ರಾಜಕೀಯ

ಅಕ್ಟೋಬರ್ ನಲ್ಲಿ ಕರ್ನಾಟಕ ಕಾಂಗ್ರೆಸ್ ಮೇಲುಸ್ತುವಾರಿ ವಹಿಸಿಕೊಳ್ಳಲಿರುವ ಸುರ್ಜೇವಾಲಾ

Srinivasamurthy VN

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ನೇಮಕಗೊಂಡಗೊಂಡಿದ್ದು, ಅಕ್ಟೋಬರ್ ನಲ್ಲಿ ಚಾರ್ಜ್ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಉಸ್ತುವಾರಿಯಾಗಿ ನೇಮಕಗೊಂಡ ನಂತರ ಸುರ್ಜೇವಾಲಾ ಇನ್ನೂ ರಾಜ್ಯಕ್ಕೆ ಭೇಟಿ ನೀಡಿಲ್ಲ. ಆದರೆ ಪ್ರದೇಶ ಕಾಂಗ್ರೆಸ್‌ ಘಟಕದ ಪ್ರತಿಯೊಂದು ಆಗುಹೋಗುಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವಾರಾಂತ್ಯದ ವೇಳೆಗೆ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಎಲ್ಲ ಹಿರಿಯ ನಾಯಕರ ಜತೆಗೆ ಸಭೆ  ನಡೆಸಲಿದ್ದಾರೆ. ಅಕ್ಟೋಬರ್‌ ನಲ್ಲಿ ಚಾರ್ಜ್ ತೆಗೆದುಕೊಳ್ಳಲಿದ್ದು, ಕಾಂಗ್ರೆಸ್‌ನ ಸಂಘಟನಾ ಪ್ರಕ್ರಿಯೆ ತುರುಸು ಪಡೆದುಕೊಳ್ಳಲಿದೆ. ಅಂತೆಯೇ ಮುಂಚೂಣಿ ನಾಯಕರ ರಾಜ್ಯ ಪ್ರವಾಸ ಕೂಡ ಆರಂಭಗೊಳ್ಳಲಿದೆ. ಈ ಬಗ್ಗೆ ಸ್ವತಃ ರಂದೀಪ್ ಸುರ್ಜೇವಾಲಾ ಅವರು ಮಾತನಾಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್,  ಸಿದ್ದರಾಮಯ್ಯ, ಕೆಹೆಚ್ ಮುನಿಯಪ್ಪ ಸೇರಿದಂತೆ ಹಿರಿಯ ನಾಯಕರೊಂದಿಗೆ  ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅಕ್ಟೋಬರ್ ಮೊದಲ ವಾರದಲ್ಲಿ ಕರ್ನಾಟಕದ ಮೇಲುಸ್ತುವಾರಿ ವಹಿಸಿಕೊಳ್ಳಲಿದ್ದೇನೆ ಎಂದು ಹೇಳಿದ್ದಾರೆ.

ಅಂತೆಯೇ ಸಾಂವಿಧಾನಿಕವಾಗಿ ಚುನಾಯಿತವಾಗದ ಮತ್ತು ಯಾವುದೇ ಜನಾದೇಶವಿಲ್ಲದ ಬಿಜೆಪಿ ಸರ್ಕಾರದ ದುರಾಡಳಿತವನ್ನು ಕಾಂಗ್ರೆಸ್ ಜನರಿಗೆ ತೋರಿಸುತ್ತದೆ. ಪ್ರಸ್ತುತ ಕಾಂಗ್ರೆಸ್ ಪಕ್ಷ ಬಿಬಿಎಂಪಿ, ಗ್ರಾಮ ಪಂಚಾಯಿತಿ, ಶಿರಾ ಉಪ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳ ಕುರಿತು ಗಮನ ಹರಿಸುತ್ತದೆ.  ಬಿಜೆಪಿ ಸರ್ಕಾರದಲ್ಲೇ ಹಲವು ಸಮಸ್ಯೆಗಳಿದ್ದು, ಸರ್ಕಾರ ಗೊಂದಲಗಳ ಗೂಡಾಗಿದೆ ಎಂದು ಟೀಕಿಸಿದರು.

SCROLL FOR NEXT