ಸಿದ್ದರಾಮಯ್ಯ 
ರಾಜಕೀಯ

'ಬಿಜೆಪಿ, ಆರ್‌ಎಸ್‌ಎಸ್ ನವರು ಬ್ರಿಟಿಷರ ಗುಲಾಮರು; ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಬರೆದು ಕೊಟ್ಟ ಹೇಡಿ': ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ಒಬ್ಬ ದೊಡ್ಡ ನಾಟಕಕಾರ. ನಕಲಿ ದೇಶ ಭಕ್ತರು ಇವತ್ತು ನಮ್ಮ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಒಬ್ಬ ದೊಡ್ಡ ನಾಟಕಕಾರ. ನಕಲಿ ದೇಶ ಭಕ್ತರು ಇವತ್ತು ನಮ್ಮ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬರುವುದಕ್ಕೆ ಮೊದಲು ಹುಟ್ಟಿಲ್ಲದವರು ( ಮೋದಿ) ನಮಗೆ ದೇಶಭಕ್ತಿ ಪಾಠ ಹೇಳುತ್ತಾರೆ. ಇವರು ಈ ಹಿಂದೆ ಎಂದಾದರೂ ಆರ್ ಎಸ್ ಎಸ್ ಕಚೇರಿ ಮೇಲೆ ರಾಷ್ಟ್ರ ಧ್ವಜ ಹಾರಿಸಿದ್ದಾರಾ? ಎಂದು ಪ್ರಶ್ನಿಸಿದರು.

ಬಿಜೆಪಿ, ಆರ್‌ಎಸ್‌ಎಸ್ ನವರು ಬಿಟ್ರಿಷರ ಗುಲಾಮರು. ಆರ್‌ಎಸ್‌ಎಸ್1925 ರಲ್ಲೇ ಇತ್ತು. ಜನಸಂಘ 1969 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇದೇ ಗೋಲ್ವಾಲ್ಕರ್, ಸಾರ್ವರ್ಕರ್ ಧ್ವಜ ವಿರೋಧಿಸಿದ್ದರು. ಇಂತಹವರನ್ನು ಹೊತ್ತು ಮೆರೆಯುವವರು ಇವತ್ತು ಹರ್ ಘರ್ ತಿರಂಗಾ ಅಂತ ಆಚರಿಸ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇವರು ತ್ರಿವರ್ಣ ಧ್ವಜ ಹಾರಿಸಿರಲಿಲ್ಲ. ನಾಗಪುರದ ಆರ್‌ಎಸ್‌ಎಸ್ ಕಚೇರಿ ಮೇಲೆ ಹಾರಿಸಿರಲಿಲ್ಲ.ಇದೀಗ ಹರ್ ಘರ್ ತಿರಂಗಾದ ಬಗ್ಗೆ ಮಾತನಾಡುತ್ತಾರೆ. ಸಾವರ್ಕರ್ ಬಿಟ್ರಿಷರಿಗೆ ಕ್ಷಮಾಪ್ಪಣೆ ಬರೆದು ಕೊಟ್ಟ ಹೇಡಿ ಎಂದು ದೂರಿದರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರ ಧ್ವಜ ಮಾರಾಟ ಮಾಡಿ ದೇಶದ ಸ್ವಾತಂತ್ರ್ಯ ಹೋರಾಟಗಾರಿಗೆ ಅಪಮಾನ ಮಾಡಿದೆ ಎಂದು ದೂರಿದರು.

ಅಮೃತ ಮಹೋತ್ಸವದ ಸಂಭ್ರಮದ ವೇಳೆ ಸರ್ಕಾರ ಉಚಿತವಾಗಿ ರಾಷ್ಟ್ರ ಧ್ವಜ ಜನರಿಗೆ ನೀಡಬೇಕಾಗಿತ್ತು. ಆದರೆ 40 ಪರ್ಸೆಂಟ್ ಪಡೆಯುವ ಸರ್ಕಾರ ಇದೀಗ ರಾಷ್ಟ್ರದ್ವಜ ಮಾರಾಟ ಮಾಡಿ ದೆಶಕ್ಕೆ ಅಪಮಾನ ಮಾಡುತ್ತಿದೆ ಎಂದು ತಿಳಿಸಿದರು.

ಕಾಂಗ್ರಸ್ ಪಕ್ಷ 1.5 ಲಕ್ಷ ಧ್ವಜವನ್ನು ಸಾರ್ವಜನಿಕರಿಗೆ ವಿತರಿಸಲಿದೆ. ನಮಗೆ ರಾಷ್ಟ್ರ ಧ್ವಜ ಸ್ವಾಭಿಮಾನದ ಸಂಕೇತ. ರಾಷ್ಟ್ರ ಧ್ವಜ ಮಾರಾಟ ಮಾಡಿ ಬಿಜೆಪಿ ಇಡೀ ದೇಶವನ್ನು ಅಪಮಾನಿಸಿದೆ ಎಂದರು. ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ ಎಂದು ಹೇಳಿದಂತೆ ನಾವೀಗ ಬಿಜೆಪಿಗರೇ ಅಧಿಕಾರ ಬಿಟ್ಟು ತೊಲಗಿ ಎಂದು ಕರೆ ನೀಡುತ್ತಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT