ಗೆಲುವಿನ ಸಂಭ್ರಮದಲ್ಲಿ ಬಿಜೆಪಿ ಕಾರ್ಯಕರ್ತರು. 
ರಾಜಕೀಯ

ಸಿಂದಗಿಯಲ್ಲಿ ಭರ್ಜರಿ ಗೆಲುವು: ಗ್ರಾಮೀಣ ಕೇಂದ್ರಿತ ಪ್ರಚಾರದಿಂದ ಬಿಜೆಪಿಗೆ ಲಾಭ!

ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದ್ದ ಎರಡು ಕ್ಷೇತ್ರಗಳ ಉಪಚುನಾಣೆಯ ಫಲಿತಾಂಶದಲ್ಲಿ ಮಂಗಳವಾರ ಹೊರಬಿದ್ದಿದ್ದು, ಸಿಂದಗಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಭಾರೀ ಕುತೂಹಲದ ಮಧ್ಯೆ ಕಮಲ ಅರಳಿದ್ದು, ಈಗ ಗೆಲುವಿಗೆ ಯಾವ್ಯಾವ ಅಂಶಗಳು ಕಾರಣವಾದವು ಎಂಬುದರ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ವಿಜಯಪುರ: ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದ್ದ ಎರಡು ಕ್ಷೇತ್ರಗಳ ಉಪಚುನಾಣೆಯ ಫಲಿತಾಂಶದಲ್ಲಿ ಮಂಗಳವಾರ ಹೊರಬಿದ್ದಿದ್ದು, ಸಿಂದಗಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಭಾರೀ ಕುತೂಹಲದ ಮಧ್ಯೆ ಕಮಲ ಅರಳಿದ್ದು, ಈಗ ಗೆಲುವಿಗೆ ಯಾವ್ಯಾವ ಅಂಶಗಳು ಕಾರಣವಾದವು ಎಂಬುದರ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಅವರು 31,088 ಮತಗಳ ಅಂತರದಿಂದ ಗೆಲುವು ಸಾಧಿಸಿದದ್ದು, ಸಿಂದಗಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಸಂಪುಟದ ಸಚಿವರ ತೀವ್ರ ಪ್ರಚಾರವು ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಭೂಸನೂರ ಅವರಿಗೆ ಒಟ್ಟು 93,865, ಕಾಂಗ್ರೆಸ್‌ನ ಅಶೋಕ ಮನಗೂಳಿ 62,680 ಮತಗಳನ್ನು ಪಡೆದುಕೊಂಡಿದ್ದು, ಜೆಡಿಎಸ್‌ನ ನಾಜಿಯಾ ಶಕೀಲ್‌ ಅಹ್ಮದ್‌ ಅಂಗಡಿ 4,353 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ಗೆಲುವು ಕುರಿತು ಮಾತನಾಡಿರುವ ರಮೇಶ ಭೂಸನೂರ ಅವರು,‘ಜನರು 30 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ನೀಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಮುಸ್ಲಿಂ ಸಮುದಾಯದ ಕನಿಷ್ಠ 4,000 ಜನರು ನನಗೆ ಮತ ಹಾಕಿದ್ದಾರೆಂದು ಸಂತಸ ವ್ಯಕ್ತಪಡಿಸಿದ್ದಾರೆ.

