ಲಖೀಂಪುರ ಹಿಂಸಾಚಾರ 
ರಾಜಕೀಯ

ಬ್ರಿಟಿಷರ ಬೂಟಿನ ರುಚಿ ಕಂಡಿರುವ ಬಿಜೆಪಿಗರು ಅವರಿಗಿಂತ ಕ್ರೂರಿಗಳು: ಹೊರಗಿನವರಿಗಿಂತ ಒಳಗಿನವರ ದೌರ್ಜನ್ಯವೇ ಹೆಚ್ಚು ಆಘಾತಕಾರಿ!

ಬ್ರಿಟಿಷರ ಬೂಟಿನ ರುಚಿ ಕಂಡಿರುವ ಬಿಜೆಪಿಗರು ಬ್ರಿಟಿಷರಿಗಿಂತ ಕ್ರೂರಿಗಳಾಗಿದ್ದಾರೆ' ಎಂದು ಬಿಜೆಪಿ ವಿರುದ್ಧ ಕರ್ನಾಟಕ ಕಾಂಗ್ರೆಸ್‌ ಹರಿಹಾಯ್ದಿದೆ.

ಬೆಂಗಳೂರು: ಬ್ರಿಟಿಷರ ಬೂಟಿನ ರುಚಿ ಕಂಡಿರುವ ಬಿಜೆಪಿಗರು ಬ್ರಿಟಿಷರಿಗಿಂತ ಕ್ರೂರಿಗಳಾಗಿದ್ದಾರೆ' ಎಂದು ಬಿಜೆಪಿ ವಿರುದ್ಧ ಕರ್ನಾಟಕ ಕಾಂಗ್ರೆಸ್‌ ಹರಿಹಾಯ್ದಿದೆ.

ಬ್ರಿಟಿಷರು ಕೂಡ ಬಹಳ ಗೌರವದಿಂದ ನೋಡಿಕೊಳ್ಳುತ್ತಿದ್ದರು' ಎಂಬ ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌ ಹೇಳಿಕೆಯ ವಿಡಿಯೊ ತುಣುಕನ್ನು ಹಂಚಿಕೊಂಡಿರುವ ಬಿಜೆಪಿ, ದೇಶವನ್ನು ಸುದೀರ್ಘ ಕಾಲ ದಾಸ್ಯಕ್ಕೆ ತಳ್ಳಿದ ಬ್ರಿಟಿಷರ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಡಿದ ಮಾತುಗಳಿವು ಎಂದಿದೆ.

ಇದಕ್ಕೆ ಪ್ರತಿಕ್ರಿಯಿಸಿ  ಟ್ವೀಟ್ ಮಾಡಿರುವ ಕಾಂಗ್ರೆಸ್‌, 'ಬ್ರಿಟಿಷರು ಅಹಿಂಸಾ ಸತ್ಯಾಗ್ರಹಕ್ಕೆ ಮಣಿದಿದ್ದರು, ಆದರೆ ಬಿಜೆಪಿಗರು ರೈತರ ಅಹಿಂಸಾ ಪ್ರತಿಭಟನೆಯಲ್ಲಿ ಮಾರಣಹೋಮ ನಡೆಸಿದರು. ಹೊರಗಿನವರ ದೌರ್ಜನ್ಯಕ್ಕಿಂತ ಒಳಗಿನವರ ದೌರ್ಜನ್ಯವೇ ಹೆಚ್ಚು ಆಘಾತಕಾರಿ ಎಂದು ಕಾಂಗ್ರೆಸ್‌ ಹೇಳಿದೆ.

'ತ್ಯಾಗ, ಬಲಿದಾನದಿಂದ ಪಡೆದ ಸ್ವಾತಂತ್ರ್ಯವನ್ನು ಒಂದೇ ಮಾತಿನಲ್ಲಿ ಕಾಂಗ್ರೆಸ್‌ ಅಧ್ಯಕ್ಷರು ನಾಶ ಮಾಡಿದ್ದಾರೆ. ಎಷ್ಟಾದರೂ ನೀವು ನಕಲಿ ಕಾಂಗ್ರೆಸ್ಸಿಗರಲ್ಲವೇ, ಇಲ್ಲಿಯವರಿಗಿಂತ ಹೊರಗಿನವರೇ ನಿಮಗೆ ಆಪ್ತರಾಗುತ್ತಾರೆ' ಎಂದು ಬಿಜೆಪಿ ಟ್ವೀಟ್‌ನಲ್ಲಿ ಕಾಂಗ್ರೆಸ್‌ ಅನ್ನು ತರಾಟೆಗೆ ತೆಗೆದುಕೊಂಡಿತ್ತು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?