ರಾಜಕೀಯ

ಶಾಸಕ ಮಹೇಶ್‌ ಪಿಎ ಹೆಸರಲ್ಲಿ ಎಂಎಲ್ ಎ ರೂಪಾಲಿ ನಾಯ್ಕಗೆ ವಂಚನೆ: ಆರೋಪಿ ಬಂಧನ

Shilpa D

ಉತ್ತರಕನ್ನಡ: ನಾನು ಶಾಸಕ ಎನ್.ಮಹೇಶ್ ಅವರ ಆಪ್ತ ಸಹಾಯಕ (ಪಿ.ಎ) ಎಂದು ಸುಳ್ಳು ಹೇಳಿ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಅವರ ಬಳಿ 50 ಸಾವಿರ ರು. ಹಣ ಪಡೆದ ವ್ಯಕ್ತಿಯೊಬ್ಬನನ್ನು ನಗರ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. 

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ದೊಡ್ಡಮಳಲವಾಡಿ ಗ್ರಾಮದ ಸಚಿನ್ ಗೌಡ (23) ಪೊಲೀಸರ ವಶದಲ್ಲಿದ್ದಾನೆ. ಶಾಸಕ ಎನ್‌.ಮಹೇಶ್‌ ಅವರ ಆಪ್ತ ಸಹಾಯಕ ಮಹದೇವಸ್ವಾಮಿ ಅವರು ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

ಈತ ಮೊದಲು ಶಾಸಕಿ ರೂಪಾಲಿ ನಾಯಕ್‌ ಅವರಿಗೆ ಕರೆ ಮಾಡಿ, ನಾನು ಶಾಸಕ ಎನ್‌.ಮಹೇಶ್‌ ಎಂದು ಹೇಳಿ ಹಣ ಕೇಳಿದ್ದಾನೆ. ನಂತರ ಮಹೇಶ್‌ ಅವರ ಪಿಎ ಎಂಬುದಾಗಿ ಹೇಳಿ, ಅರ್ಜೆಂಟಾಗಿ 50 ಸಾವಿರ ರೂ. ಹಣ ಕೊಡುವಂತೆ ಹೇಳಿದ್ದಾನೆ. ಸ್ವಲ್ಪ ಸಮಯ ಬಿಟ್ಟು ತನ್ನ ಸ್ನೇಹಿತ ಮಹೇಶ್‌ ಎಂಬಾತನ ಬ್ಯಾಂಕ್‌ ಖಾತೆ ನಂಬರ್‌ ಮೆಸೇಜ್‌ ಮಾಡಿದ್ದಾನೆ.

ರೂಪಾಲಿ ನಾಯಕ್‌ ಆ ಅಕೌಂಟ್‌ಗೆ 50 ಸಾವಿರ ರೂ. ಕಳುಹಿಸಿದ್ದಾರೆ. ಬಳಿಕ ಸ್ನೇಹಿತ ಮಹೇಶ್‌ಗೆ ಒಂದು ಸಾವಿರ ರೂ. ಕೊಟ್ಟು 49 ಸಾವಿರ ತೆಗೆದುಕೊಂಡಿದ್ದಾನೆ. 

ಇದಾದ ಕೆಲ ದಿನಗಳ ನಂತರ ಬೆಂಗಳೂರಿನಲ್ಲಿ ಶಾಸಕ ಎನ್.ಮಹೇಶ್ ಮತ್ತು ಶಾಸಕಿ ರೂಪಾಲಿ ನಾಯ್ಕ ಮುಖಾಮುಖಿ ಭೇಟಿಯಾಗಿದ್ದ ವೇಳೆ ಹಣದ ವಿಚಾರ ತಿಳಿದು ವಂಚನ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಸಚಿನ್‌ಗೌಡನ ಫೋನ್ ನಂಬರ್​ ಕೊಟ್ಟು ಕೊಳ್ಳೇಗಾಲ ಠಾಣೆಗೆ ಶಾಸಕ ಮಹೇಶ್ ಪಿಎ ಮಹಾದೇವಸ್ವಾಮಿ ದೂರು ಕೊಟ್ಟಿದ್ದಾರೆ‌. ದೂರು ಪಡೆದಿದ್ದ ಪೊಲೀಸರು, ಇಂದು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ

SCROLL FOR NEXT