ಆರಂಭದಿಂದಲೂ ಬಿಜೆಪಿ ನಗರ ಭಾಗಕ್ಕಿಂತಲೂ ಗ್ರಾಮೀಣ ಭಾಗಗಳತ್ತಲೇ ಹೆಚ್ಚು ಗಮನ ಹರಿಸಿತ್ತು. ಪಕ್ಷವು 7 ತಂಡಗಳನನು ರಚಿಸಿತ್ತು. ಪ್ರತೀಯೊಂದು ತಂಡಕ್ಕೂ ಒಂದೊಂದು ಜಿಲ್ಲಾ ಪಂಚಾಯತ್ ಹೊಣೆಯನ್ನು ನೀಡಲಾಗಿತ್ತು. ಪ್ರತೀ ತಂಡವೂ ಪಕ್ಷದ ಒಬ್ಬ ಹಿರಿಯ ನಾಯಕ ಅಥವಾ ಸಚಿವರನ್ನು ಮುಖ್ಯಸ್ಥರನ್ನೊಳಗೊಂಡಿತ್ತು. ಜಾತಿ ಲೆಕ್ಕಾಚಾರಗಳನ್ನು ನೋಡಿಕೊಂಡು ಆಯಾ ಭಾಗದಲ್ಲಿ ಪ್ರಚಾರ ಮಾಡುವಂತೆ ಪಕ್ಷವು ಸಚಿವರಿಗೆ ಸೂಚನೆ ನೀಡಿತ್ತು. ಸಚಿವ ಗೋವಿಂದ ಕಾರಜೋಳ, ಆರು ಬಾರಿ ಸಂಸದರಾಗಿರುವ ರಮೇಶ್ ಜಿಗಜಿಣಗಿ ಅವರಿಗೆ ದಲಿತ ಸಮುದಾಯದ ಜವಾಬ್ದಾರಿ ನೀಡಲಾಗಿತ್ತು.

ಲಿಂಗಾಯತ ಗಾಣಿಗ ಮತ ಸೆಳೆಯಲು ಶಾಸಕ ಲಕ್ಷ್ಮಣ ಸವದಿ, ಲಿಂಗಾಯತ-ಪಂಚಮಸಾಲಿ ಮತಗಳನ್ನು ಕ್ರೋಢೀಕರಿಸಲು ಸಚಿವ ಸಿ.ಸಿ.ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್, ಸಚಿವರಾದ ಬೈರತಿ ಬಸವರಾಜ್, ಕುರುಬ ಮತಗಳಿಗೆ ಎಂಟಿಬಿ ನಾಗರಾಜ್ ಕೇಳಲು ಮತ್ತು ಇತರ ಲಿಂಗಾಯತ ಮತ್ತು ಮಹಿಳಾ ಮತಗಳನ್ನು ಪಡೆಯಲು ಸಚಿವರಾದ ವಿ ಸೋಮಣ್ಣ ಮತ್ತು ಶಶಿಕಲಾ ಜೊಲ್ಲೆ ಅವರಿಗೆ ಜವಾಬ್ದಾರಿ ನೀಡಲಾಗಿತ್ತು ಎಂದು ತಿಳಿದುಬಂದಿದೆ.

ರಾಜಕೀಯ ತಜ್ಞ ಗೋಪಾಲ್ ನಾಯಕ್ ಅವರು ಮಾತನಾಡಿ, ಬಿಜೆಪಿಯು ಗಾಣಿಗ, ತಳವಾರ, ಎಸ್‌ಸಿ/ಎಸ್‌ಟಿ ಮತ್ತು ಇತರ ಸಾಂಪ್ರದಾಯಿಕ ಮತಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ಜಾತಿ ಲೆಕ್ಕಾಚಾರದಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಕಾಂಗ್ರೆಸ್, ಜೆಡಿಎಸ್ ಗಿಂತಲೂ ಉತ್ತಮವಾಗಿ ಪ್ರಚಾರ ತಂತ್ರಗಳನ್ನು ರೂಪಿಸಿತ್ತು ಎಂದು ಹೇಳಿದ್ದಾರೆ.

ಜೆಡಿಎಸ್ ನಿಂದ ವಲಸೆ ಬಂದ ಅಶೋಕ್ ಮನಗೂಳಿ ಅವರನ್ನು ಆಯ್ಕೆ ಮಾಡಿದ್ದು ಪಕ್ಷದಲ್ಲಿಯೇ ಕೆಲ ತಿಕ್ಕಾಟಗಳಿಗೆ ಕಾರಣವಾಗಿತ್ತು. ಇದು ಕಾಂಗ್ರೆಸ್ ಸೋಲಿಗೆ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT