ಎಚ್.ಡಿ ದೇವೇಗೌಡ 
ರಾಜಕೀಯ

ದೇವೇಗೌಡ ಪ್ರಧಾನಿಯಾಗಿ 25 ವರ್ಷ: 2024 ಚುನಾವಣೆಯಲ್ಲಿ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ; 'ಮಣ್ಣಿನ ಮಗ' ಕಿಂಗ್ ಮೇಕರ್?

ಜೂನ್ 1, 1996 ಕನ್ನಡಿಗರ ಪಾಲಿಗೆ ಮಹತ್ವದ ದಿನವಾಗಿತ್ತು. ಮಣ್ಣಿನ ಮಗ ಎಂದೇ ಕರ್ನಾಟಕದಲ್ಲಿ ಕರೆಯಲ್ಪಡುವ ದೇವೇಗೌಡರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಂದರೆ, ಅವರು ಪ್ರಧಾನಿಯಾಗಿ 25 ವರ್ಷ.

ಬೆಂಗಳೂರು: ಜೂನ್ 1, 1996 ಕನ್ನಡಿಗರ ಪಾಲಿಗೆ ಮಹತ್ವದ ದಿನವಾಗಿತ್ತು. ಮಣ್ಣಿನ ಮಗ ಎಂದೇ ಕರ್ನಾಟಕದಲ್ಲಿ ಕರೆಯಲ್ಪಡುವ ದೇವೇಗೌಡರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಂದರೆ, ಅವರು ಪ್ರಧಾನಿಯಾಗಿ 25 ವರ್ಷ.

ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಆದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬ ಆಚರಿಸುತ್ತಿದೆ. ರಾಜ್ಯದಿಂದ ಆಯ್ಕೆಯಾಗಿದ್ದ ಏಕೈಕ ಪ್ರಧಾನಮಂತ್ರಿಯಾಗಿದ್ದ ದೇವೇಗೌಡರು ಇಂದಿಗೂ ಕಿಂಗ್ ಮೇಕರ್.

ಪಿವಿ ನರಸಿಂಹರಾವ್ ಅವರು ಲೋಕಸಭೆಯಲ್ಲಿ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಬಿಜೆಪಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪ್ರಧಾನಿಯನ್ನಾಗಿ ಮಾಡಿತು, ಆದರೆ ವಾಜಪೇಯಿ ಕೂಡ ಬಹುಮತ ಸಾಬೀತು ಪಡಿಸಲು ಯಶಸ್ವಿಯಾಗಲಿಲ್ಲ,  ಹೀಗಾಗಿ ವಾಜಪೇಯಿ ಸರ್ಕಾರ 13 ದಿನಕ್ಕೆ ಬಿದ್ದು ಹೋಯಿತು. ಹೀಗಾಗಿ ಪ್ರಾದೇಶಿಕ ಪಕ್ಷಗಳೆಲ್ಲಾ ಸೇರಿ ಕೇಂದ್ರದಲ್ಲಿ ಸರ್ಕಾರ ರಚಿಸಿದವು.

2023ರ ರಾಜ್ಯ ವಿಧಾನಸಭೆ ಚುನಾವಣೆ ಗಮನದಲ್ಲಿರಿಸಿಕೊಂಡಿರುವ ಜೆಡಿಎಸ್ ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಕಳೆದ ಸಂದರ್ಭದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. 

2024 ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಪವರ್ ಗೇಮ್ ಆರಂಭವಾಗಲಿದೆ, ಉತ್ತಮ ಆಡಳಿತ ನೀಡುವಲ್ಲಿ ಬಿಜೆಪಿ ಎಡವಿದೆ, ಕಾಂಗ್ರೆಸ್ ಅದನ್ನು ಸದುಪಯೋಗಪಡಿಸಿಕೊಳ್ಳಲು ವಿಫಲವಾಗಿದೆ, ಹೀಗಾಗಿ 2024 ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತೆ ಅಧಿಕಾರ ಹಿಡಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 1996 ಪರಿಸ್ಥಿತಿ ಮತ್ತೆ ನಿರ್ಮಾಣವಾಗಲಿದ್ದು, 2024ರಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಸಾಧ್ಯತೆಯಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ದೇವೇಗೌಡ ಹೇಳಿದ್ದಾರೆ.

