ರಾಜಕೀಯ

ಪದೇ ಪದೇ ನಾಯಕತ್ವ ಬದಲಾವಣೆ ಮಾತುಗಳಿಂದ ಮುಖ್ಯಮಂತ್ರಿಗಳ ಮನಸ್ಸಿಗೆ ನೋವಾದಂತೆ ಕಂಡುಬರುತ್ತಿದೆ: ಆರ್ ಅಶೋಕ್ 

Sumana Upadhyaya

ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ನೋಡಿದಾಗ, ಪದೇ ಪದೇ ಸಿಎಂ ನಾಯಕತ್ವ ಬದಲಾವಣೆ ಬಗ್ಗೆ ಕೊರೋನಾ ಕಷ್ಟದ ಸಮಯದಲ್ಲಿ ಕೇಳಿಬರುತ್ತಿರುವಾಗ ಮುಖ್ಯಮಂತ್ರಿಗಳ ಮನ್ಸಸಿಗೆ ಸ್ವಲ್ಪ ನೋವಾದಂತೆ ಕಂಡುಬರುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊರೋನಾ ಸಂಕಷ್ಟ ಕಾಲದಲ್ಲಿ ಮುಖ್ಯಮಂತ್ರಿಗಳು ಸಾಕಷ್ಟು ಕಷ್ಟಪಟ್ಟು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಪದೇ ಪದೇ ನಾಯಕತ್ವ ಬದಲಾವಣೆ ಮಾತು, ಪ್ರಶ್ನೆ ಕೇಳಿಬರುತ್ತಿರುವುದು ಅವರ ಮನಸ್ಸಿಗೆ ನೋವಾದಂತೆ ಕಂಡುಬರುತ್ತಿದೆ. ಹೀಗಾಗಿ ಅವರು ಈ ಮಾತುಗಳನ್ನು ಹೇಳಿರಬಹುದು, ಆದರೆ ಕೇಂದ್ರದ ಸಚಿವರಾದ ಪ್ರಹ್ಲಾದ್ ಜೋಶಿಯವರು, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಿ.ಟಿ.ರವಿಯವರು ಇನ್ನೂ ಹಲವಾರು ನಾಯಕರು ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಇಂತಹ ಸಂದರ್ಭದಲ್ಲಿ ಆಗಾಗ ಎತ್ತುತ್ತಿರುವ ಪ್ರಶ್ನೆಗಳಿಗೆ ಅಂತ್ಯ ಹಾಡಬೇಕೆಂದು ಯಡಿಯೂರಪ್ಪನವರು ಈ ಹೇಳಿಕೆ ನೀಡಿರಬಹುದು. ನಾವು, ಬಸವರಾಜ್ ಬೊಮ್ಮಾಯಿಯವರು ಇನ್ನೂ ಹಲವು ಸಚಿವರು ಮುಖ್ಯಮಂತ್ರಿಗಳ ಜೊತೆಗೆ ಇದ್ದೇವೆ. ಕೊರೋನಾದ ಈ ಕಷ್ಟದ ಸಂದರ್ಭದಲ್ಲಿ ಇಂತಹ ಹೇಳಿಕೆಗಳಿಂದ ರಾಜ್ಯದ ಜನತೆಗೆ ಸಮಸ್ಯೆಯಾಗುತ್ತದೆ, ಅದು ಬೇಡ ನಮ್ಮ ಗಮನ, ಕೆಲಸವೇನಿದ್ದರೂ ಕೊರೋನಾ ಓಡಿಸುವುದೇ ಆಗಿರುತ್ತದೆ ಎಂದು ಹೇಳಿದರು.

SCROLL FOR NEXT