ರಾಜಕೀಯ

ಬಿಟ್ ಕಾಯಿನ್ ವಿಚಾರ ಮರೆಮಾಚಲು ಬಿಜೆಪಿಯಿಂದ ಸಿದ್ದರಾಮಯ್ಯ ವಿರುದ್ಧ ಆರೋಪ: ಕಾಂಗ್ರೆಸ್

Srinivasamurthy VN

ಬೆಂಗಳೂರು: ರಾಜ್ಯದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಬಿಟ್ ಕಾಯಿನ್ (Bitcoin scam) ವಿಚಾರವನ್ನು ಮರೆಮಾಚಲು ಆಡಳಿತಾರೂಢ ಬಿಜೆಪಿ (BJP) ಪಕ್ಷ ಸಿದ್ದರಾಮಯ್ಯ (Siddaramaiah) ಅವರ ಮೇಲೆ ಇಲ್ಲದ ಆರೋಪಗಳನ್ನು ಹೊರಿಸುತ್ತಿದೆ ಎಂದು ಕಾಂಗ್ರೆಸ್ (Congress) ಪಕ್ಷ ಆರೋಪಿಸಿದೆ.

ಈ ಕುರಿತು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು. ಹೊಟ್ಟೆಪಾಡಿಗೆ ಹೋಗಿದ್ದಾರೆ ಎಂದು ಎಲ್ಲಿಯೂ ಸಿದ್ದರಾಮಯ್ಯ ಹೇಳಿಲ್ಲ. ಅಧಿಕಾರಕ್ಕಾಗಿ ಕೆಲ ರಾಜಕಾರಣಿಗಳು ಬಿಜೆಪಿಗೆ ಹೋದರು ಎಂದು ಹೇಳಿದ್ದಾರೆ ಅಷ್ಟೇ.. ಬಿಜೆಪಿಯವರು ವಿಷಯ ತಿರುಚುವುದರಲ್ಲಿ ಪರಿಣಿತರು. ವಿಷಯಾಂತರ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಸರ್ಕಾರ ದಲಿತರಿಗೆ ವಿಶೇಷ ಕೆಲಸ ಮಾಡಿದೆ. 5 ವರ್ಷದಲ್ಲಿ ಬಿಜೆಪಿ ಕೇವಲ 22 ಸಾವಿರ ಕೋಟಿ ರೂಪಾಯಿ ನೀಡಿದೆ. ಆದರೆ, ಕಾಂಗ್ರೆಸ್ 88 ಸಾವಿರ ಕೋಟಿ ರೂಪಾಯಿ ದಲಿತರಿಗೆ ನೀಡಿದೆ. ಇದು ಸಿದ್ದರಾಮಯ್ಯ ಅವರ ದಲಿತಪರ ಕಾಳಜಿ ತಿಳಿಸುತ್ತೆ. ಬಿಜೆಪಿಯವರದ್ದು ಮೊಸಳೆ ಕಣ್ಣೀರು. ಬಿಟ್ ಕಾಯಿನ್ ದಂಧೆ ಪ್ರಕರಣದ ತನಿಖೆಯಾದರೆ, ಅದರ ಬಗ್ಗೆ ನಿಷ್ಪಕ್ಷಪಾತ ತನಿಖೆಯಾದರೆ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಂಟಕ ಎದುರಾಗಲಿದೆ. ಬಿಟ್ ಕಾಯಿನ್ ವಿಚಾರವನ್ನು ಮರೆಮಾಚಲು ಮಾಡಲು ಈ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ದಲಿತ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ ಎಂದು ಹೇಳಿದರು.

ಬಿಟ್ ಕಾಯಿನ್‌ ಹ್ಯಾಕ್​​ ಮಾಡಿ ಕೋಟ್ಯಂತರ ಹಣ ಮಾಡಿದ್ದಾರೆ. 7 ರಿಂದ 8 ಸಾವಿರ ಕೋಟಿ ಮಾಡಿದ ಬಗ್ಗೆ ಮಾತಾನಾಡುತ್ತಿದ್ದಾರೆ. ಇದರ ಹಿಂದೆ ಪ್ರಭಾವಿಗಳು ಇರುವ ಮಾಹಿತಿ ಇದೆ. ಬಿಟ್​ ಕಾಯಿನ್​ ದಂಧೆ ಬಗ್ಗೆ ಎಫ್‌ಬಿಐ ತನಿಖೆ ಮಾಡುತ್ತಿದೆ. ಈಗ ಸಿಬಿಐಗೆ ಕೊಟ್ಟಿದ್ದಾಗಿ ಗೃಹ ಸಚಿವರು ಹೇಳುತ್ತಿದ್ದಾರೆ. ಯಾವಾಗ ಸಿಬಿಐ ತನಿಖೆಗೆ ಕೊಟ್ಟರು ಎಂದು ಗೊತ್ತಾಗುತ್ತಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

SCROLL FOR NEXT