ರಾಜಕೀಯ

ಆರ್.ಆರ್.ನಗರ ಉಪ ಚುನಾವಣೆಯನ್ನು ಕೂಡಲೇ ರದ್ದುಗೊಳಿಸಿ : ಆಮ್ ಆದ್ಮಿ ಪಕ್ಷದ ಒತ್ತಾಯ

Raghavendra Adiga

ಬೆಂಗಳೂರು: ಆರ್‌.ಆರ್. ನಗರ ಉಪಚುನಾಣೆಯಲ್ಲಿ ಮೂರು ಪ್ರಮುಖ ಪಕ್ಷಗಳ ನಾಯಕ ರುಗಳ, ಶಾಸಕರು ಕ್ಷೇತ್ರದಲ್ಲೇ ಬೀಡುಬಿಟ್ಟು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.ಈ ಎಲ್ಲಾ ನಾಯಕರುಗಳ ಖರ್ಚು ವೆಚ್ಚಗಳನ್ನು ಚುನಾವಣೆಗೆ ನಿಂತಿರುವ ಅಭ್ಯರ್ಥಿಯೇ ಭರಿಸಬೇಕು.ಪ್ರಚಾರದ ಲೆಕ್ಕಾಚಾರ ನೋಡಿದರೆ ಒಬ್ಬ ಅಭ್ಯರ್ಥಿಗೆ ನಿಗಧಿ ಪಡಿಸಿರುವ ಚುನಾವಣಾ ವೆಚ್ಚವನ್ನು ಮೀರಿ ಹೋಗಿದ್ದು ಈ ಕೂಡಲೇ ಈ ಅಪಾರದರ್ಶಕ ಉಪ ಚುನಾವಣೆಯನ್ನು ರದ್ದು ಮಾಡಬೇಕು ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಉಪಾಧ್ಯ ಕ್ಷ ಸುರೇಶ್ ರಾಥೋಡ್ ಆಗ್ರಹಿಸಿದರು.

ಆಮ್ ಆದ್ಮಿ ಪಕ್ಷದ ಮಾಧ್ಯಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಡಿ.ಕೆ.ಶಿವ ಕುಮಾರ್ ಅವರು ಕೆಪಿಸಿಸಿ ಸಾರಥ್ಯ ವಹಿಸಿದ ಮೇಲೆ ಶತಯಾಗತಯಾ ರಕ್ತಪಾತವಾದರೂ ಚುನಾವಣೆ ಗೆಲ್ಲಲೇ ಬೇಕು ಎನ್ನುವ ಜಿದ್ದಿಗೆ ಬಿದ್ದಿದ್ದಾರೆ.ಅಲ್ಲದೇ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರೇ ಹೇಳಿರುವಂತೆ ಕ್ಷೇತ್ರಕ್ಕೆ ಹೊರಗಿನಿಂದ 4 ಸಾವಿರಕ್ಕೂ ಹೆಚ್ಚು ಗೂಂಡಾಗಳು ಬಂದು ಸೇರಿಕೊಂಡಿದ್ದಾರೆ ಎಂದು ಸಂದೇಹವಿದೆ. ಚುನಾವಣಾ ಆಯೋಗ ಕಿಂಚಿತ್ತೂ ಕ್ರಮ ತೆಗೆದು ಕೊಂಡಿಲ್ಲ,ಇದರಿಂದ ಜನರಲ್ಲಿ ಭಯದ ವಾರಾವರಣ ಮೂಡಿ ಮತದಾನದ ಪ್ರಮಾಣ ಕುಸಿಯುವ ಸಾಧ್ಯತೆ ಇದೆ ಎಂದರು

ಚುನಾವಣಾ ಆಯೋಗ ನೇಮಿಸಿದ ವಿಶೇಷ ಚುನಾವಣಾಧಿಕಾರಿ ನಿಷ್ಕ್ರಿಯವಾಗಿದ್ದು ಅಕ್ರ್ಮಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸದೆ ಕುಳಿತಿದ್ದಾರೆ. ಆಡಳಿತ ಹಾಗೂ ವಿರೋಧ ಪಕ್ಷಗಳು ಜಿದ್ದಾಜಿದ್ದಿಗೆ ಬಿದ್ದಿರುವ ಈ ಚುನಾವಣೆಯಲ್ಲಿ ಸಣ್ಣ ಅಕ್ರಮವೂ ನಡೆದಿಲ್ಲವೆ? ಅಕ್ರಮ ರಹಿತವಾದ ಚುನಾವಣೆ ಇದಾದರೆ ನಿಜಕ್ಕೂ ವಿಶ್ವದಾಖಲೆ ಎನ್ನಬಹುದು ಎಂದು ವ್ಯಂಗ್ಯವಾಡಿದರು,

ಬಿಜೆಪಿ ಅಭ್ಯರ್ಥಿ ಮುನಿರತ್ನ ಲಾಕ್ ಡೌನ್ ವೇಳೆ ಸೆಟ್ ಟಾಪ್ ಬಾಕ್ಸ್, ದಿನಸಿ, ಗೃಹಬಳಕೆ ವಸ್ತುಗಳನ್ನು ನೀಡಿ ಮತದಾರರ ಅಸಹಾಯಕತೆಯನ್ನು ಚುನಾವಣಾ ಲಾಭಕ್ಕೆ ಬಳಸಿಕೊಂಡು ತಮಗೇ ಮತ ನೀಡುವಂತೆ ಆಮಿಷ ಹಾಗೂ ಭಯ ಸೃಷ್ಟಿಸುತ್ತಿದ್ದಾರೆ, ರಾತ್ರಿ ಹೊತ್ತು ಮತದಾರರಿಗೆ ಹಂಚಲ್ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳ ಬೂತ್ ಮಟ್ಟದ ಪ್ರಮುಖ ಕಾರ್ಯಕರ್ತರು ಮನೆಯಲ್ಲಿ ಕೋಟ್ಯಾಂತರ ರುಪಾಯಿ ಸಂಗ್ರಹಿಸಿದ್ದರೂ ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ. ಈ ಕೂಡಲೆ ಐಟಿ, ಇಡಿ ಇಲಾಖೆಗಳುಮದ್ಯ ಪ್ರವೇಶಿಸಬೇಕು, ಅಪಾರದರ್ಶಕ, ಅಕ್ರ್ಮ  ಗೂಡಾಂಗಿರಿ ಚುನಾವಣೆಯನ್ನು ರದ್ದು ಮಾಡಬೇಕೆಂದು ಸುರೇಶ್ ರಾಥೋಡ್ ಒತ್ತಾಯಿಸಿದರು.

ಪತ್ರಿಕಾಗೊಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಉಪಾಧ್ಯಕ್ಷ ಸುರೇಶ್ ರಾಥೋಡ್, ರಾಜರಾಜೇಶ್ವರುನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸತೀಶ್ ಗೌಡ, ಕಾರ್ಯದರ್ಶಿ ಗಿರೀಶ್ ಎಂ.ಎಚ್. ಹಾಜರಿದ್ದರು,
 

SCROLL FOR NEXT