ರಾಜಕೀಯ

'ಉತ್ತರ ಕರ್ನಾಟಕದಲ್ಲಿ ಬಿಜೆಪಿ‌ ಪಕ್ಷಕ್ಕೆ ವಿಜಯನಗರ ರಾಜಧಾನಿ ಆಗುತ್ತದೆ ಎಂಬರ್ಥದಲ್ಲಿ ನಾನು ಹೇಳಿದ್ದು': ಸಚಿವ ಆನಂದ್ ಸಿಂಗ್

Sumana Upadhyaya

ಮಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುತ್ತದೆ, ಪ್ರತ್ಯೇಕ ರಾಜ್ಯವಾದರೆ ವಿಜಯನಗರ ರಾಜಧಾನಿ ಆಗುತ್ತದೆ ಎಂದು ಹೇಳಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದರು. ವ್ಯಾಪಕ ಸುದ್ದಿಯಾಗಿತ್ತು. ಇದೀಗ ಉಲ್ಟಾ ಹೊಡೆದಿದ್ದಾರೆ.

ಇಂದು ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಸಂದದರ್ಭದಲ್ಲಿ (Dharmasthala) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮ ಸ್ನೇಹಿತರು ನನ್ನ ಹೇಳಿಕೆಯನ್ನ ಸರಿಪಡಿಸಿಕೊಳ್ಳಬೇಕು. ಉತ್ತರ ಕರ್ನಾಟಕ (North Karnataka) ರಾಜ್ಯ ಆಗುತ್ತದೆ, ವಿಜಯನಗರ (Vijayanagara) ರಾಜಧಾನಿ ಆಗುತ್ತದೆ ಅಂತ ಹೇಳಿಲ್ಲ. ಉತ್ತರ ಕರ್ನಾಟಕದಲ್ಲಿ ಬಿಜೆಪಿ‌ ಪಕ್ಷಕ್ಕೆ ವಿಜಯನಗರ ರಾಜಧಾನಿ ಆಗುತ್ತದೆ ಎಂಬರ್ಥದಲ್ಲಿ ನಾನು ಹೇಳಿದ್ದು ಎಂದರು. 

ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ವಿಜಯನಗರ ರಾಜಧಾನಿಯಾದರೆ, ಜಿಲ್ಲಾ ಕೇಂದ್ರ ಯಾವುದಾಗುತ್ತದೆ ಅಂದರೆ ರಾಯಚೂರು, ಬೀದರ್, ಗುಲ್ಬರ್ಗಾ, ಹೊಸಪೇಟೆ, ಬಳ್ಳಾರಿ. ಉತ್ತರ ಕರ್ನಾಟಕ ಅಂದರೆ ನಮ್ಮದು ಕಲ್ಯಾಣ ಕರ್ನಾಟಕ. ಕಲ್ಯಾಣ ಕರ್ನಾಟಕಕ್ಕೆ ವಿಜಯನಗರ ರಾಜಧಾನಿ ಆಗುತ್ತದೆ ಅನ್ನೋ ಅರ್ಥದಲ್ಲಿ ಹೇಳಿದ್ದು. ಪ್ರತ್ಯೇಕ ರಾಜ್ಯ ಆಗುತ್ತದೆ ಅನ್ನೋದನ್ನ ಮಾಧ್ಯಮದವರು ಸರಿಪಡಿಸಬೇಕು ಎಂದರು.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಭಟ್ಟರಳ್ಳಿ ಗ್ರಾಮದ ಆಂಜನೇಯ ದೇಗುಲದ ಬಳಿ ಮೊನ್ನೆ ಡಿಸೆಂಬರ್ 15ರಂದು ಬಿಜೆಪಿ ಕಚೇರಿ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಮಾತನಾಡಿದ್ದ ಆನಂದ್ ಸಿಂಗ್, ಜಿಲ್ಲಾ ಕೇಂದ್ರದಲ್ಲಿ ಅರ್ಧ ಎಕರೆ ಪ್ರದೇಶದಲ್ಲಿ ಜಿಲ್ಲಾ ಕಚೇರಿ ಕಾಮಗಾರಿ ಆರಂಭವಾಗಿದೆ. ವಿಜಯನಗರ ಸಾಮ್ರಾಜ್ಯ ನೆಲದ ಗುಣವೇ ವಿಶೇಷ. ಆದ್ದರಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ನೂತನ ವಿಜಯನಗರ ಜಿಲ್ಲೆ ರಾಜಧಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಿಕೆ ನೀಡಿದ್ದರು. 

SCROLL FOR NEXT