ಮಂಜುನಾಥ್ ಪ್ರಸಾದ್ 
ರಾಜಕೀಯ

ರಾಜಕಾರಣಕ್ಕೆ ಕಂದಾಯ ಸಚಿವರ ಕ್ಲಾಸ್ ಮೇಟ್: ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸ್ಪರ್ಧೆ!

1994ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಎನ್‌ ಮಂಜುನಾಥ್‌ ಪ್ರಸಾದ್‌ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಬೆಂಗಳೂರು: 1994ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಎನ್‌ ಮಂಜುನಾಥ್‌ ಪ್ರಸಾದ್‌ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಇದರ ಬೆನ್ನಲ್ಲೆ ಭಾನುವಾರ ತುಮಕೂರಿನಲ್ಲಿ ನಡೆದ ಭೋವಿ ಸಮುದಾಯದ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ  ಮಂಜುನಾಥ್ ಪ್ರಸಾದ್‌ ಅವರನ್ನು ಹೊಗಳಿದ್ದಾರೆ. ಎಂತಹ ಸಂದರ್ಭವನ್ನೂ ಕೂಡ ಎದುರಿಸುವ ಸಾಮರ್ಥ್ಯ ಅವರಿಗಿದೆ. ಅವರು ಈ ಹುದ್ದೆಯನ್ನ ಕೇಳಿರಲಿಲ್ಲ, ನಾನೇ ಕರೆದು ಕೊಟ್ಟಿದ್ದೇನೆ. ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಮಾಡುವ ವ್ಯಕ್ತಿ ಮಂಜುನಾಥ್ ಪ್ರಸಾದ್‌. ವೆಸ್ಟ್ ಬೆಂಗಾಲ್ ನಲ್ಲಿ ಅವರು ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಅವರ ಯಶೋಗಾಥೆಯನ್ನು ನೀವು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದರು.

ಪ್ರಸಾದ್ ರಾಜಕೀಯ ಸಂಪರ್ಕ ಹೊಂದಿದ್ದಾರೆ. ಕಂದಾಯ ಸಚಿವ ಆರ್.ಅಶೋಕ ಅವರ ಸಹಪಾಠಿಯಾಗಿದ್ದರು. ಅವರ ಅತ್ತೆ ಮಂಗಮ್ಮ ಮುನಿಸ್ವಾಮಿ ಅವರು ಕೋಲಾರ ಜಿಪಂ ಮಾಜಿ ಅಧ್ಯಕ್ಷರಾಗಿದ್ದರು ಮತ್ತು ಅವರ ಮಾವ ಮುನಿಸ್ವಾಮಿ ಐಎಎಸ್ ಅಧಿಕಾರಿಯಾಗಿದ್ದರು ಎಂದು ಮಾಹಿತಿ ನೀಡಿದರು.

ಹಳೇ ಮೈಸೂರು ಭಾಗದ ಕೊರಟಗೆರೆ, ನೆಲಮಂಗಲ, ಆನೇಕಲ್, ಕೆಜಿಎಫ್ ಸೇರಿದಂತೆ ಯಾವುದೇ ಎಸ್‌ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಭರವಸೆ ನೀಡಿದರೆ  ಮಂಜುನಾಥ್ ಪ್ರಸಾದ್ ವಿಆರ್‌ಎಸ್ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್.ಅನಿಲ್ ಕುಮಾರ್ ಈಗಾಗಲೇ ಕೊರಟಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರಚಾರ ನಡೆಸಿದ್ದಾರೆ. ಹೀಗಾಗಿ, ಮಂಜುನಾಥ್ ಪ್ರಸಾದ್ ಅವರು ಬೇರೆ ಕ್ಷೇತ್ರ ಹುಡುಕಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.

ರಾಜಕೀಯ ಅವರನ್ನು ಸದ್ಯಕ್ಕೆ ಬೆಂಬಲಿಸುತ್ತಿರಬಹುದು, ಆದರೆ ಅವರ ಸ್ಥಾನಮಾನಕ್ಕೆ ಹೊಂದುವಂತ, ಜಾತಿ ಸಮೀಕರಣ ಲೆಕ್ಕಾಚಾರದಲ್ಲಿ ಅವರು ಕ್ಷೇತ್ರ ಆಯ್ಕೆ ಮಾಡಬೇಕಾಗ ಅವಶ್ಯಕತೆಯಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನೂ ಈ ವಿಷಯದ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಎನ್.ಮಂಜುನಾಥ್ ಪ್ರಸಾದ್ ರಾಜಕೀಯ ಸೇರುವ ವದಂತಿಗಳ ಬಗ್ಗೆ ತೆರೆ ಎಳೆದಿದ್ದಾರೆ. ನನಗೆ ಇನ್ನೂ 2.5 ವರ್ಷಗಳ ಸೇವಾವಧಿ ಬಾಕಿಯಿದೆ, ಹೀಗಿರುವಾಗ ನಾನು ವಿಆರ್ ಎಸ್ ಏಕೆ ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 469ಕ್ಕೆ ಏರಿಕೆ; 1,400ಕ್ಕೂ ಹೆಚ್ಚು ಜನ ನಾಪತ್ತೆ, ಮತ್ತೊಂದು ಪ್ರವಾಹದ ಭೀತಿ..!

US-Iran ಸಂಘರ್ಷ ಉಲ್ಬಣ: ನೌಕಾ ದಿಗ್ಬಂಧನ ಮುಂದುವರಿದರೆ ಶೇ.100ರಷ್ಟು ಪ್ರತೀಕಾರ; ‘ನೆತನ್ಯಾಹು ನರಕಕ್ಕೆ’: ಟ್ರಂಪ್‌ಗೆ Tehran ಖಡಕ್ ಎಚ್ಚರಿಕೆ

ಪ್ರವಾಹದ ಅಬ್ಬರಕ್ಕೆ ನೇಪಾಳ ತತ್ತರ; ಸಂಪರ್ಕಕ್ಕೆ ಸಿಗದೆ 290 ಭಾರತೀಯರು, ರಕ್ಷಣಾ ಕಾರ್ಯಾಚರಣೆ ಚುರುಕು..!

ರಕ್ಷಾ ಬಂಧನದ ಇತಿಹಾಸ ಏನು? ಸಹೋದರರಿಗೆ ರಾಖಿ ಕಟ್ಟುವುದರ ಮಹತ್ವ ತಿಳಿದುಕೊಳ್ಳಿ!

ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿ ಗುಂಡಿನ ಸದ್ದು; ಮಾರಕಾಸ್ತ್ರ ಹಿಡಿದು ಅಬ್ಬರಿಸುತ್ತಿದ್ದ ರೌಡಿಶೀಟರ್ ಹೆಡೆಮುರಿ ಕಟ್ಟಿದ ಬೆಂಗಳೂರಿನ ಪೊಲೀಸರು