ರಾಜಕೀಯ

ಪರಿಷತ್‍ ಚುನಾವಣೆಯಲ್ಲಿ ಹಣದ ಹೊಳೆ, ಎಲ್ಲಾ ಹೋಗಿ ಚಡ್ಡಿ ಮಾತ್ರ ಉಳಿದಿದೆ: ಸಿಎಂ ಇಬ್ರಾಹಿಂ ಲೇವಡಿ

Srinivasamurthy VN

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿದಿದ್ದು, ಎಲ್ಲಾ ಹೋಗಿ ಚಡ್ಡಿ ಮಾತ್ರ ಉಳಿದಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ಪ್ರಶ್ನೋತ್ತರ, ಶೂನ್ಯ ವೇಳೆಯ ಬಳಿಕ ಮಾತನಾಡಿದ ಸಿಎಂ ಇಬ್ರಾಹಿಂ ಅವರು, ಸಾರ್ವಜನಿಕ ಮಹತ್ವದ ವಿಷಯದ ಚರ್ಚೆ ಆರಂಭಿಸಿದರು. ಗುತ್ತಿಗೆದಾರರ ಸಂಘದವರು  ಶೇ 40ರಷ್ಟು  ಕಮೀಷನ್ ಪಡೆಯಲಾಗುತ್ತಿದೆ ಎಂದು ದೂರಿ ಪ್ರಧಾನಿ ಅವರಿಗೆ ಪತ್ರ ಬರೆದಿದ್ದರಿಂದ ನಮಗೆ – ನಿಮಗೆ ಅವಮಾನವಾಗಿದೆ ಎಂದು ಹೇಳಿದರು.

'ರಾಜಕಾರಣದಲ್ಲಿ ಪ್ರಾಮಾಣಿಕವಾಗಿ ಉಳಿದ ಬಹಳಷ್ಟು ನಾಯಕರಿದ್ದಾರೆ. ಆದರೆ, ಇತ್ತೀಚೆಗೆ ನಡೆದ ವಿಧಾನ ಪರಿಷತ್‍ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿದಿದೆ. ನಮ್ಮ ಪಕ್ಷದಲ್ಲಿ ಗಲೀಜ್ ಜಬ್ಬಾರ್ ಎಂಬುವರನ್ನು ಕರೆದುಕೊಂಡು ಬರಲಾಯಿತು. ಆತ ಬರುವಾಗ ರೂಲ್ಸ್ ರಾಯ್‍ನಲ್ಲಿ ಬಂದಿದ್ದರು, ಚುನಾವಣೆಯಲ್ಲಿ ಸೋತು ಹೋಗುವಾಗ ಆಟೋದಲ್ಲಿ ಹೋಗಿದ್ದಾರೆ. ಸ್ವಾಮಿ ಚಡ್ಡಿ ಮಾತ್ರ ಉಳಿದಿದೆ, ಬಾಕಿ ಎಲ್ಲಾ ಹೋಗಿದೆ ಎಂದು ಆತ ತಮ್ಮ ಬಳಿ ಹೇಳಿಕೊಂಡಿದ್ದರು ಎಂದು  ಸ್ಥಳೀಯ ಸಂಸ್ಥೆಗಳಿಂದ ಇತ್ತೀಚಿಗೆ ವಿಧಾನಪರಿಷತ್  ಚುನಾವಣೆಯಲ್ಲಿ ಬೆಂಗಳೂರು ನಗರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಗ್ಗೆ ಇಬ್ರಾಹಿಂ ಲೇವಡಿ ಮಾಡಿದರು.

ಮತಾಂತರ ವಿರೋಧಿ ಮಸೂದೆ ಕುರಿತು ಬಿಜೆಪಿಗೆ ಟಾಂಗ್
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಬದಲು ಪಕ್ಷಾಂತರ ನಿಷೇಧ ಮಸೂದೆ ತನ್ನಿ. ವಿಡಿಯೋಗೆ ಯಾಕೆ ಸ್ಟೇ ತಂದ್ರು. ಸಿಎಂ ಇದಕ್ಕೆ ಉತ್ತರ ಕೊಡ್ತಾರಾ? ಸಮಾಜದಲ್ಲಿ ದ್ವೇಶವನ್ನ ಹೆಚ್ಚು ಮಾಡ್ತಿದ್ದಾರೆ. ಮುಸಲ್ಮಾನರಾದರೂ ಅವರು ಭಾರತೀಯರು ಮುಸಲ್ಮಾನರಾದ ಮಾತ್ರಕ್ಕ ಪಾಕಿಸ್ತಾನಕ್ಕೆ ಹೋಗಬೇಕಾ? ನಮ್ಮ ಸರ್ಕಾರ ಬಂದರೆ ಹಲವು ಕಾಯ್ದೆ ಹಿಂಪಡೆಯುತ್ತೇವೆ ಎಂದು ಹೇಳಿದರು.

SCROLL FOR NEXT