ಮಧು ಬಂಗಾರಪ್ಪ 
ರಾಜಕೀಯ

ಮಧು ಬಂಗಾರಪ್ಪ ನಿರ್ಗಮನ: ಶಿವಮೊಗ್ಗದಲ್ಲಿ ಕುಗ್ಗಿದ ಜೆಡಿಎಸ್ ಭವಿಷ್ಯ!

ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ, ಮಧು ಬಂಗಾರಪ್ಪ ಸೇರ್ಪಡೆ ಕಾಂಗ್ರೆಸ್ ಗೆ ಮತ್ತಷ್ಟು ಶಕ್ತಿ ತಂದರೆ ಜೆಡಿಎಸ್ ಅಸ್ಥಿತ್ವಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ.

ಶಿವಮೊಗ್ಗ: ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ, ಮಧು ಬಂಗಾರಪ್ಪ ಸೇರ್ಪಡೆ ಕಾಂಗ್ರೆಸ್ ಗೆ ಮತ್ತಷ್ಟು ಶಕ್ತಿ ತಂದರೆ ಜೆಡಿಎಸ್ ಅಸ್ಥಿತ್ವಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ.

ಲೆಕ್ಕಾಚಾರದ ಪ್ರಕಾರ ಬಿಜೆಪಿ ಮೇಲೆ ಸದ್ಯ ಯಾವುದೇ ಪರಿಣಾಮ ಬೀರುವುದಿಲ್ಲ, ಈಡಿಗ ಸಮುದಾಯದ ಬೇಡಿಕಳನ್ನು ಈಡೇರಿಸಲು ಪಕ್ಷವು ವಿಫಲವಾದರೆ ಅಭಿವೃದ್ಧಿಯು ಚಿಂತೆಯಾಗಬಹುದು. 

ನೂತನ ಸಂಪುಟದಲ್ಲಿ ಇಬ್ಬರು ಹಾಲಿ ಬಿಜೆಪಿ ಶಾಸಕರಿಗೆ ಸ್ಥಾನ ಸಿಗುವ ಸಾಧ್ಯತೆಯಿದೆ. ಸಾಗರ ವಿಧಾನಸಭಾ ಕ್ಷೇತ್ರದ ಹರತಾಳು ಹಾಲಪ್ಪ ಮತ್ತು ಸೊರಬ ಕ್ತ್ರದ ಕುಮಾರ್ ಬಂಗಾರಪ್ಪ ಇಬ್ಬರು ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದು ಸಚಿವ ಸ್ಥಾನದ ಆಶಾವಾದಿಗಳಾಗಿದ್ದಾರೆ.

ನಾವು ಎಸ್ ಬಂಗಾರಪ್ಪ ಅವರನ್ನು ಬೆಂಬಲಿಸಿದ್ದೇವೆ. ಬಂಗಾರಪ್ಪ ಅವರು ಬಿಜೆಪಿ ತೊರೆದ ನಂತರ, ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ಅವರ ಕಾರಣದಿಂದಾಗಿ ನಮ್ಮಲ್ಲಿ ಹೆಚ್ಚಿನವರು ಪಕ್ಷವನ್ನು ಬೆಂಬಲಿಸುತ್ತಲೇ ಇದ್ದೆವು. ಬಂಗಾರಪ್ಪ ಅವರ ನಿಧನದ ನಂತರ, ಅವರ ಹಿರಿಯ ಮಗ ಕುಮಾರ್  ಬಂಗಾರಪ್ಪ ಬಿಜೆಪಿ ಸೇರಿದರು, ಮಧು ಜೆಡಿಎಸ್ ಜೊತೆ ಮುಂದುವರಿದರು. ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರಿಗೆ ಗ್ರಾಮೀಣಾಭಿವೃದ್ಧಿ ಖಾತೆ ನೀಡಲಾಗಿತ್ತು. ಈಗ, ನಮ್ಮ ಸಮುದಾಯವು ಕುಮಾರ್ ಬಂಗಾರಪ್ಪ ಅಥವಾ ಹಾಲಪ್ಪ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದೆ ಎಂದು ಈಡಿಗ ಸಮುದಾಯದ ಮುಖಂಡರೊಬ್ಬರು ತಿಳಿಸಿದ್ದಾರೆ.

ಹೀಗಿದ್ದರೂ ಈಡಿಗ ಸಮುದಾಯ ಇಬ್ಭಾಗವಾಗಿದೆ, ಒಂದು ಕಡೆ ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ , ಮತ್ತೊಂದೆಡೆ ಬೇಳೂರು ಗೋಪಾಲಕೃಷ್ಣ ಮತ್ತು ಮಧು. ಹಾಲಪ್ಪ ಅಥವಾ ಕುಮಾರ್ ಇಬ್ಬರಿಗೂ ಮಂತ್ರಿ ಸ್ಥಾನ ನೀಡುವ ಮೂಲಕ ಈಡಿಗರ ಬೆಂಬಲವನ್ನು ಕ್ರೋಢೀಕರಿಸಲು ಬಿಜೆಪಿ ಪ್ರಯತ್ನಿಸಬಹುದು.

