ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವಿಟ್ಟರ್ ನಲ್ಲಿ ಹಾಕಿರುವ ಫೋಟೋ 
ರಾಜಕೀಯ

ಗುಲಾಮಗಿರಿ ಎಂಬ ಶಬ್ದಕ್ಕೆ ಪರ್ಯಾಯ ಪದವೇ ಕಾಂಗ್ರೆಸ್: ಪಾದಕ್ಕೆ ಎರಗುವ ಪರಿ ಹೇಗೆಂಬುದನ್ನು ಡಿಕೆಶಿ ನೋಡಿ ಕಲಿಯಿರಿ!

ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ತನ್ನ ವಾಗ್ದಾಳಿ ಮುಂದುವರಿಸಿದೆ. ರಾಜ್ಯದ ಬಿಜೆಪಿ ಸಂಸದರು ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವ್ಯಂಗ್ಯವಾಡಿರುವುದಕ್ಕೆ ಬಿಜೆಪಿ ತೀಕ್ಷ್ಣವಾಗಿ ತಿರುಗೇಟು ನೀಡಿದೆ

ಬೆಂಗಳೂರು:  ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ತನ್ನ ವಾಗ್ದಾಳಿ ಮುಂದುವರಿಸಿದೆ. ರಾಜ್ಯದ ಬಿಜೆಪಿ ಸಂಸದರು ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವ್ಯಂಗ್ಯವಾಡಿರುವುದಕ್ಕೆ ಬಿಜೆಪಿ ತೀಕ್ಷ್ಣವಾಗಿ ತಿರುಗೇಟು ನೀಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ‘ನಕಲಿ ಗಾಂಧಿ ಕುಟುಂಬದ ಗುಲಾಮಗಿರಿ ನಡೆಸುವುದಕ್ಕೂ ಪೈಪೋಟಿ ಇದೆ ಖಂಡ್ರೆಯವರೇ, ಏಕೋ ನಿಮ್ಮ ವೇಗ ಕಡಿಮೆಯಾಯ್ತು, ಹೀಗಾಗಿ ಇನ್ನೂ ಕಾರ್ಯಾಧ್ಯಕ್ಷ ಸ್ಥಾನದಲ್ಲೇ ಇದ್ದೀರಿ. ಪಾದಕ್ಕೆ ಎರಗುವ ಪರಿ ಹೇಗೆಂಬುದನ್ನು ಡಿಕೆಶಿ ಅವರನ್ನು ನೋಡಿ ಕಲಿಯಿರಿ’ ಎಂದು ಲೇವಡಿ ಮಾಡಿದೆ.

‘ಗುಲಾಮಗಿರಿ ಎಂಬ ಶಬ್ದಕ್ಕೆ ಪರ್ಯಾಯ ಪದವೇ ಕಾಂಗ್ರೆಸ್. ನೆಹರು, ಇಂದಿರಾ, ರಾಜೀವ್ ಮತ್ತು ಸೋನಿಯಾ ಗಾಂಧಿಯವರ ಪದತಲದಲ್ಲಿ ಗುಲಾಮಗಿರಿ ಮಾಡಿದ್ದಕ್ಕಾಗಿಯೇ ಮುಖ್ಯಮಂತ್ರಿ ಪದವಿ ಅಲಂಕರಿಸಿದ ಮಹಾನುಭಾವರ ಪಟ್ಟಿ ಬೇಕೇ ಖಂಡ್ರೆಯವರೇ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ಪ್ರಶ್ನಿಸಿದೆ.

ಗುಲಾಮಗಿರಿ ಎಂಬ ಶಬ್ದಕ್ಕೆ ಪರ್ಯಾಯ ಪದವೇ ಕಾಂಗ್ರೆಸ್. ನೆಹರು, ಇಂದಿರಾ, ರಾಜೀವ್ ಮತ್ತು ಸೋನಿಯಾ ಗಾಂಧಿಯವರ ಪದತಲದಲ್ಲಿ ಗುಲಾಮಗಿರಿ ಮಾಡಿದ್ದಕ್ಕಾಗಿಯೇ ಮುಖ್ಯಮಂತ್ರಿ ಪದವಿ ಅಲಂಕರಿಸಿದ ಮಹಾನುಭಾವರ ಪಟ್ಟಿ ಬೇಕೇ ಖಂಡ್ರೆಯವರೇ? ಕುಟುಂಬ ಭಜಕರು ಎಂದು ಟ್ವೀಟ್ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!