ರಾಜಕೀಯ

88ನೇ ವಯಸ್ಸಿನಲ್ಲೂ ಬತ್ತದ ಉತ್ಸಾಹ: ಸಿಂದಗಿಯಲ್ಲಿ ದೇವೇಗೌಡ-ಪ್ರಜ್ವಲ್ ; ಹಾನಗಲ್  ಪ್ರಚಾರದಲ್ಲಿ  ಎಚ್.ಡಿಕೆ- ನಿಖಿಲ್ 

Shilpa D

ಬೆಂಗಳೂರು: ಸಿಂದಗಿ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಹಿಂದೆ ತಮ್ಮದೇ ಪಕ್ಷದ ಅಭ್ಯರ್ಥಿಯಿದ್ದ ಸಿಂದಗಿ ಕ್ಷೇತ್ರವನ್ನು ಗೆಲ್ಲಬೇಕೆಂದು ಜೆಡಿಎಸ್ ಪ್ರಯತ್ನಿಸುತ್ತಿದೆ. 

ತಮ್ಮ 88ನೇ ವಯಸ್ಸಿನಲ್ಲಿಯೂ ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡ ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಜಿಯಾ‌ ಅಂಗಡಿ ಪರ ಪ್ರಚಾರ ನಡೆಸಿದರು. ನಾಜಿಯಾ ಅವರ ಮನೆಗೂ ಭೇಟಿ ನೀಡಿದ್ದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೇವೇಗೌಡ, ಅ.27ರವರೆಗೆ ಕ್ಷೇತ್ರದಲ್ಲಿಯೇ ಉಳಿದು ಪ್ರಚಾರ ನಡೆಸುತ್ತೇನೆ ಎಂದು ಹೇಳಿದರು. 

ಮುಂದಿನ 10 ದಿನಗಳ ಕಾಲ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತೇನೆ. ಕುಮಾರಸ್ವಾಮಿ ಸಹ ಇಲ್ಲಿ ಸಂಚರಿಸಿ, ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎನ್ನುವುದು ನಮ್ಮ ಉದ್ದೇಶ. ನಾನು ಯಾರ ವಿರುದ್ಧವೂ ಅಪಪ್ರಚಾರ ಮಾಡುವುದಿಲ್ಲ. ಸಾರ್ವಜನಿಕ ರ್ಯಾಲಿಗಳನನ್ನು ನಡಡೆಸುವ ಬದಲಾಗಿ ಹಳ್ಳಿಗಳಿಗೆ ತೆರಳಿ ರೈತರ ಕುಂದುಕೊರತೆಗಳನ್ನು ಆಲಿಸುತ್ತೇನೆ.ಯಾರ ಬಗ್ಗೆಯೂ ಮಾತನಾಡುವುದಿಲ್ಲ. ನಮ್ಮ ಅಭ್ಯರ್ಥಿ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ. ನಮ್ಮ ಅಭ್ಯರ್ಥಿಯ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ನಾನು ಸಿಎಂ ಆಗಿದ್ದ ವೇಳೆ ಕೃಷ್ಣ ಮೇಲ್ದಂಡೆ ಯೋಜನೆ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ 1,970 ಕೋಟಿ ರು ಹಣ ಬಿಡುಗಡೆ ಮಾಡಿದ್ದೆ.  ಪ್ರಧಾನಿ ಆಗಿದ್ದ ವೇಳೆ 800 ಕೋಟಿ ರಿಲೀಸ್ ಮಾಡಿದ್ದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ವೈಎಸ್ ವಿ ದತ್ತ ದೇವೇಗೌಡರ ಕೊಡುಗೆಯನ್ನು ಗಮನಿಸಿ ಸಿಎಂ ಮನಗೂಳಿ ಅವರು ದೇವೇಗೌಡರ ಪ್ರತಿಮೆ ನಿರ್ಮಿಸಿದ್ದರು ಎಂದರು. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಹಾನಗಲ್ ಕ್ಷೇತ್ರದ ಪ್ರಚಾರದಲ್ಲಿ ಪಾಲ್ಗೋಳ್ಳಲಿದ್ದಾರೆ.  ಸಿಂದಗಿಯಲ್ಲಿ ದೇವೇಗೌಡರು ಸಂಸದ ಪ್ರಜ್ವಲ್ ರೇವಣ್ಣ  ಜೊತೆ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್ ವರಿಷ್ಠರು ಸಿಂದಗಿಯ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ, ಏಕೆಂದರೆ ಅವರು ಪಂಚಮಶಾಲಿ ಸಮುದಾಯದ ನಾಯಕನಾಗಿದ್ದ ಮನಗೂಳಿ ಅವರನ್ನು ರಾಜಕೀಯವಾಗಿ   ಬೆಳೆಸಿದ್ದಾರೆ . ಆಗಿನ ಜನತಾದಳದ ಕೆಲವು ನಾಯಕರು ಅವರನ್ನು ವಿರೋಧಿಸಿದ್ದರಿಂದ ಅವರು ಮನಗೂಳಿ ಅವರನ್ನು ಎಲ್ಲಾ ವಿರೋಧಿಗಳ ವಿರುದ್ಧ ಗೆಲ್ಲುವಂತೆ ಮಾಡಿದರು ಮತ್ತು ನಂತರ ಅವರು ಮಂತ್ರಿಯಾದರು.

SCROLL FOR NEXT