ರಾಜಕೀಯ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ನಾವೆಂದಿಗೂ ಖಳನಾಯಕನೆಂದು ಭಾವಿಸಿಲ್ಲ: ಸಿ.ಟಿ. ರವಿ

Raghavendra Adiga

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ನಾವೆಂದಿಗೂ ಖಳನಾಯಕನೆಂದು ಭಾವಿಸಿಲ್ಲ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ವೇಳೆ ಯಡಿಯೂರಪ್ಪ ವಿರುದ್ಧ ಸ್ವಪಕ್ಷೀಯರಿಂದಲೇ ದೆಹಲಿಯ ವರಿಷ್ಠರಿಗೆ ದೂರು ಸಲ್ಲಿಕೆ, ಸಂತೋಷ್‌ಜಿ ಭೇಟಿ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ, ಯಡಿಯೂರಪ್ಪ ಎಂದಿಗೂ ನಮ್ಮ ನಾಯಕರೇ. ವಿರೋಧ ಪಕ್ಷದ ನಾಯಕರು ನಮ್ಮ ನಾಯಕರನ್ನು ನಾಯಕ ಎಂದು ಒಪ್ಪಿದ್ದಾರೆ. ಅವರ ಅಭಿಪ್ರಾಯ ಬದಲಾಗದೇ ಹಾಗೆಯೇ ಇರಲಿ. ವಿರೋಧ ಪಕ್ಷದ ನಾಯಕರಿಗೆ ಯಡಿಯೂರಪ್ಪ ಕೆಲವು ಸಂದರ್ಭದಲ್ಲಿ ನಾಯಕನಾಗಿಯೂ ಇನ್ನು ಕೆಲವು ಸಂದರ್ಭದಲ್ಲಿ ಖಳನಾಯಕರಾಗಿಯೂ ಕಾಣುತ್ತಾರೆ. ವಿರೋಧ ಪಕ್ಷದರ ಅಭಿಪ್ರಾಯ ಹಾಗೆಯೇ ಇರಲಿ ಎಂದು ಮಾರ್ಮಿಕವಾಗಿ ಹೇಳಿದರು.

ಸಾವು ಸಾಂಕ್ರಾಮಿಕ ರೋಗಗಳನ್ನು ಮುಂದಿಟ್ಟುಕೊಂಡು ವಿಪಕ್ಷ ನಾಯಕರು ವಿಕೃತಾನಂದ ಪಡುತ್ತಿದ್ದಾರೆ‌‌. ರೋಗದ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ. ವಿದೇಶಗಳ ಜನ ಸಂಖ್ಯೆ ಹಾಗು ಮರಣದ ಪ್ರಮಾಣ ಹಾಗು ಭಾರತದ ಜನಸಂಖ್ಯೆ ಮತ್ತು ಮರಣದ ಪ್ರಮಾಣ ಎಲ್ಲವನ್ನೂ ಹೋಲಿಕೆ ಮಾಡಿ ನೋಡಲಿ. ಇಟಲಿಯಲ್ಲಿ ನರೇಂದ್ರ ಮೋದಿ ಪ್ರಧಾನಿಯಲ್ಲ. ಆದರೆ ಅಲ್ಲಿಯೂ ಸಾವು ನೋವು ಹೆಚ್ಚಿದೆ. ಈಗ ನಾವು ಈ ಸಾವು ನೋವಿಗೆ ಚೈನಾ ವೈರಸ್ ಅನ್ನು ದೂರಬೇಕೇ ಹೊರತು ನರೇಂದ್ರ ಮೋದಿಯವರನ್ನಲ್ಲ ಎಂದು ಸಿ.ಟಿ.ರವಿ ಹೇಳಿದರು.

ಬಾಧಿಸುತ್ತಿರುವ ವೈರಾಣು ಪ್ರಮಾಣ ಹೆಚ್ಚುತ್ತಿರುವ ಕಾರಣ ನಮ್ಮ ಸಿದ್ದತೆ ಸಾಕಾಗಿಲ್ಲ ಎನ್ನುವುದನ್ನು ಒಪ್ಪಬೇಕು. ಆರಂಭದಲ್ಲಿ ಗೊಂದಲ್ಲ ಇದ್ದದ್ದು ನಿಜ ಎಂದ ಸಿ.ಟಿ.ರವಿ, ಎಲ್ಲರಿಗೂ ಜವಾಬ್ದಾರಿ ನೀಡಲಾಗಿದ್ದು, ಅವರೆಲ್ಲರೂ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಮನುಷ್ಯರೆಷ್ಟು ಪ್ರಯತ್ನ ಮಾಡಲು ಸಾಧ್ಯವೋ ಅದೆಲ್ಲ ಕೆಲಸ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಔಷಧಿ ಲಸಿಕೆ ಎಲ್ಲವನ್ನೂ ತಕ್ಷಣಕ್ಕೆ ಉತ್ಪಾದನೆ ಮಾಡಲು ಆಗುತ್ತಿಲ್ಲ ಎಂದು ಒತ್ತಿ ಹೇಳಿದರು

SCROLL FOR NEXT