ರಾಜಕೀಯ

ಸಿಎಂ ಆಯ್ಕೆ ಆಗಿ ಪ್ರಮಾಣವಚನ ಆಯ್ತು, ಇನ್ನು ಸಂಪುಟ ರಚನೆ ಕಸರತ್ತು: ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗಲು ಒತ್ತಡ 

Sumana Upadhyaya

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ರಚನೆಯಲ್ಲಿ ಜಾತಿ ಮತ್ತು ಸಮುದಾಯ ಪ್ರಾತಿನಿಧ್ಯ ನೀಡುವುದು ಸವಾಲಾಗಿದೆ. ಶೇಕಡಾ 35ರಷ್ಟು ಜನಸಂಖ್ಯೆಯನ್ನು ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳಿದ್ದು ಸಚಿವ ಸಂಪುಟದಲ್ಲಿ ತಮ್ಮ ಸಮುದಾಯಕ್ಕೆ ಸಿಗುವ ಪ್ರಾತಿನಿಧ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಹಿಂದುಳಿದ ವರ್ಗಗಳಲ್ಲಿ ಕುರುಬ ಸಮುದಾಯ ಬಹುದೊಡ್ಡ ಸಂಖ್ಯೆಯಲ್ಲಿದ್ದು ಒಟ್ಟು ಜನಸಂಖ್ಯೆಯ ಶೇಕಡಾ 6ರಷ್ಟಿದೆ. ಕಳೆದ ಯಡಿಯೂರಪ್ಪನವರ ಸಂಪುಟದಲ್ಲಿ ಕುರುಬ ಸಮುದಾಯಕ್ಕೆ ಬಹಳ ಮುಖ್ಯ ಖಾತೆಗಳು ಕೈತಪ್ಪಿ ಹೋಗಿದ್ದವು.ಈ ಬಾರಿ ತಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗದಿದ್ದರೆ ಭಾರೀ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ಕುರುಬ ಸಮುದಾಯದವರು ಎಚ್ಚರಿಕೆ ನೀಡಿದ್ದಾರೆ.

ಕಳೆದ ಬಾರಿ ಯಡಿಯೂರಪ್ಪನವರ ಸಚಿವ ಸಂಪುಟದಿಂದ ಎ ಎಚ್ ವಿಶ್ವನಾಥ್ ಅವರನ್ನು ಹೊರಗಿಟ್ಟಿರುವುದರಿಂದ ಅವರಿಗೆ ಭಾರೀ ಅಸಮಾಧಾನಕ್ಕೆ ಕಾರಣವಾಗಿ ಅವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದರು. ಸ್ವತಂತ್ರ ಕುರುಬ ಸಮುದಾಯದ ಶಾಸಕ ಆರ್ ಶಂಕರ್ ಅವರನ್ನು ಈ ಬಾರಿ ಸಂಪುಟಕ್ಕೆ ಸೇರ್ಪಡೆಗೊಳಿಸುವುದು ಸಂಶಯವಾಗಿದೆ.

ಕುಂಚಿಟಿಗ ಮತ್ತೊಂದು ಪ್ರಮುಖ ಸಮುದಾಯವಾಗಿದ್ದು, ಹೆಚ್ಚಾಗಿ ತುಮಕೂರು ಮತ್ತು ಚಿತ್ರದುರ್ಗದಲ್ಲಿದ್ದಾರೆ ಮತ್ತು 26 ವಿಧಾನಸಭಾ ಸ್ಥಾನಗಳಲ್ಲಿ ಪ್ರಮುಖವಾಗಿವೆ. ಕುಂಚಿಟಿಗ ಮಠ ಮಠಾಧೀಶ ಶಾಂತವೀರ ಸ್ವಾಮಿ, “ನಮ್ಮ ಸಮುದಾಯದಲ್ಲಿ ಕೇವಲ ಇಬ್ಬರು ಶಾಸಕರು ಇದ್ದಾರೆ, ಅವರೇ ಶಾಸಕ ರಾಜೇಶ್ ಗೌಡ ಮತ್ತು ವಿಧಾನ ಪರಿಷತ್ ಸದಸ್ಯ ಚಿದಾನಂದ ಗೌಡ. ಟಿ ಬಿ ಜಯಚಂದ್ರ, ಬಿ ಎಲ್ ಗೌಡ ಅಥವಾ ಕೆಂಚಪ್ಪ ಅವರಂತವರು ನಮ್ಮ ಸಮುದಾಯದಿಂದ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆದರೆ ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿ ನಮ್ಮ ಸಮುದಾಯಕ್ಕೆ ಸರಿಯಾದ ಪ್ರಾತಿನಿಧ್ಯ ಸಿಗಲಿಲ್ಲ.

ಯಡಿಯೂರಪ್ಪನವರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು ಅವರ ಸಮುದಾಯದಿಂದ 8 ಮಂದಿ ಸಚಿವರಾಗಿದ್ದರು. ಉಪ ಮುಖ್ಯಮಂತ್ರಿ ಹುದ್ದೆ ಕೂಡ ಸಿಕ್ಕಿತ್ತು, ಆದರೆ ಸಣ್ಣ ಸಮುದಾಯದವರು ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಾರೆ.
ಇನ್ನು ರಾಜ್ಯದಲ್ಲಿ ಈಡಿಗ ಸಮುದಾಯದ ಜನರು 30ರಿಂದ 40 ವಿಧಾನಸಭಾ ಕ್ಷೇತ್ರಗಳಲ್ಲಿದ್ದಾರೆ. ನಾಲ್ಕು ಜಿಲ್ಲೆಗಳಲ್ಲಿ ಹಂಚಿಹೋಗಿದ್ದಾರೆ. ರಾಜ್ಯಕ್ಕೆ ಈಡಿಗ ಸಮುದಾಯದ ಮುಖ್ಯಮಂತ್ರಿಯಾಗಿದ್ದಾರೆ. ಪ್ರತಿ ಸಚಿವ ಸಂಪುಟದಲ್ಲಿ ಕೂಡ ಇದ್ದರು. ಆದರೆ ಹಿಂದಿನ ಯಡಿಯೂರಪ್ಪನವರ ಸಂಪುಟದಲ್ಲಿ ಮಾತ್ರ ಒಬ್ಬ ಸಚಿವರಿದ್ದರು.ಅದು ಕೂಡ ಅವರಿಗೆ ಪ್ರಮುಖ ಖಾತೆ ಸಿಕ್ಕಿರಲಿಲ್ಲ.

ಈಡಿಗ ಸಮುದಾಯದ ಏಳು ಮಂದಿ ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ ಎನ್ನುತ್ತಾರೆ ಈಡಿಗ ಸಮುದಾಯದ ಸ್ವಾಮೀಜಿ ರೇಣುಕಾನಂದ ಸ್ವಾಮಿ. ನೂತನ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಬೇಕೆಂದು ನಾವು ಕೇಳುತ್ತಿದ್ದೇವೆ ಎಂದರು.

ಇನ್ನು ಪರಿಶಿಷ್ಟ ಜಾತಿಗಳು, ಪ್ರತಿಯೊಂದು ಸಮುದಾಯದವರೂ ತಮಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಬೇಕೆಂದು ಕೇಳುತ್ತಿದ್ದಾರೆ.

SCROLL FOR NEXT