ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ 
ರಾಜಕೀಯ

ಅಲ್ಪಸಂಖ್ಯಾತರ ಓಲೈಕೆ ಮೂಲಕ ಜಾತ್ಯತೀತ ಅಸ್ಮಿತೆ ಸದೃಢವಾಗಿಸಲು ಜೆಡಿಎಸ್ ತಂತ್ರ!

ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಬೆಂಗಳೂರು: ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಎರಡೂ ಕ್ಷೇತ್ರಗಳಲ್ಲಿ ಅಲ್ಪ ಸಂಖ್ಯಾತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲರ ಜೆಡಿಎಸ್ ತನ್ನ ಭವಿಷ್ಯವನ್ನು ಹಾಳುಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ, ಆದರೆ ಕೆಲವು ರಾಜಕೀಯ ತಜ್ಞರ ಅಭಿಪ್ರಾಯವೇ ಬೇರೆಯಾಗಿದೆ. ಇದು ಜೆಡಿಎಸ್ ದೀರ್ಘಕಾಲೀನ ಕಾರ್ಯತಂತ್ರವಾಗಿರಬಹುದು, ತನ್ನ ಜಾತ್ಯತೀತ ತತ್ತ ಸಿದ್ಧಾಂತಗಳನ್ನು ರುಜುವಾತುಮಾಡಲು ನೋಡುತ್ತಿದೆ ಎಂದು ಹೇಳಿದ್ದಾರೆ.

ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗ ಜೆಡಿಎಸ್ ಪ್ರಬಲ ಬೆಂಬಲಿತ ಕ್ಷೇತ್ರವಾಗಿದೆ. ಆದರೆ ಈ ಭಾಗದಿಂದ ವಿಧಾನಸಭೆಗೆ ಅಗತ್ಯವಾದ ಶಾಸಕರನ್ನು ನೀಡಲು ಸಾಧ್ಯವಿಲ್ಲ.  ಬಿಎಸ್ ಪಿ ಜೊತೆಗಿನ ಹೊಂದಾಣಿಕೆ ಮತ್ತು ದಲಿತರ ಬೆಂಬಲದಿಂದಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 37 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಯಿತು.


2018 ರಲ್ಲಿ, ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಬಿಎಸ್ಪಿ ಮೈತ್ರಿ ಮಾಡಿಕೊಂಡು 18 ಸ್ಥಾನಗಳಿಂದ ಸ್ಪರ್ಧಿಸಿದ್ದರು. ಕೊಳ್ಳೇಗಾಲದ ಏಕೈಕ ಬಿಎಸ್‌ಪಿ ಶಾಸಕ ಎನ್‌ ಮಹೇಶ್‌ಗೆ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ ಸಚಿವ ಸ್ಥಾನ ನೀಡಿತ್ತು, ಆದರೆ ನಂತರ ಅವರು ತಮ್ಮ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜೀನಾಮೆ ನೀಡಿದರು.  ದಲಿತರು ಮತಗಳಿಂದ ರಾಜ್ಯಾದ್ಯಂತ ಕನಿಷ್ಠ 7-8 ಸ್ಥಾನಗಳಲ್ಲಿ ಜೆಡಿಎಸ್‌ಗೆ ಈ ಮೈತ್ರಿ ಸಹಾಯ ಮಾಡಿದೆ ಎಂದು ರಾಜಕೀಯ ತಜ್ಞರ ಅಭಿಮತ.

ಈಗ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಜೆಡಿಎಸ್ ಮತ್ತೊಂದು ರಣತಂತ್ರಕ್ಕೆ ಮುಂದಾಗಿದೆ. ಇನ್ನೂ 17 ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇರುವ ಕಾರಣ 20 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದ್ದಾರೆ.

ಆದರೆ ಈ ಬಾರಿ ಬಿಎಸ್ ಪಿ ಜೆಡಿಎಸ್ ನಿಂತ ದೂರಾಗಿದೆ. ಆದರೆ ಜೆಡಿಎಸ್ ಕಾಯುವ ತಂತ್ರಕ್ಕೆ ಶರಣಾಗಿದೆ,  ನಾವು ಈವಿಷಯದ ಬಗ್ಗೆ ಇನ್ನೂ ಚರ್ಚಿಸಿಲ್ಲ ಅವಕಾಶವಿದ್ದರೇ ಮೈತ್ರಿ ಬಗ್ಗೆ ಚರ್ಚಿಸಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ಹೇಳಿದ್ದಾರೆ.
ಮೈತ್ರಿಯಿಂದಾಗಿ ದಲಿತ ಮತಗಳಲ್ಲಿ ಹೆಚ್ಚಿನ ಪಾಲನ್ನು ಜೆಡಿಎಸ್ ಪಡೆದಿದೆ ಎಂದರ್ಥ, ಇದು ಜೆಡಿಎಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡಿದ. ಟಿ ನರಸೀಪುರದಂತಹ ಕೆಲವು ಸ್ಥಾನಗಳಲ್ಲಿ, ಕಾಂಗ್ರೆಸ್‌ನ  ಪ್ರಬಲ ನಾಯಕ ಎಚ್‌ಸಿ ಮಹದೇವಪ್ಪ ಸುಮಾರು 28,000 ಮತಗಳಿಂದ ಜೆಡಿಎಸ್‌ನ ಅಶ್ವಿನ್‌ ಕುಮಾರ್‌ ವಿರುದ್ಧ ಸೋತರು. ಇತರ ಹಲವು ಕ್ಷೇತ್ರಗಳಲ್ಲಿ ದಲಿತರ ಮತಗಳು ಜೆಡಿಎಸ್‌ನತ್ತ ಗಣನೀಯವಾಗಿ ಬದಲಾಗಿವೆ.

ಅಲ್ಪಸಂಖ್ಯಾತರ ಬೆಂಬಲವನ್ನು ಸೆಳೆಯುವುದು ಜೆಡಿಎಸ್ ಗೆ ಸುಲಭವಲ್ಲ,  ಏಕೆಂದರೆ ಪಕ್ಷವು ಮೊದಲು ಅವರ ವಿಶ್ವಾಸವನ್ನು ಗಳಿಸಬೇಕಾಗಿದೆ. ಅಲ್ಪಸಂಖ್ಯಾತರ ಪ್ರಾಥಮಿಕ ಕಾಳಜಿ ಭದ್ರತೆ ಪ್ರಮುಖವಾಗಿದೆ, ಸಮುದಾಯವು ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಅನ್ನು ಬೆಂಬಲಿಸಿದೆ ಎಂದು ರಾಜಕೀಯ ವಿಶ್ಲೇಷಕ ಬಿ ಎಸ್ ಮೂರ್ತಿ ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT