ರಾಜಕೀಯ

ದೇಶ ವಿರೋಧಿ ಪಿಎಫ್ಐ, ಎಸ್ ಡಿಪಿಐಗೆ ಕಾಂಗ್ರೆಸ್ ಬೆಂಬಲ: ಕೆಎಸ್ ಈಶ್ವರಪ್ಪ

Srinivasamurthy VN

ಶಿವಮೊಗ್ಗ: ವಿಡಿ ಸಾವರ್ಕರ್‌ ಪೋಟೋ ವಿವಾದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಪರಿಸ್ಥಿತಿ ಗಂಭೀರವಾಗಿರುವಂತೆಯೇ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ, ದೇಶ ವಿರೋಧಿ ಪಿಎಫ್ಐ, ಎಸ್ ಡಿಪಿಐ ಸಂಘಟನೆಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಗಲಾಟೆ ಬಗ್ಗೆ ಬೆಂಗಳೂರಲ್ಲಿ ಮಾತನಾಡಿರುವ ಈಶ್ವರಪ್ಪ, ಮುಸಲ್ಮಾನ್ ಗೂಂಡಾಗಳಿಗೆ ಕಾಂಗ್ರೆಸ್‌ ಬೆಂಬಲವಿದೆ,  ದೇಶ ವಿರೋಧಿ ಪಿಎಫ್ಐ, ಎಸ್ ಡಿಪಿಐ ಸಂಘಟನೆಗಳಿಗೆ ಆ ಪಕ್ಷದ ನಾಯಕರು ಬೆಂಬಲ ನೀಡುತ್ತಿದ್ದಾರೆ. ಇಡೀ ಹಿಂದೂ ಸಮಾಜ ಎದ್ರೆ ಮುಸಲ್ಮಾನರು ಏನಾಗ್ತಾರೆ? ಆದರೆ ಹಿಂದೂಗಳು ಶಾಂತಿಪ್ರಿಯರು" ಎಂದು ಹೇಳಿದ್ದಾರೆ. 

"ಹಿಂದೂಗಳ ಗಣಪತಿ ಉತ್ಸವಕ್ಕೆ ಅಡ್ಡ ಬಂದ್ರೆ ಸರಿ ಇರಲ್ಲ, ನೀವು ನಿಮ್ಮ ಹಬ್ಬ ಮಾಡಲ್ವಾ? ನಾವು ಬೆಂಬಲ್ ಕೊಡಲ್ವಾ? ನಮ್ಮ ತಂಟೆಗೆ ಬರಬೇಡಿ. ನಮ್ಮ ಸರ್ಕಾರ ಶಾಂತಿ ಕಾಪಾಡಲು ಎಲ್ಲ ಪ್ರಯತ್ನ ಮಾಡುತ್ತಿದೆ. ಎಲ್ಲ ಮುಸ್ಲಿಮರ ಮೇಲೂ ನಾನು ಆರೋಪ ಮಾಡಲ್ಲ, ಆದ್ರೆ ಹಿಂದೂಗಳು ಅಶಕ್ತರಲ್ಲ. ಹಿಂದೂಗಳು ಎದ್ದರೆ ಮುಸಲ್ಮಾನ ಗೂಂಡಾಗಳು ಉಳಿಯಲ್ಲ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು.

