ಕುಮಾರಸ್ವಾಮಿ 
ರಾಜಕೀಯ

60 ವರ್ಷ ರಾಜ್ಯ ಆಳಿದ ಪಕ್ಷ ದಲಿತರನ್ನು ಸಿಎಂ ಮಾಡಿಲ್ಲವೇಕೆ: ಕಾಂಗ್ರೆಸ್ ಗೆ ಕುಮಾರಸ್ವಾಮಿ ಟಾಂಗ್

‘ಸ್ವಾತಂತ್ರ್ಯ ಬಂದ ಬಳಿಕ 60 ವರ್ಷ ರಾಜ್ಯ ಆಳಿದ ಕಾಂಗ್ರೆಸ್ ಮುಖಂಡರಿಗೆ ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ವಿಚಾರ ಗೊತ್ತಿರಲಿಲ್ಲವೇ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಪ್ರಶ್ನಿಸಿದರು.

ಮಂಡ್ಯ: ‘ಸ್ವಾತಂತ್ರ್ಯ ಬಂದ ಬಳಿಕ 60 ವರ್ಷ ರಾಜ್ಯ ಆಳಿದ ಕಾಂಗ್ರೆಸ್ ಮುಖಂಡರಿಗೆ ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ವಿಚಾರ ಗೊತ್ತಿರಲಿಲ್ಲವೇ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ದಲಿತರು ಮುಖ್ಯಮಂತ್ರಿಯಾಗುವುದನ್ನು ನಾವು ತಪ್ಪಿಸಿಲ್ಲ. ಅವಕಾಶ ತಪ್ಪಿಸಿದ್ದವರೇ ಈಗ ಮತ್ತೆ ಸಿ.ಎಂ ಆಗಬೇಕು ಎಂದು ಹೇಳಿಕೊಳ್ಳುತ್ತಿದ್ದಾರೆ. ತಾನಿದ್ದರೆ ಮಾತ್ರ ಕಾಂಗ್ರೆಸ್‌ ಎಂದೂ ಹೇಳಿಕೊಳ್ಳುತ್ತಾರೆ. 130 ಸೀಟ್‌ನಿಂದ 78ಕ್ಕೆ ಇಳಿಸಿದರಲ್ಲ ಅವರೇ ದಲಿತರಿಗೆ ಸಿ.ಎಂ ಆಗುವ ಅವಕಾಶ ತಪ್ಪಿಸಿದ್ದಾರೆ’ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಅವಕಾಶ ಸಿಕ್ಕಾಗಲೇ ಕಾಂಗ್ರೆಸ್ ದಲಿತರನ್ನ ಸಿಎಂ ಮಾಡಲಿಲ್ಲ.  2008ರಲ್ಲಿ ನಾನೇ ಮಲ್ಲಿಕಾರ್ಜುನ  ಖರ್ಗೆಗೆ ಮನವಿ ಮಾಡಿದ್ದೆ. ಬೇಷರತ್ ಬೆಂಬಲ ಕೊಡುತ್ತೇವೆ ಎಂದರೂ ಮಾಡಿರಲಿಲ್ಲ. ಕಾಂಗ್ರೆಸ್ ನಲ್ಲಿ ವಲಸಿಗರು ಮೂಲ ಕಾಂಗ್ರೆಸ್ ಎಂದು ಚರ್ಚೆ ನಡೆಯುತ್ತಿದೆ ಎಂದು ಟೀಕಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷಕ್ಕೆ ಮುಜುಗರ ತಪ್ಪಿಸಲು ಸಚಿವ ಬಿ ನಾಗೇಂದ್ರ ರಾಜೀನಾಮೆ; ಸುಳ್ಳೇ ಬಿಜೆಪಿ ಮನೆ ದೇವರು: CM DK Shivakumar

ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಪತನ: ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ; BJP ಹೋರಾಟಕ್ಕೆ ಜಯ! Video

ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ; ಬನ್ನಿ ಅಖಾಡಕ್ಕೆ, ಬಳ್ಳಾರಿಯಲ್ಲಿ ನೀವು ರಿಜೆಕ್ಟ್ ಪೀಸ್‌ಗಳು: ರಾಮುಲು, ರೆಡ್ಡಿಗೆ ನಾಗೇಂದ್ರ ಸವಾಲು

Toxic: ಇಂತಹ ವಿಭಿನ್ನ ಸಿನಿಮಾ ಮಾಡಲು ಗಟ್ಸ್ ಬೇಕು; ಯಶ್ ಹಾಡಿ ಹೊಗಳಿದ ಕಿಚ್ಚ ಸುದೀಪ್!

ರಕ್ಷಾ ಬಂಧನ: ವಿರಾಟ್ ಕೊಹ್ಲಿ ಸಹೋದರಿಯ ಪೋಸ್ಟ್; ಫೋಟೋ ವೈರಲ್!