ರಾಜಕೀಯ

ಯುವ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿಗೆ ಚಾಲನೆ

Shilpa D

ಬೆಂಗಳೂರು: ಯುವ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿಗೆ  ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್  ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿ ಸಲೀಂ ಅಹಮದ್ 'ಯುವ‌ ಕಾಂಗ್ರೆಸ್  ಕಾಂಗ್ರೆಸ್ ಪಕ್ಷದ ಆಧಾರಸ್ತಂಭ. ಸುಭದ್ರ ರಾಷ್ಟ್ರ ಹಾಗೂ ಜ್ಯಾತ್ಯಾತೀತ ಸಮಾಜ ಯುವಕರಿಂದ ಮಾತ್ರ ‌ಸಾಧ್ಯ. 60 ವರ್ಷಗಳ ಇತಿಹಾಸ‌ವಿರುವ‌ ಯುವ‌ ಕಾಂಗ್ರೆಸ್ ಪ್ರಪಂಚದ ಅತಿದೊಡ್ಡ  ಬಲಿಷ್ಠ ಯುವ ಸಂಘಟನೆಯಾಗಿದೆ. ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ ಎಂದರು.

ಯುವ‌ ಕಾಂಗ್ರೆಸ್ ಗೆ ದೊಡ್ಡ ಇತಿಹಾಸವಿದ್ದು ಹಲವಾರು ರಾಜ್ಯಗಳಲ್ಲಿ ಅನೇಕ ಮುಖ್ಯಮಂತ್ರಿಗಳನ್ನು,ಕೇಂದ್ರ ಪ್ರಮುಖ ‌ಸಚಿವರುಗಳನ್ನು  ಸಂಸದರುಗಳು, ಶಾಸಕರುಗಳು ನೀಡಿ ದೇಶದ ಅಭಿವೃದ್ಧಿಗೆ ಪೂರಕವಾಗಿ ಯುವ ಕಾಂಗ್ರೆಸ್ ಕೆಲಸ ಮಾಡಿದೆ.ಉದಾಹರಣೆ ಅಖಿಲ ಭಾರತ ಯುವ ಕಾಂಗ್ರೆಸ್ ನ ಸ್ಥಾಪಕ ಮೊದಲ ಅಧ್ಯಕ್ಷರಾದ ದಿ ಎನ್ ಡಿ ತಿವಾರಿ, ಎ.ಕೆ
ಅಂಟೋನಿ, ಕಮಲ್ ನಾಥ್, ದಿಗ್ವಿಜಯ ಸಿಂಗ್, ಅಶೋಕ್ ಗೆಲೋಟ್ ಇಂತಹ ಹಲವಾರು ನಾಯಕರು ಯುವ‌ ಕಾಂಗ್ರೆಸ್ಸಿನಂದ ಬಂದು ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

'ಕೆ.ಸಿ ವೇಣುಗೋಪಾಲ್ ಕೇರಳ ರಾಜ್ಯದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು, ಪ್ರಸ್ತುತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾಗಿ ಜವಾಬ್ದಾರಿ ವಹಿಸಿದ್ದಾರೆ. ರಾಜ್ಯದಲ್ಲೂ ಹಲವಾರು ಮುಖಂಡರು ಯುವ ಕಾಂಗ್ರೆಸ್ ನಿಂದ ಬಂದು ಹಲವಾರು ಹುದ್ದೆ ಅಲಂಕರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಅದೇ ರೀತಿ ನಾನು ಅಖಿಲ ಭಾರತ‌ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ
ಕೆಲಸ ಮಾಡಿದ್ದೆ ಎಂದು ಹೇಳಿದರು. 5 ಲಕ್ಷ ಸದಸ್ಯರನ್ನು ಯುವ ಕಾಂಗ್ರೆಸ್ ಗೆ ನೋಂದಾಯಿಸಿಕೊಳ್ಳುವುದಾಗಿ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT