರಿಸಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ಇನ್ನೂ ಶಾಸಕ ಅರವಿಂದ ಲಿಂಬಾವಳಿ ಭೋವಿ ಜನಾಂಗಕ್ಕೆ ಸೇರಿದವರಾಗಿದ್ದು ಸಂಪುಟದಲ್ಲಿ ಖಾತೆ ಬಯಸಿದ್ದಾರೆ. ಎಸ್ ಸಿ ಭೋವಿ ಜನಾಂಗ ಸೇರುತ್ತದೆ, ಹೀಗಾಗಿ ದಲಿತ ಮತಗಳ ಓಲೈಕೆಗಾಗಿ ಲಿಂಬಾವಳಿಗೆ ಟಾಸ್ಕ್ ನೀಡಲಾಗಿದೆ.

2013ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಮುನಿರತ್ನ 71ಸಾವಿರ ಮತ, ಜೆಡಿಎಸ್  ಅಭ್ಯರ್ಥಿ 52 ಸಾವಿರ ಮತ ಗಳಿಸಿದ್ದರು. 2018ರ ಚುನಾವಣೆಯಲ್ಲಿ ಮುನಿರತ್ನ 1 ಲಕ್ಷ ಮತ ಪಡೆದಿದ್ದರು, ಬಿಜೆಪಿ ಅಭ್ಯರ್ಥಿ 82 ಸಾವಿರ ಮತ ಗಳಿಸಿದ್ದರು. ಈ ಬಾರಿ ಕಾಂಗ್ರೆಸ್ ಮತಗಳನ್ನು ಮುನಿರತ್ನ ಪರವಾಗಿ ಬದಲಾಯಿಸುವುದು ದೊಡ್ಡ ಸವಾಲಾಗಿದೆ. 
 

SCROLL FOR NEXT