ಕಾಂಗ್ರೆಸ್, ವಿಶೇಷವಾಗಿ ಸೊರಬ ಕ್ಷೇತ್ರದಲ್ಲಿ, ಮಧು ಅವರ ಪ್ರವೇಶದಿಂದ ಹಾಗೂ ಈಡಿಗ ಸಮುದಾಯದ ಬೆಂಬಲವನ್ನು ಮರಳಿ ಪಡೆಯುವಲ್ಲಿ  2009-10 ರಲ್ಲಿ ಎಸ್ ಬಂಗಾರಪ್ಪ ಅವರನ್ನು ಕಾಂಗ್ರೆಸ್ ಜೊತೆಗೂಡಿದಾಗ ಈಡಿಗ ಸಮುದಾಯವನ್ನು ಬೆಂಬಲಿಸಿದ್ದರು.  ಜೆಡಿಎಸ್ ತೊರೆದಿರುವ ಮಧು ಅವರ ಪ್ರವೇಶವು ಕಾಂಗ್ರೆಸ್‌ಗೆ ಲಾಭವಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಲಾಭವಾಗಲಿದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಸುಂದರೇಶ್ ತಿಳಿಸಿದ್ದಾರೆ.

ಮಧು ಬಂಗಾರಪ್ಪ ನಿರ್ಗಮನ  ಜೆಡಿಎಸ್ ಮೇಲೆ ಹೆಚ್ಚು ಪರಿಣಾಮ ಬೀರುವ ನಿರೀಕ್ಷೆಯಿದೆ. 2013 ರ ಚುನಾವಣೆಯಲ್ಲಿ ಪಕ್ಷವು ಮೂರು ಸ್ಥಾನಗಳನ್ನು ಪಡೆದಿತ್ತು. ಸೊರಬದಲ್ಲಿ ಮಧು, ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದಾ ಪೂರ್ಯಾನಾಯಕ್ ಮತ್ತು ಭದ್ರಾವತಿಯಲ್ಲಿ ದಿವಂಗತ ಎಂ ಜೆ ಅಪ್ಪಾಜಿ ಗೆದ್ದಿದ್ದರು. ಆದರೆ 2018 ರ ಚುನಾವಣೆಯಲ್ಲಿ ಮೂವರೂ ಸೋತಿದ್ದರು.

ಎಂ ಜೆ ಅಪ್ಪಾಜಿ ಸಾವು ಮತ್ತು ಮಧು ಬಂಗಾರಪ್ಪ ನಿರ್ಗಮನವು ಜಿಲ್ಲೆಯಲ್ಲಿ ಜೆಡಿಎಸ್ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು. ಜಿಲ್ಲಾ ಜೆಡಿ (ಎಸ್) ನ ಮಾಜಿ ಅಧ್ಯಕ್ಷ ಮತ್ತು ಹಿರಿಯ ಸಹಕಾರಿ ವ್ಯಕ್ತಿ ತೀರ್ಥಹಳ್ಳಿಯ ಆರ್ ಎಂ ಮಂಜುನಾಥ ಗೌಡ ಅವರ ನಿರ್ಗಮನವು ಪಕ್ಷವು ಜಿಲ್ಲೆಯಲ್ಲಿ ತನ್ನ ಬಲವನ್ನು ಕಳೆದುಕೊಂಡಿರುವುದಕ್ಕೆ ಕಾರಣವಾಗಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿ ಭೇಟಿಯಾದ ಸಿಎಂ; ರಾಯಚೂರಿಗೆ ಏಮ್ಸ್, ಪ್ರವಾಹ ಪರಿಹಾರಕ್ಕೆ ಮನವಿ

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಆರೋಗ್ಯದಲ್ಲಿ ಏರುಪೇರು, ICU ನಲ್ಲಿ ಚಿಕಿತ್ಸೆ!

ಬೆಂಗಳೂರಿನಿಂದ ತುಮಕೂರಿಗೆ Namma Metro ಯೋಜನೆ ವಿಸ್ತರಣೆಗೆ BJP ಸಂಸದ ತೇಜಸ್ವಿ ಸೂರ್ಯ ಆಕ್ಷೇಪ!

ಬೆಂಗಳೂರಿನಿಂದ ತುಮಕೂರಿಗೆ Namma Metro: ಡಿಪಿಆರ್‌ ಟೆಂಡರ್‌ ಆಹ್ವಾನಿಸಿದ BMRCL; 20 ಸಾವಿರ ಕೋಟಿ ರೂ ವೆಚ್ಚ; ಎಲ್ಲೆಲ್ಲಿ ನಿಲ್ದಾಣ?

Delhi blast: ಆಸ್ಪತ್ರೆಯಲ್ಲಿ ಮತ್ತೆ ಇಬ್ಬರು ಸಾವು; ಸಾವಿನ ಸಂಖ್ಯೆ 15ಕ್ಕೆ ಏರಿಕೆ

SCROLL FOR NEXT