ರಾಜಕೀಯ

ಕಾಂಗ್ರೆಸ್ ವರ್ತನೆಗೆ ಯಡಿಯೂರಪ್ಪ ಗರಂ; ನಾವು ಮುಸ್ಲಿಂ, ಕ್ರಿಶ್ಚಿಯನ್ ವಿರೋಧಿಗಳಲ್ಲ ಎಂದ ಮಾಜಿ ಸಿಎಂ

Srinivasamurthy VN

ಬೆಳಗಾವಿ: ತೀವ್ರ ಕುತೂಹಲ ಮತ್ತು ಭಾರಿ ಗದ್ದಲಕ್ಕೆ ಕಾರಣವಾಗಿದ್ದ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಂಗೀಕಾರ ದೊರೆತಿದೆ.

ವಿಧಾನಸಭೆಯಲ್ಲಿ ಮಂಗಳವಾರ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ-2021’ ಮಂಡನೆಯಾಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ನ ತೀವ್ರ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಅಂಗೀಕಾರ ಸಿಕ್ಕಿದೆ. ಇಂದು ಸದನದಲ್ಲಿ ಸ್ಪೀಕರ್‌ ಕಾಗೇರಿ ಮಂತಾತರ ನಿಷೇಧ ಮಸೂದೆಯನ್ನು ದ್ವನಿ ಮತಕ್ಕೆ ಹಾಕಿದರು. ಈ ವೇಳೆ ವಿಧಾನಸಭಾ ಹೆಚ್ಚಿನ ಸದಸ್ಯರು ಮಸೂದೆ ಪರ ಮತ ಹಾಕಿದ್ದು, ಈಗ ಅಂಗೀಕಾರಗೊಂಡಿದೆ.

ಎರಡು ದಿನಗಳ ಹಿಂದೆಯಷ್ಟೇ ಗೃಹ ಸಚಿವ ಆರಗ ಜ್ಞಾನೇಂದ್ರ ಮಂತಾತರ ಕಾಯ್ದೆ ಮಂಡಿಸಿದರು. ಬಳಿಕ ಒಂದಿಡೀ ದಿನ ಕಾಯ್ದೆ ಪರ-ವಿರೋಧ ಚರ್ಚೆ ನಡೆಸಲಾಯ್ತು. ಈಗ ಕೊನೆಗೂ ಧ್ವನಿ ಮತಕ್ಕೆ ಹಾಕಿ ಸರ್ಕಾರ ಒಪ್ಪಿಗೆ ಪಡೆದುಕೊಂಡಿದೆ.

ಸದನ ಮುಂದೂಡಿಕೆ
ಇನ್ನು ಕಾಂಗ್ರೆಸ್ ಸದಸ್ಯರ ಭಾರಿ ಗದ್ದಲದ ನಡುವೆಯೇ ಸ್ಪೀಕರ್ ಕಾಗೇರಿ ಅವರು ವಿಧೇಯಕ ಅಂಗೀಕಾರ ಪಡೆದಿದೆ ಎಂದು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.

SCROLL FOR NEXT