ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಮೃತನನ್ನು ಬಾಲಕುಂಟಹಳ್ಳಿಯ ನಿವಾಸಿ 18 ವರ್ಷದ ಚಿರುತ್ ಕುಮಾರ್ ಎಂದು ಗುರುತಿಸಲಾಗಿದೆ.
ಮೃತ ಯುವಕನ ಪೋಸ್ಟ್
ಮೃತ ಯುವಕನ ಪೋಸ್ಟ್
Updated on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಬಾಲಕುಂಟಹಳ್ಳಿ ಗ್ರಾಮದಲ್ಲಿ ಯುವಕನೋರ್ವ ತನ್ನ ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತನನ್ನು ಬಾಲಕುಂಟಹಳ್ಳಿಯ ನಿವಾಸಿ 18 ವರ್ಷದ ಚಿರುತ್ ಕುಮಾರ್ ಎಂದು ಗುರುತಿಸಲಾಗಿದೆ. ಇನ್ನು ಚಿರುತ್ ಸಾಯುವ ಮುನ್ನ Miss U Chinna ಅಂತ ಬಾಲಕಿಯ ಜೊತೆಗಿನ ಚುಂಬನದ ಪೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನೇಣಿಗೆ ಶರಣಾಗಿದ್ದಾನೆ. ಪ್ರೇಮ ವೈಫಲ್ಯದ ಕಾರಣ ಚಿರುತ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕಿಸಲಾಗಿದೆ. ಕೃಷಿ ಮಾಡಿಕೊಂಡಿದ್ದ ಚಿರುತ್ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಇಬ್ಬರ ನಡುವೆ ಏನಾಯ್ತು ಎಂಬುದು ಕಾರಣ ತಿಳಿದುಬಂದಿಲ್ಲ. ಆದರೆ ಚಿರುತ್ ಇದ್ದಕ್ಕಿದ್ದಂತೆ ಜಕ್ಕಲಮಡುಗು ಜಲಾಶಯದ ಬಳಿ ಇರುವ ಜಮೀನು ಪಕ್ಕದಲ್ಲೇ ಇದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತ ಯುವಕನ ಪೋಸ್ಟ್
ಹುಬ್ಬಳ್ಳಿ: Hindu ಎಂದು ನಂಬಿಸಿ ಅಪ್ರಾಪ್ತೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ Muslim ಯುವಕನ ಬಂಧನ; Sex Video ಪತ್ತೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com