ರಾಜಕೀಯ

ಆರ್ ಎಸ್ ಎಸ್ ಬಗ್ಗೆ ಮಾತನಾಡುವುದು ಇದು ಮೊದಲೇನಲ್ಲ, ಓಲೈಕೆ ರಾಜಕಾರಣಕ್ಕೆ ಜನ ಮರುಳಾಗುವುದಿಲ್ಲ: ವಿಶ್ವಪ್ರಸನ್ನ ಸ್ವಾಮೀಜಿ

Sumana Upadhyaya

ಬಾಗಲಕೋಟೆ: ಚುನಾವಣೆ ಬಂದಾಗ ಆರ್ ಎಸ್ ಎಸ್, ವಿಹೆಚ್ ಪಿ ಬಗ್ಗೆ ರಾಜಕೀಯ ನಾಯಕರು ಮಾತನಾಡುತ್ತಾರೆ, ಚುನಾವಣೆ ಮುಗಿದ ಮೇಲೆ ಅದು ತಣ್ಣಗಾಗುತ್ತದೆ. ಚುನಾವಣೆಗೋಸ್ಕರ ಆರ್ ಎಸ್ ಎಸ್, ವಿಎಚ್ ಪಿ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ರಾಜಕೀಯ ನಾಯಕರು ಚುನಾವಣೆ ಬಂದಾಗ ಆರ್ ಎಸ್ ಎಸ್ ಬಗ್ಗೆ ಮಾತನಾಡುವುದೇಕೆ, ಇದರಿಂದ ಅವರೇ ಸಮಾಜದಲ್ಲಿ ಜನರ ಮುಂದೆ ಸಣ್ಣವರಾಗುತ್ತಾರಷ್ಟೆ ಹೊರತು ಮತ್ತಿನ್ನೇನೂ ಪ್ರಯೋಜನವಿಲ್ಲ, ಅಷ್ಟಕ್ಕೂ ಆರ್ ಎಸ್ ಎಸ್ ಬಗ್ಗೆ ಮಾತನಾಡುವುದು ಇದೇ ಮೊದಲಲ್ಲ, ಜನರು ಓಲೈಕೆ ರಾಜಕಾರಣಕ್ಕೆ ಮರಳಾಗುವುದಿಲ್ಲ ಎಂದರು.

ಇನ್ನೂ ಕೋವಿಡ್-19ನ ಪ್ರಭಾವ ಕಡಿಮೆಯಾಗಿಲ್ಲ. ವಿಶೇಷವಾದ ಜನಸಂಪರ್ಕ ನಡೆದಿಲ್ಲ, ಕ್ರಮೇಣ ಪರಿಸ್ಥಿತಿ ಸುಧಾರಿಸಬಹುದು, ಎಲ್ಲರೂ ಎಲ್ಲಾ ಕಡೆಗೂ ಹೋಗಬೇಕೆಂದೇನಿಲ್ಲ. ನಾವು ಕೂಡ ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಒಬ್ಬರು ಬಂದಿಲ್ಲ ಎಂದಾಗಲೇ ಅವರು ವಿರೋಧಿಯಾಗಿದ್ದಾರೆ ಎಂದು ಅಂದುಕೊಳ್ಳಬೇಕಿಲ್ಲ, ಮುಂದೆ ಬರಬಹುದು ಎಂದು ಸಿದ್ದರಾಮಯ್ಯನವರು ಕೃಷ್ಣ ಮಠಕ್ಕೆ ಭೇಟಿ ನೀಡದ ವಿಚಾರಕ್ಕೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

SCROLL FOR NEXT