ಮುಸಲ್ಮಾನ ಹಿರಿಯರು ಶಾಂತಿ ಕಾಪಾಡಲು ಹಿಂದೆಲ್ಲಾ ಶ್ರಮಿಸಿದ್ದಾರೆ. ಈಗ ಮುಸ್ಲಿಮ್ ಸಮುದಾಯದ ಹಿರಿಯರು ನಿಮ್ಮ ಯುವಕರಿಗೆ ಬುದ್ಧಿವಾದ ಹೇಳಬೇಕು. ಇಲ್ಲದಿದ್ರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಮುಸಲ್ಮಾನ ಗೂಂಡಾಗಳ ಮನಸ್ಥಿತಿ ಇನ್ನೂ ಬದಲಾಗಿಲ್ಲ. ಹಿಂದೂಗಳ ಮೇಲಿನ ಅವರ ಭಾವನೆ ಇನ್ನೂ ಬದಲಾಗಿಲ್ಲ. ಅವರ ಚಟುವಟಿಕೆ ಜಾಸ್ತಿಯಾಗಿದೆ, ಹೀಗಾಗಿ ಕೊಲೆ, ಗಲಭೆ ಹೆಚ್ಚಾಗಿದೆ ಎಂದ ಅವರು ಇಡೀ ಹಿಂದೂ ಸಮಾಜ ಎದ್ದರೆ ಮುಸಲ್ಮಾನರು ಏನಾಗ್ತಾರೆ? ಎಂದು ಸವಾಲು ಹಾಕಿದರು.

ಮುಸ್ಲಿಂ ಗೂಂಡಾಗಳಿಗೆ ಕಾಂಗ್ರೆಸ್ ಬೆಂಬಲ ಇದೆ. ಇದು ಕಾನೂನು ಸುವ್ಯವಸ್ಥೆಯ ವೈಫಲ್ಯವಲ್ಲ, ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ವೈಫಲ್ಯ ಆಗಿಲ್ಲ. ಪದೇಪದೇ ಈತರದ ಘಟನೆ ಆಗ್ತಿದ್ರೂ ವೈಫಲ್ಯ ಆಗಿಲ್ಲ. ಸರ್ಕಾರ ಎಲ್ಲ ಕಠಿಣ ಕ್ರಮ ತಗೆದುಕೊಳ್ಳುತ್ತಿದೆ ಎಂದರು. ಹಿಂದೂಗಳ ಗಣಪತಿ ಉತ್ಸವಕ್ಕೆ ಅಡ್ಡ ಬಂದರೆ ಸರಿ ಇರಲ್ಲ. ನೀವು ನಿಮ್ಮ ಹಬ್ಬ ಮಾಡಲ್ವ? ನಾವು ಬೆಂಬಲ ಕೊಡಲ್ವಾ? ಅದೇ ರೀತಿಯಲ್ಲಿ ನಮ್ಮ ಹಬ್ಬದ ತಂಟೆಗೆ ಬರಬೇಡಿ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು.

ಮಾಧುಸ್ವಾಮಿ ಹೇಳಿಕೆ ತಪ್ಪು
ಇನ್ನು ಇದೇ ಸಂದರ್ಭದಲ್ಲಿ ಸರ್ಕಾರ ನಡಿಯುತ್ತಿಲ್ಲ ಬದಲಾಗಿ ಮ್ಯಾನೇಜ್ ಮಾಡ್ತಿದೀವಿ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಮಾಧುಸ್ವಾಮಿ ಹೇಳಿದ್ದು ತಪ್ಪು, ಅವರು ಯಾಕೆ ಹಾಗೆ ಹೇಳಿದ್ರೋ ಗೊತ್ತಿಲ್ಲ. ಅವರು ಹಾಗೆ ಯಾವ ಸಂದರ್ಭದಲ್ಲಿ ಹೇಳಿದ್ರೋ ಗೊತ್ತಿಲ್ಲ. ಅವರ ಜತೆ ನಾನು ವೈಯಕ್ತಿಕವಾಗಿ ಮಾತಾಡ್ತೀನಿ ಹಾಗೂ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದರು. 

ಶಿವಮೊಗ್ಗದಲ್ಲಿ 2 ದಿನಗಳ ಹಿಂದೆ ಆರಂಭವಾಗಿದ್ದ ವೀರ ಸಾವರ್ಕರ್‌ ಪೋಟೋ ವಿವಾದ ಮತ್ತೆ ಭುಗಿಲೆದ್ದಿದೆ. ಗಾಂಧಿ ಬಜಾರಿನ ಉಪ್ಪಾರ ಕೇರಿಯಲ್ಲಿ ಯುವಕನೊಬ್ಬನಿಗೆ ಚಾಕು ಇರಿಯಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 
 

SCROLL FOR NEXT