ಜೂನ್ 25 ವರೆಗೆ ಸುಮಾರು 25 ದಿನಗಳ ಅಭಿಯಾನ ಹಮ್ಮಿಕೊಂಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಈ ಅಭಿಯಾನ ನಡೆಯಲಿದೆ. ಪ್ರಮುಖ ವ್ಯಕ್ತಿಗಳು, ರಾಜಕಾರಣಿಗಳು, ಪತ್ರಕರ್ತರು ಎಲ್ಲಾ ಸೇರಿ ದೇವೇಗೌಡರ ಸಾಧನೆಗಳು ಮತ್ತು ಅವರ ಅಧಿಕಾರವಧಿಯ ನೆನಪುಗಳನ್ನು ಪುನರ್ಮನನ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಹಲವು ಯುವಕರಿಗೆ ದೇವೇಗೌಡರು ರಾಷ್ಟ್ರಕ್ಕೆ ನೀಡಿರುವ ಕೊಡುಗೆ ಬಗ್ಗೆ ಅರಿವಿಲ್ಲ,  ಹೀಗಾಗಿ ಮುಂದಿನ ವರ್ಷ ಏಪ್ರಿಲ್ 21 ರಿಂದ ಪಕ್ಷದ ವತಿಯಿಂದ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ,

ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಮಣ್ಣಿನ ಮಗ ಕಾರ್ಡ್ ಹೈಲೈಟ್ ಮಾಡಲಿದೆ. ಪಂಚೆ ಉಟ್ಟು, ರಾಗಿ ಮುದ್ದೆ ತಿನ್ನುವ ರೈತ, ಓರ್ವ ಕನ್ನಡಿಗ ಪ್ರಧಾನಿಯಾಗಿದ್ದರು ಎಂಬ ಅಂಶವನ್ನು ಎತ್ತಿ ತೋರಿಸುತ್ತದೆ. ಆಕ್ಸಿಡೆಂಟಲ್ ಪಿಎಂ 3 ಸಾವಿರ ಕೋಟಿ ಕಪ್ಪು ಹಣವನ್ನು ವಾಪಸ್ ತರಲು ಹೇಗೆ ಸಹಾಯ ಮಾಡಿದರು ಎಂಬುದು ಅದ್ಭುತ ಸಾಧನೆ ಎಂದು ಕುಮಾರಸ್ವಾಮಿ ಶ್ಲಾಘಿಸಿದ್ದಾರೆ.

ವಿದೇಶಿ ಬ್ಯಾಂಕ್ ಗಳಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ತರಲು ದೇವೇಗೌಡರು ಅನೇಕ ಯೋಜನೆಗಳನ್ನು ಹೊಂದಿದ್ದರು., ಆದರೆ ಕಾಂಗ್ರೆಸ್ ನಾಯಕ ಸೀತಾರಾಮ ಕೇಸರಿ ಅವರ ಜೊತೆಗಿನ ಭಿನ್ನಾಭಿಪ್ರಾಯದಿಂದ ದೇವೇಗೌಡರ ಸರ್ಕಾರ ಉರುಳಿ ಬಿತ್ತು.

2023 ರ ಚುನಾವಣೆಯಲ್ಲಿ ಸ್ವಂತ ಶಕ್ತಿಯಿಂದ ಸರ್ಕಾರ ರಚಿಸಲು ನಾವು ಬಯಸಿದ್ದೇವೆ, ಜನ ಕಾಂಗ್ರೆಸ್ ಮತ್ತು ಬಿಜೆಪಿಗೆ ಅವಕಾಶ ನೀಡಿದ್ದಾರೆ. ನಮಗೂ ಒಂದು ಅವಕಾಶ ನೀಡುವಂತೆ ನಾವು ಅವರಲ್ಲಿ ಮನವಿ ಮಾಡುತ್ತೇವೆ, ನನ್ನ ಬಳಿ ಪಂಚರತ್ನ ಎಂಬ ಐದು ಅಂಶಗಳ ಕಾರ್ಯಕ್ರಮವಿದೆ, ಇದರಿಂದ ಜನರಿಗೆ ಅಪಾರ ಪ್ರಯೋಜನವಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

ಮೊದಲು ಪರಮೇಶ್ವರ್ ಕೂಲಿ ಚುಕ್ತಾ ಮಾಡಲಿ: ನಂತರ ವಿಧಾನಸಭೆ ವಿಸರ್ಜಿಸಿ ಡಿಕೆಶಿ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ!

SCROLL FOR NEXT