ರಾಜಕೀಯ

ತಾಕತ್ತಿದ್ದರೆ ಮಲ್ಲಿಕಾರ್ಜುನ ಖರ್ಗೆರನ್ನು ಸಿಎಂ ಅಭ್ಯರ್ಥಿ ಮಾಡಿ: ಸಿದ್ದರಾಮಯ್ಯ ಸವಾಲಿಗೆ ಕಟೀಲ್ ಪ್ರತಿ ಸವಾಲು

Manjula VN

ಚಿತ್ರದುರ್ಗ: ದಲಿತ ಮುಖ್ಯಮಂತ್ರಿ ಬಗೆಗಿನ ಕಾಂಗ್ರೆಸ್-ಬಿಜೆಪಿ ವಾಕ್ಸಮರ ತಾರಕಕ್ಕೇರಿದೆ. ದಲಿತರನ್ನು ಸಿಎಂ ಮಾಡಿ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸವಾಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ನಿಮಗೆ ತಾಕತ್ ಇದ್ದರೆ ಮಲ್ಲಿಕಾರ್ಜುನ ಖರ್ಗೆ ಅಥವಾ ಪರಮೇಶ್ವರ್ ಅವರನ್ನು ಮುಂದಿನ ಸಿಎಂ ಎಂದು ಘೋಷಿಸಿ ಎಂದು ಪ್ರತಿ ಸವಾಲು ಹಾಕಿದ್ದಾರೆ. 

ಚಿತ್ರದುರಗದಲ್ಲಿ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಿಂದ ದಲಿತ ಸಮುದಾಯಕ್ಕೆ ಅನ್ಯಾಯವಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್'ಗೂ ಅವಮಾನ ಮಾಡಲಾಗಿದೆ. ದೇಶದಲ್ಲಿ ಅತೀ ಹೆಚ್ಚಿ ಅಧಿಕಾರಿ ನಡೆಸಿದ ಕಾಂಗ್ರೆಸ್ ಪ್ರತಿ ಹಂತದಲ್ಲೂ ದಲಿತರನ್ನು ತುಳಿಯುವ ಕೆಲಸ ಮಾಡಿದೆ. ನಿಮಗೆ ತಾಕತ್ ಇದ್ದರೆ, ಮಲ್ಲಿಕಾರ್ಜುನ ಖರ್ಗೆ ಅಥವಾ ಪರಮೇಶ್ವರ್ ಅವರನ್ನು ಮುಂದಿನ ಸಿಎಂ ಎಂದು ಘೋಷಿಸಿ. ಜೊತೆಗೆ ನಿಮ್ಮ ಸರ್ಕಾರ ಐದು ವರ್ಷದ ಸಾಧನೆಯನ್ನು ಜನತೆಯ ಮುಂದಿಡಿ ಎಂದು ಸವಾಲು ಹಾಕಿದ್ದಾರೆ. 

ಜೆಡಿಎಸ್ ನಲ್ಲಿ ಬುಕ್ ಹಿಡಿದು ಕಲಿತು ಬಂದ ಸಿದ್ದರಾಮಣ್ಣ ಅವರಿಗೆ ಕಾಂಗ್ರೆಸ್ ಇತಿಹಾಸ ಗೊತ್ತಿದ್ದರೆ ಇಷ್ಟೆಲ್ಲ ಮಾತನಾಡುತ್ತಿರಲಿಲ್ಲ. ಸಿಎಂ ಆಗಲೆಂದೇ ಅವರ ಗುರುಗಳಿಗೆ ಕೈಕೊಟ್ಟು ಕಾಂಗ್ರೆಸ್'ಗೆ ಬಂದರು. ಅದೇ ಕಾರಣಕ್ಕೆ ಪರಮೇಶ್ವರ್, ಖರ್ಗೆ ಅವರನ್ನು ಸೋಲಿಸಿದರು ಎಂದು ದೂರಿದ್ದಾರೆ. 

SCROLL FOR NEXT