ಬಸವರಾಜ ಬೊಮ್ಮಾಯಿ 
ರಾಜಕೀಯ

'ಗುಲಾಮಗಿರಿ ಸಂಸ್ಕೃತಿಯ ಬಿಜೆಪಿಯಲ್ಲಿ ಮೋದಿ- ಶಾ ಜೋಡಿಯ ಬೂಟು ನೆಕ್ಕುವ ನಿಯಮ ಕಡ್ಡಾಯ'

ಬಿಜೆಪಿ ದೇಶಭಕ್ತಿ ಹೊಂದಿರುವ ಪಕ್ಷ, ಕಾಂಗ್ರೆಸ್ ಗುಲಾಮಗಿರಿ ಪಾರ್ಟಿ ಎಂದು ಮುಖ್ಯಮಂತ್ರಿ ಬಸವರಾಜಜ ಬೊಮ್ಮಾಯಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಬೆಂಗಳೂರು: ಬಿಜೆಪಿ ದೇಶಭಕ್ತಿ ಹೊಂದಿರುವ ಪಕ್ಷ, ಕಾಂಗ್ರೆಸ್ ಗುಲಾಮಗಿರಿ ಪಾರ್ಟಿ ಎಂದು ಮುಖ್ಯಮಂತ್ರಿ ಬಸವರಾಜಜ ಬೊಮ್ಮಾಯಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಪಕ್ಷ ಸಿಎಂ ಬೊಮ್ಮಾಯಿ ಅವರೇ ಇತ್ತೀಚೆಗಷ್ಟೇ ನಿಮ್ಮದೇ ಪಕ್ಷದ ಸುಬ್ರಮಣಿಯನ್ ಸ್ವಾಮಿ ಅವರು ಬಿಜೆಪಿಯಲ್ಲಿ ಬೂಟು ನೆಕ್ಕುವ ಗುಲಾಮರೇ ತುಂಬಿದ್ದಾರೆ ಎಂದು ತಿಳಿಸಿದ್ದು ನೆನಪಿದೆಯೇ? ಎಂದು ಪ್ರಶ್ನಿಸಿದೆ.

ಗುಲಾಮಗಿರಿ ಸಂಸ್ಕೃತಿಯ ಬಿಜೆಪಿಯಲ್ಲಿ ಮೋದಿ- ಅಮಿತ್ ಶಾ ಜೋಡಿಯ ಬೂಟು ನೆಕ್ಕುವ ಕಡ್ಡಾಯ ನಿಯಮವಿದೆ ಎಂದು ನಿಮ್ಮವರೇ ಹೇಳಿದ್ದಾರೆ! ಗುಲಾಮಗಿರಿ' ಬಿಜೆಪಿಗರಿಗೆ ರಕ್ತಗತವಾಗಿ ಬಂದ ಬಳುವಳಿ! ಎಂದು ಟಾಂಗ್ ನೀಡಿದೆ.

ಈ ಸಂಬಂಧ ಮತ್ತೊಂದು ಟ್ವೀಟ್ ಮಾಡಿರುವ ಕೆಪಿಸಿಸಿ , ಬೊಮ್ಮಾಯಿ ಅವರೇ ಬಿಜೆಪಿ ಹಾಗೂ ಬಿಜೆಪಿಯ ಪೂರ್ವಜರ ಗುಲಾಮಗಿರಿ ಎಂತಹದ್ದು ಎಂದು ಜಗತ್ತಿಗೇ ತಿಳಿದಿದೆ. ಅಂದು ಬ್ರಿಟಿಷರ ಕಂಪೆನಿ ಸರ್ಕಾರದ ಗುಲಾಮಗಿರಿ, ಇಂದು ಅಂಬಾನಿ - ಅದಾನಿಯಂತಹವರ ಕಂಪೆನಿಗಳ ಗುಲಾಮಗಿರಿ, ನಿಮ್ಮ ಪಕ್ಷದ ಸಿದ್ಧಾಂತವೇ ಹಿಟ್ಲರ್‌ನ ಗುಲಾಮಗಿರಿಯದ್ದು, ಕಾಂಗ್ರೆಸ್ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ನಿಮಗಿಲ್ಲ ಟ್ವಿಟ್ಟರ್ ನಲ್ಲಿ ತಪರಾಕಿ ಹಾಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?