ರಾಜಕೀಯ

ನನ್ನ ಮಗ ವಿಜಯೇಂದ್ರಗೆ ಸಚಿವ ಸ್ಥಾನ ಕೇಳಿಲ್ಲ: ಬಿ.ಎಸ್ ಯಡಿಯೂರಪ್ಪ

Sumana Upadhyaya

ದಾವಣಗೆರೆ: ರಾಜ್ಯ ಸಚಿವ ಸಂಪುಟಕ್ಕೆ ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಸೇರಿಸಿಕೊಳ್ಳಿ ಎಂದು ಕೇಂದ್ರ ಹೈಕಮಾಂಡ್ ನ್ನಾಗಲಿ ಅಥವಾ ರಾಜ್ಯದ ಬಿಜೆಪಿ ನಾಯಕರನ್ನಾಗಲಿ ತಾವು ಕೇಳಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಪಪಡಿಸಿದ್ದಾರೆ.

ನಿನ್ನೆ ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಲ್ಲಿ ತಾವು ಹಸ್ತಕ್ಷೇಪ ಸಲ್ಲಿಸುವುದಿಲ್ಲ, ಅದು ಪಕ್ಷದ ಹೈಕಮಾಂಡ್ ಮತ್ತು ಕೇಂದ್ರ ನಾಯಕರಿಗೆ ಬಿಟ್ಟ ವಿಚಾರ, ವಿಜಯೇಂದ್ರಗೆ ಸಚಿವ ಸ್ಥಾನ ನೀಡುವ ಬೇಡಿಕೆ ಇಲ್ಲಿ ಉದ್ಭವಿಸುವುದೇ ಇಲ್ಲ ಎಂದರು.

ಇನ್ನು ಡಿಸೆಂಬರ್ 10ರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಸುಲಭವಾಗಿ 15ರಿಂದ 20 ಸ್ಥಾನಗಳನ್ನು ಗೆಲ್ಲುತ್ತದೆ, ಮೇಲ್ಮನೆಯಲ್ಲಿ ಬಿಜೆಪಿ ಬೇರೆ ಪಕ್ಷಗಳನ್ನು ಅವಲಂಬಿಸುವುದಿಲ್ಲ ಎಂದರು. 

ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಬಗ್ಗೆ ಕೇಳಿದಾಗ, ಬಿಜೆಪಿ ಅಭ್ಯರ್ಥಿ ಮಹಂತೇಶ್ ಕವಟಗಿಮಠ ಅವರನ್ನು ಗೆಲ್ಲಿಸುವುದು ಪಕ್ಷದ ಪ್ರಮುಖ ಗಮನವಾಗಿದೆ ಎಂದರು.

SCROLL FOR NEXT