ರಾಜಕೀಯ

ವಿಡಿಯೋ ಸಂವಾದ: ಕೊರೋನಾ ಹಿನ್ನೆಲೆ ಕೈಗೊಂಡ ಉಪಕ್ರಮಗಳ ಪಟ್ಟಿ ಮಾಡಿದ ಕಾಂಗ್ರೆಸ್ ನಾಯಕರು

Manjula VN

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ರಾಜ್ಯವನ್ನು ಬೆನ್ನು ಬಿಡದಂತೆ ಕಾಡುತ್ತಿದ್ದು, ಈ ಸಂದರ್ಭದಲ್ಲಿ ಕೈಗೊಂಡ ಉಪಕ್ರಮಗಳ ಬಗ್ಗೆ ಕೇಂದ್ರದ ಕಾಂಗ್ರೆಸ್ ನಾಯಕರಿಗೆ ರಾಜ್ಯದ ಕಾಂಗ್ರೆಸ್ ನಾಯಕರು ವಿವರವಾದ ಮಾಹಿತಿ ನೀಡಿದ್ದಾರೆ. 

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ದೇಶದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೊಂದಿಗೆ ನಿನ್ನೆಯಷ್ಟೇ ವಿಡಿಯೋ ಸಂವಾದ ನಡೆಸಿದರು. 

ವಿಡಿಯೋ ಸಂವಾದದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಹಾಗೂ ಇತರೆ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು. 

ಸಭೆ ವೇಳೆ ಶಾಸಕ ಕೃಷ್ಣ ಭೈರೇಗೌಡ ಮತ್ತು ದಿನೇಶ್ ಗುಂಡೂ ರಾವ್ ಅವರು ತಮ್ಮ ಕ್ಷೇತ್ರದವರಿಗೆ ನೀಡುತ್ತಿರುವ ಫುಡ್ ಕಿಟ್,  ಸಂಸದ ಡಿಕೆ ಸುರೇಶ್ ಅವರು ತಮ್ಮ ಕ್ಷೇತ್ರದಲ್ಲಿ ಕೋವಿಡ್ ವಾರ್ ರೂಮ್ ಸ್ಥಾಪನೆ ಮಾಡಿ, ಸಂಕಷ್ಟದಲ್ಲಿರುವವರಿಗೆ 10,000 ಫುಡ್ ಕಿಡ್, ಪಲ್ಸ್ ಆಕ್ಸಿಮೀಟರ್, ಔಷಧಿಗಳನ್ನು ನೀಡುತ್ತಿರುವುದು ಸೇರಿದಂತೆ ಕ್ಷೇತ್ರವಾರು ನಾಯಕರು ಕೈಗೊಂಡಿರುವ ಉಪಕ್ರಮಗಳ ಕುರಿತು ಡಿಕೆ.ಶಿವಕುಮಾರ್ ಅವರು ಕೇಂದ್ರದ ನಾಯಕರಿಗೆ ಮಾಹಿತಿ ನೀಡಿದರು. 

ರಾಜ್ಯದ ಎಲ್ಲಾ ಜಿಲ್ಲಾಗಳಿಗೆ ಭೇಟಿ ನೀಡುತ್ತಿದ್ದೇನೆ. ಈಗಾಗಲೇ ಧಾರವಾಡ-ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅಸಂಘಟಿಕ ಕಾರ್ಮಿಕರ ಸಮಸ್ಯೆಯನ್ನೂ ಆಲಿಸಿದ್ದೇನೆಂದು ಹೇಳಿದ್ದಾರೆ. 

ರಾಜ್ಯದ ರೈತರಿಂದ ತರಕಾರಿ ಖರೀದಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತರಕಾರಿ ಖರೀದಿಸಿ ಬಡವರಿಗೆ ಹಂಚುತ್ತಿದ್ದಾರೆ. ಜನರ ಸಂಕಷ್ಟಕ್ಕೆ ಎಲ್ಲರೂ ಸ್ಪಂದಿಸುತ್ತಿದ್ದೇವೆ. ಇನ್ನೂ ಮುಂದೆಯೂ ಜಿಲ್ಲೆಗಳಿಗೆ ಭೇಟಿ ನೀಡಿಲಿದ್ದೇನೆಂದು ತಿಳಿಸಿದ್ದಾರೆ. 

ಇನ್ನು ರಾಜ್ಯದ 90 ಶಾಸಕರು ಲಸಿಕೆ ಖರೀದಿಗೆ ಅನುದಾನ ಬಿಡುಗಡೆ ಮಾಡಲು ಮುಂದಾಗಿದ್ದೇವೆ. ಶಾಸಕರ ಅನುದಾರ ರೂ.90 ಕೋಟಿ ಹಾಗೂ ಕೆಪಿಸಿಸಿಯಿಂದ ರೂ.10 ಕೋಟಿ ಸೇರಿ ಒಟ್ಟು ರೂ.100 ಕೋಟಿ ಅನುದಾನ ನೀಡಲು ಸಿದ್ಧರಿದ್ದೇವೆ. ಪಕ್ಷದಿಂದ ರಾಜ್ಯದ್ಯಂತ ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡುತ್ತಿದ್ದೇವೆ. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ತಮ್ಮ ಕ್ಷೇತ್ರದ ಜನರ ರಕ್ಷಣೆ ಮುಂದಾಗಿದ್ದಾರೆ. 

ಈ ನಿಟ್ಟಿನಲ್ಲಿ ಫುಡ್ ಕಿಟ್, ಮೆಡಿಕಲ್ ಕಿಟ್, ಬಡಸೋಂಕಿತರಿಗೆ ಚಿಕಿತ್ಸಾ ಸೌಲಭ್ಯ ಸೇರಿದಂತೆ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. 

ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದ ಗುಲಾಂ ನಬಿ ಆಜಾದ್ ಅವರು ಮಾತನಾಡಿ, ನೀವು ಮಾಡುತ್ತಿರುವ ಒಳ್ಳೆಯ ಕೆಲಸ ಮತ್ತು ನಿಮ್ಮ ಸಾಮರ್ಥ್ಯದ ನಮಗೆ ತಿಳಿದಿದೆ ಎಂದು ತಿಳಿಸಿದ್ದಾರೆ. 

SCROLL FOR NEXT