ರಾಜಕೀಯ

ಕಲಬುರಗಿ ಪಾಲಿಕೆ ಮೈತ್ರಿ ವಿಚಾರ: ಎಚ್.ಡಿ ಕುಮಾರಸ್ವಾಮಿ, ದೇವೇಗೌಡ ಅಂತಿಮ ನಿರ್ಧಾರ

Shilpa D

ಬೆಂಗಳೂರು: ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಬೆಂಬಲ ನೀಡುವ ಸಂಬಂಧ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಸೋಮವಾರ ಸಂಜೆ ನಡೆಯಿತು.

ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಂಜೆ 7 ಗಂಟೆಗೆ ಸಭೆ ಆರಂಭವಾಗಬೇಕಾಯಿತು. ಆದರೆ ಕೆಲವು ಶಾಸಕರು ಬರುವುದು ತಡವಾದ ಕಾರಣ ನಿಧಾನವಾಗಿ ಸಭೆ ಆರಂಭವಾಯಿತು. ಬಹಿರಂಗವಾಗಿ ಬಂಡಾಯವೆದ್ದಿರುವ ಪಕ್ಷದ ಶಾಸಕ ಜಿಟಿ ದೇವೇಗೌಡರು ಜೆಡಿಎಲ್‌ಪಿ ಸಭೆಯಲ್ಲಿ ನಿರೀಕ್ಷೆಯಂತೆ ಭಾಗವಹಿಸಲಿಲ್ಲ. 

ಕಲಬುರಗಿ ಪಾಲಿಕೆಯಲ್ಲಿ ಗೆದ್ದಿರುವ ಜೆಡಿಎಸ್ ಸದಸ್ಯರನ್ನು ಪಕ್ಷವು ಸೇಫ್ ಆಗಿರಿಸಿಕೊಂಡಿದೆ, ಪಾಲಿಕೆ ಚುನಾವಣೆಯಲ್ಲಿ ಕಾಂಗ್ರಸ್ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.  ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಬಿಜೆಪಿಯನ್ನು ಓಲೈಸುತ್ತಿವೆ.

ಕಲಬುರಗಿ ಪಾಲಿಕೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಸಂಬಂಧ ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಎಚ್.ಡಿ ಕುಮಾರಸ್ವಾಮಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಈ ಅಧಿವೇಶನದಲ್ಲಿ ಸರ್ಕಾರವು 18 ಮಸೂದೆಗಳನ್ನು ಪರಿಚಯಿಸಲು ಯೋಜಿಸುತ್ತಿರುವುದರಿಂದ, ಜೆಡಿಎಸ್ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ವಾಕೌಟ್ ಮಾಡುವ ಮೂಲಕ ಕೃಷಿ ಮಸೂದೆಗಳನ್ನು ಅಂಗೀಕರಿಸುವಂತಹ ವಿಷಯಗಳಲ್ಲಿ ಪಕ್ಷವು ತಂತ್ರಗಾರಿಕೆಯಿಂದ ಬಿಜೆಪಿಯನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಲಾಗಿದೆ.ಈ ಅಧಿವೇಶನದಲ್ಲಿ  ಸರ್ಕಾರವು 18 ಮಸೂದೆಗಳನ್ನು ವಿಧಾನಸಭೆ ಅಧಿವೇಶನದಲ್ಲಿ ಅಂಗೀಕರಿಸಲು ಯೋಜಿಸುತ್ತಿರುವುದರಿಂದ, ಜೆಡಿಎಸ್ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ವಾಕೌಟ್ ಮಾಡುವ ಮೂಲಕ ಕೃಷಿ ಮಸೂದೆಗಳನ್ನು ಅಂಗೀಕರಿಸುವಂತಹ ವಿಷಯಗಳಲ್ಲಿ ಪಕ್ಷವು ತಂತ್ರಗಾರಿಕೆಯಿಂದ ಬಿಜೆಪಿಯನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಲಾಗಿದೆ.

SCROLL FOR NEXT